ಮುಟ್ಟಿನ ದಿನಗಳಲ್ಲಿ ಇದನ್ನು ಪಾಲಿಸಿ

ಹಿಂದಿನ ದಿನಗಳಲ್ಲಿ ಮಾಸಿಕ ದಿನಗಳಲ್ಲಿ ಮಹಿಳೆಯರನ್ನು ಒಂದು ಕೋಣೆಯಲ್ಲಿ ಪ್ರತ್ಯೇಕವಾಗಿರಿಸಲಾಗುತ್ತಿತ್ತು. ಆ ದಿನಗಳಲ್ಲಿ ಮನೆಕೆಲಸದಿಂದ ವಿಶ್ರಾಂತಿ ಪಡೆಯಲು ಸಾಧ್ಯವಾಗುವಂತೆ ಈ ವ್ಯವಸ್ಥೆ ಮಾಡಲಾಗಿತ್ತು. ಇಂದು ಆ ಪದ್ಧತಿ ಇಲ್ಲವಾದರೂ ವಿಶ್ರಾಂತಿ ಮಾತ್ರ ಅಗತ್ಯವಾಗಿದೆ. ಗೃಹಿಣಿಯರಿಗೆ ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಕೆಲಸವಿಲ್ಲದ ದಿನಗಳೇ ಇಲ್ಲ. ಈ ದಿನಗಳಲ್ಲಿಯೂ ನಿತ್ಯದ ಕೆಲಸವನ್ನು ನಿರ್ವಹಿಸಲೇಬೇಕಾದ ಅನಿವಾರ್ಯತೆ ಇಂದಿನ ಮಹಿಳೆಯರಿಗಿದೆ.
ಮುಟ್ಟಿನ ದಿನ ಹೊಟ್ಟೆ ಕಿವುಚಿದಂತೆ, ಒಂದು ಕಡೆಯಿಂದ ಎಳೆದಂತೆ ನೋವಾಗುತ್ತದೆ. ಇವೆಲ್ಲವೂ ನಿಸರ್ಗನಿಯಮವಾಗಿದ್ದು ಕೊಂಚ ನೋವನ್ನು ಅನುಭವಿಸುವುದು ಅನಿವಾರ್ಯ. ಆದರೆ ಈ ನೋವನ್ನು ಕಡಿಮೆಯಾಗಿಸಲು ಮತ್ತು ಕಡಿಮೆ ಅವಧಿಗೆ ಮೀಸಲಿರಿಸಲು ನಿಮ್ಮ ಆಹಾರಕ್ರಮ ಮುಖ್ಯಪಾತ್ರ ವಹಿಸುತ್ತದೆ.
ಈ ಸಮಯದಲ್ಲಿ ಊಟ ಮಾಡಿದರೆ ಇನ್ನಷ್ಟು ಹೆಚ್ಚುತ್ತದೆ ಎಂಬ ಕಾರಣ ನೀಡಿ ಕೆಲವರು ಊಟವನ್ನೇ ಮಾಡುವುದಿಲ್ಲ. ಆದರೆ ವಾಸ್ತವದಲ್ಲಿ ಈ ದಿನಗಳಲ್ಲಿ ದೇಹ ಹೆಚ್ಚಿನ ರಕ್ತವನ್ನೂ, ಈ ರಕ್ತವನ್ನು ದೂಡಲು ಶಕ್ತಿಯನ್ನೂ ಕಳೆದುಕೊಂಡಿರುವುದರಿಂದ ಇವುಗಳನ್ನು ಮರುಪೂರೈಸಲು ನಿಮಗೆ ಇತರ ದಿನಕ್ಕಿಂತಲೂ ಕೊಂಚ ಹೆಚ್ಚಿನ ಮತ್ತು ಪೌಷ್ಟಿಕ ಆಹಾರ ಬೇಕಾಗಿರುತ್ತದೆ. ಆದ್ದರಿಂದ ಊಟ ಬಿಡಲೇಬಾರದು. ಒಂದು ವೇಳೆ ನೀವು ನಿತ್ಯವೂ ವ್ಯಾಯಾಮ ಮಾಡುವವರಾಗಿದ್ದರೆ ಈ ದಿನಗಳಲ್ಲಿ ನಿಮ್ಮ ವ್ಯಾಯಾಮವನ್ನು ಕೇವಲ ಕೈ ಕಾಲುಗಳಿಗೆ ಮಾತ್ರ ಸೀಮಿತವಾಗಿರಿಸಬೇಕು. ಏಕೆಂದರೆ ಈ ದಿನಗಳಲ್ಲಿ ಬೆನ್ನು ಮತ್ತು ಹೊಟ್ಟೆಯ ಭಾಗಗಳಲ್ಲಿ ಹೆಚ್ಚಿನ ನೋವಿದ್ದು ತೀರಾ ಸೂಕ್ಷ್ಮಸಂವೇದಿಯಾಗಿರುತ್ತದೆ. ಆದ್ದರಿಂದ ಸೊಂಟ ಬಗ್ಗಿಸುವ ಯಾವುದೇ ವ್ಯಾಯಾಮ ಬೇಡ.
ಆರ್ಡರ್ ಮಾಡಿದ ತಕ್ಷಣ ಬರುತ್ತದೆ ಎಂಬ ಕಾರಣ ನೀಡಿ ಈ ದಿನಗಳಲ್ಲಿ ಸಿದ್ಧ ಆಹಾರಗಳನ್ನು ಕೊಳ್ಳಬೇಡಿ. ಏಕೆಂದರೆ ಈ ಆಹಾರಗಳು ಅನಾರೋಗ್ಯಕರವಾಗಿದ್ದು ವಿಶೇಷವಾಗಿ ಈ ದಿನಗಳಲ್ಲಿ ಅನಗತ್ಯ ಮತ್ತು ವಿಷಕಾರಿ ಅಂಶಗಳನ್ನು ದೇಹಕ್ಕೆ ಸೇರಿಸುವ ಮೂಲಕ ಆರೋಗ್ಯವನ್ನು ಕೆಡಿಸಬಹುದು.
ನಿಮ್ಮ ಉದ್ಯೋಗ ಅಥವಾ ಬೇರಾವುದೋ ಕಾರಣದಿಂದ ರಾತ್ರಿ ಎಚ್ಚರಿರಬೇಕಾದ ಅನಿವಾರ್ಯತೆ ಇದ್ದರೂ ನಿದ್ದೆಗೆಡಬಾರದು. ವಾಸ್ತವದಲ್ಲಿ ಈ ದಿನಗಳಲ್ಲಿ ಒಂಬತ್ತು, ಅತಿ ತಡವೆಂದರೆ ಹತ್ತು ಘಂಟೆಗೇ ಮಲಗಿಬಿಡಬೇಕು. ಇದರಿಂದ ರಾತ್ರಿ ಹೊತ್ತಿನಲ್ಲಿ ದೇಹಕ್ಕೆ ಉಳಿದ ಕೆಲಸಗಳನ್ನು ಪೂರೈಸಿಕೊಳ್ಳಲು ಹೆಚ್ಚಿನ ಸಮಯಾವಕಾಶ ದೊರಕುತ್ತದೆ.
ಈ ಸಮಯದಲ್ಲಿ ಸೌತೆಕಾಯಿಯ ಸೇವನೆ ಸಲ್ಲದು. ಏಕೆಂದರೆ ಇದರಲ್ಲಿರುವ ಪೋಷಕಾಂಶಗಳು ಮತ್ತು ವಿಶೇಷವಾಗಿ ಹೆಚ್ಚಿನ ಪ್ರಮಾಣದ ನೀರು, ಗರ್ಭಕೋಶದ ಗೋಡೆಯಲ್ಲಿ ನೀರು ನಿಲ್ಲಲು ಕಾರಣವಾಗುತ್ತವೆ ಹಾಗೂ ಇದು ಸ್ರಾವವನ್ನು ಇನ್ನೂ ಹೆಚ್ಚಿನ ಕಾಲ ಮುಂದುವರೆಸಲು ಕಾರಣವಾಗುತ್ತದೆ.
ಐಸ್ ಸೇರಿಸಿದ, ಸೋಡಾ ಅಥವಾ ಬುರುಗುಬರುವ ಯಾವುದೇ ಪಾನೀಯವನ್ನು ಈ ದಿನಗಳಲ್ಲಿ ಕುಡಿಯದಿರಿ. ಇವೂ ಗರ್ಭಕೋಶದ ಗೋಡೆಯಲ್ಲಿ ಹೆಚ್ಚಿನ ನೀರನ್ನು ಹಿಡಿದಿಟ್ಟುಕೊಳ್ಳಲು ನೆರವಾಗುವ ಕಾರಣ ಸ್ರಾವ ಹೆಚ್ಚು ಕಾಲ ಮುಂದುವರೆಯುತ್ತದೆ.
ಅಲ್ಲದೇ ಸತತವಾಗಿ ಕುಡಿಯುತ್ತಿರುವವರಲ್ಲಿ ಐದರಿಂದ ಹತ್ತು ವರ್ಷದ ಬಳಿಕ ಗರ್ಭಗೋಶದ ಗೋಡೆಯಲ್ಲಿ ಗಡ್ಡೆ, ಕ್ಯಾನ್ಸರ್ ಅಥವಾ ದುರ್ಮಾಂಸ ಬೆಳೆಯಲು ಕಾರಣವಾಗಬಹುದು.

Leave a Comment