ಮುನ್ನೂರುಕಾಪು ಬಲಿಜ ಸಮಾಜ : ಪುಟ್ಟಿ ಜಾತ್ರೆ

ರಾಯಚೂರು.ಸೆ.08- ವರುಣನ ಕೃಪೆಗೆ ಪ್ರಾರ್ಥಿಸಿ ನಗರದ ಮುನ್ನೂರುಕಾಪು ಬಲಿಜ ಸಮಾಜದಿಂದ ಪುಟ್ಟಿಜಾತ್ರೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ನಿನ್ನೆ ಮಧ್ಯಾಹ್ನ 2 ಕ್ಕೆ ಸ್ಥಳೀಯ ಮುನ್ನೂರುವಾಡಿಯ ಲಕ್ಷ್ಮಮ್ಮ ದೇವಸ್ಥಾನದಿಂದ ದೇವಿ ಮೂರ್ತಿ ಪಲ್ಲಕ್ಕಿಯೊಂದಿಗೆ ಭಜನೆ ಮಾಡುತ್ತಾ, ಪಾದಯಾತ್ರೆ ಮೂಲಕ ಗದ್ವಾಲ್ ರಸ್ತೆಯ ಲಕ್ಷ್ಮಮ್ಮ ದೇವಸ್ಥಾನಕ್ಕೆ ತೆರಳಿ ದೇವಿಗೆ ಪೂಜೆ, ನೈವೇದ್ಯ ಅರ್ಪಿಸಿ ಸಮೃದ್ಧ ಮಳೆಗಾಗಿ ಪ್ರಾರ್ಥಿಸಲಾಯಿತು. ಮಹಿಳೆಯರು ಪುಟ್ಟಿಗಳಲ್ಲಿ ಸಿಹಿ ತಿಂಡಿ ತಿನಿಸುಗಳನ್ನು ತುಂಬಿಕೊಂಡು ತಲೆಮೇಲೆ ಹೊತ್ತು ಪಲ್ಲಕ್ಕಿ, ಭಜನೆ ಮೂಲಕ ಗದ್ವಾಲ್ ರಸ್ತೆಯ ಶ್ರೀ ಲಕ್ಷ್ಮಮ್ಮ ದೇವಿ ದೇವಸ್ಥಾನಕ್ಕೆ ತೆರಳಿ ಅಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿ ಮಳೆಗಾಗಿ ಪ್ರಾರ್ಥಿಸಿದರು.
ಜಾತ್ರೆಯಲ್ಲಿ ಸಮಾಜದ ಪ್ರಮುಖರಾದ ಬೆಲ್ಲಂ ನರಸರೆಡ್ಡಿ, ಎ.ಪಾಪಾರೆಡ್ಡಿ ನೇತೃತ್ವದಲ್ಲಿ ಸಮಾಜದ ಹಿರಿಯರು, ಯುವಕರು, ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Comment