ಮುನ್ನಾರ್‌ನಲ್ಲಿ 79 ಪ್ರವಾಸಿಗರಿಗೆ ಸಂಕಷ್ಟ

ಮುನ್ನಾರ್ (ಕೇರಳ), ಆ. ೧೦- ಕೇರಳದ ವಿವಿಧೆಡೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಪ್ರಮುಖ ಪ್ರವಾಸಿ ತಾಣ ಮುನ್ನಾರ್‌ನಲ್ಲಿ 79 ಪ್ರವಾಸಿಗಳು ಸಿಕ್ಕಿಹಾಕಿಕೊಂಡಿದ್ದಾರೆ.

ರೆಸಾರ್ಟ್‌ನಿಂದ ಹೊರಗೂ ಬರಲಾರದೆ, ಒಳಗೂ ಇರಲಾರದೆ ಸಿಕ್ಕಿಹಾಕಿಕೊಂಡಿದ್ದಾರೆ. ಬೆಟ್ಟ, ಗುಡ್ಡ ಪ್ರದೇಶವಾದ ನಿತ್ಯ ಹರಿದ್ವರ್ಣದ ಮುನ್ನಾರ್‌ನಲ್ಲಿ ಪ್ರವಾಸಿಗರು ಸಿಲುಕಿಕೊಂಡಿದ್ದು, ಅವರ ರಕ್ಷಣೆಗೆ ಅಲ್ಲಿನ ಸರ್ಕಾರ ಹರಸಾಹಸ ನಡೆಸುತ್ತಿದೆ.

ಮುನ್ನಾರ್‌ನ ಚಹಾ ತೋಟ ಮತ್ತು ನಿಸರ್ಗದ ರಮಣೀಯ ಕೇಂದ್ರ ಅನುಭವಿಸಲು ತೆರಳಿದ್ದ ಜನರು, ತೊಂದರೆಗೆ ಸಿಲುಕುವಂತಾಗಿದೆ. ಕಳೆದ ಹಲವು ದಿನಗಳಿಂದ ಕೇರಳದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸತ್ತವರ ಸಂಖ್ಯೆ 26ಕ್ಕೇರಿದೆ.

ವೈನಾಡು, ಕೋಳಿಕೋಡು, ಕೊಚ್ಚಿ, ತಿರುವನಂತಪುರಂ ಸೇರಿದಂತೆ, ಹಲವು ಭಾಗಗಳಲ್ಲಿ ಮಳೆ ಆರ್ಭಟಿಸಿದೆ. ಇದರ ಪರಿಣಾಮ ಪ್ರವಾಹದ ಭೀತಿ ಎದುರಾಗಿದೆ. ಇಡುಕಿ ಜಲಾಶಯ ಸೇರಿದಂತೆ, 26 ಜಲಾಶಯಗಳಿಂದ ಏಕಕಾಲಕ್ಕೆ ನೀರು ಬಿಟ್ಟಿರುವುದರಿಂದ ಪ್ರವಾಹದ ಭೀತಿ ಎದುರಾಗಿದೆ.

ಕೊಚ್ಚಿ,ತ್ರಿವೇಂಡ್ರಮ್ ಸೇರಿದಂತೆ, ವಿವಿಧೆಡೆ ವಿಮಾನ ನಿಲ್ದಾಣಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ವಿಮಾನ ನಿಲ್ದಾಣದ ರನ್ ವೇನಲ್ಲಿ ಜಲಸಾಗರವೇ ತುಂಬಿದೆ.

Leave a Comment