ಮುದುವೆಗೆ ಅಧಿಕೃತ ಮುದ್ರೆ ನಾಗಚೈತನ್ಯ-ಸಮಂತಾ ಹೊಸಬಾಳಿಗೆ ಮುನ್ನುಡಿ

ತೆಲುಗು ಚಿತ್ರರಂಗದ ಯುವ ಜೋಡಿಗಳಾದ ನಾಗಚೈತನ್ಯ ಮತ್ತು ಸಮಂತ ರೂತ್ ಪ್ರಭು ಮದುವೆಯಾಗಲಿದ್ದರೆ ಎನ್ನುವ ಬಹುದಿನಗಳ ಪಿಸು ಪಿಸುಗೆ ಈಗ ಅಧಿಕೃತವಾಗಿ ಮುದ್ರೆ ಬಿದ್ದಿದೆ.

 

ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ತೆಲುಗಿನ ಯುವ ಜೋಡಿಗಳಾದ ಸಮಂತಾ ರೂತ್ ಪ್ರಭು ಮತ್ತು ನಾಗಚೈತನ್ಯ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಮದುವೆಗೆ ಮುನ್ನುಡಿ ಬರೆದಿದ್ದಾರೆ. ಈ ವರ್ಷವೇ ಈ ಜೋಡಿ ಹಸೆಮಣೆ ಏರಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ.ನಿಶ್ಚಿತಾರ್ಥದಲ್ಲಿ ಎರಡೂ ಕುಟುಂಬದ ಸದಸ್ಯರು, ಆಪ್ತರು, ಚಿತ್ರರಂಗದ ಕೆಲವೇ ಕೆಲವು ಮಂದಿ ಭಾಗಿಯಾಗಿದ್ದರು.

ಈ ಜೊಡಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹಸೆಮಣೆ ಏರಲು ಮುಂದಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಈ ವರ್ಷಾಂತ್ಯದಲ್ಲಿ ಮದುವೆಯಾಗುವುದು ಬಹುತೇಕ ಖಚಿತವಾಗಿದೆ.
ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲ ಗುಸು ಗುಸು ಪಿಸು ಮಾತಿಗೆ ಅಂತ್ಯವಾಡಿದ್ದು ನಾವಿಬ್ಬರೂ ಸದ್ಯದಲ್ಲಿಯೇ ಮದುವೆಯಾಗುವ ಮುನ್ಸೂಚನೆ ನೀಡಿದ್ದಾರೆ.
ಕಿರಿಯ ಪುತ್ರನ ಮದುವೆ ಮಾಡಿದ್ದ ನಟ ಅಕ್ಕಿನೇನಿ ನಾಗಾರ್ಜುನ ಅವರು ಹಿರಿಯ ಪುತ್ರ ನಾಗ ಚೈತನ್ಯ ಅವರಿಗೆ ಮದುವೆ ಮಾಡಲು ಸಿದ್ದತೆ ಮಾಡಿಕೊಂಡಿದ್ದರು. ಜೊತೆಗೆ ತೆಲುಗು ಚಿತ್ರರಂಗ ಮಂದಿ ಸೇರಿದಂತೆ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಗಳಿಗೆ ಕಡೆಗೂ ಕೂಡಿ ಬಂದಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ನಾಗಚೈತನ್ಯ ಮತ್ತು ಸಮಂತಾ ಅವರು ವರ್ಷಾಂತ್ಯದಲ್ಲಿ ಮದುವೆಯಾಗಲಿದೆ.
ಇತ್ತೀಚೆಗೆ ನಡೆದ ವಿವಾಹ ನಿಶ್ಚಿತಾರ್ಥದಲ್ಲಿ ತೆಲುಗು ಮತ್ತು ತಮಿಳು ಚಿತ್ರರಂಗದ ಆಪ್ತರು, ಎರಡೂ ಕುಟುಂಬದ ಸದಸ್ಯರು ಸೇರಿದಂತೆ ಕೆಲವೇ ಕೆಲವು ಮಂದಿ ಆಪ್ತರಿಗೆ ಅವಕಾಶ ನೀಡಲಾಗಿತ್ತು.
ನಿಶ್ಚಿತಾರ್ಥ ಸಮಾರಂಭದಲ್ಲಿ ಸಮಂತಾ ಬಿಳಿ ಮತ್ತು ಚಿನ್ನದ ಬಣ್ಣದ ದಿರಿಸಿನಲ್ಲಿ ಕಂಗೊಳಿಸಿದರೆ ನಾಗಚೈತನ್ಯ ನೀಲಿ ಬಣ್ಣದ ಸೂಟ್‌ನಲ್ಲಿ ಮಿಂಚಿದರು.ಸದ್ಯದಲ್ಲಿಯೇ ಮದುವೆ ದಿನಾಂಕವನ್ನು ತಿಳಿಸುತ್ತೇವೆ. ಚಿತ್ರರಂಗದ ಗಣ್ಯರು, ಅಭಿಮಾನಿಗಳೂ ಸೇರಿದಂತೆ ಪ್ರೀತಿಸುವ ಎಲ್ಲರಿಗೂ ಮದುವೆಗೆ ಮುಕ್ತ ಅವಕಾಶವಿರಲಿದೆ ಎಂದು ಯುವ ಜೋಡಿಗಳಾದ ನಾಗಚೈತನ್ಯ ಮತ್ತು ಸಮಂತಾ ಹೇಳಿದ್ದಾರೆ.

Leave a Comment