ಮುಜುಗರ ಅನುಭವಿಸಿದ ಸನ್ನಿ ಶಾರುಖ್ ಭೇಟಿಯ ಸತ್ಯ ಬಿಚ್ಚಿಟ್ಟ ಬಿಚ್ಚಮ್ಮ

ನೀಲಿ ಚಿತ್ರಗಳಲ್ಲಿ ನಟಿಸುತ್ತಲೇ ಬಾಲಿವುಡ್ ಅಂಗಳ ಪ್ರವೇಶಿಸಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡ ಸನ್ನಿ ಲಿಯೋನ್‌ಗೆ ಬಾಲಿವುಡ್ ಬಾದ್‌ಶಾ ಶಾರುಖ್‌ಖಾನ್ ಜೊತೆ ನಟಿಸುವ ಅವಕಾಶ ಸಿಕ್ಕಿರುವುದು ಸ್ವರ್ಗಕ್ಕೆ ಕೈಗೆ ಸಿಕ್ಕಂತಾಗಿದೆ.

ಶಾರುಖ್ ಖಾನ್ ಅವರನ್ನು “ರಾಯೀಸ್” ಚಿತ್ರದ ಸೆಟ್‌ನಲ್ಲಿ ಮೊದಲ ಭಾರಿಗೆ ಭೇಟಿ ಮಾಡಿದ್ದಾಗ ನನ್ನ ಹಿನ್ನೆಲೆಯ ಬಗ್ಗೆ ಶಾರುಖ್ ಏನು ಅಂದುಕೊಳ್ಳುತ್ತಾರೋ ಎನ್ನುವ ಅನುಮಾನ ನನ್ನನ್ನು ಮುಜುಗರಕ್ಕೆ ಸಿಲುಕುವಂತೆ ಮಾಡಿತ್ತು.ಭೇಟಿಯ ವೇಳೆ ಅವರೊಂದಿಗೆ ನಡೆದ ಮಾತುಕತೆ ಸಂತಸದ ಅಲೆಯಲ್ಲಿ ತೇಲಾಡುವಂತೆ ಮಾಡಿತ್ತು ಎಂದು ಸನ್ನಿ ತನಗಾದ ಅನುಭವ ಹಂಚಿಕೊಂಡಿದ್ದಾರೆ. 

ಶಾರುಖ್‌ಖಾನ್ ಅಭಿನಯದ “ರಾಯೀಸ್” ಚಿತ್ರದಲ್ಲಿ “ಲೈಲಾ ಓ ಲೈಲಾ” ಐಟಂ ಹಾಡಿಗೆ ಶಾರುಖ್ ಖಾನ್ ಜೊತೆ ಹೆಜ್ಜೆ ಹಾಕಿರುವ ಸನ್ನಿ ಕನಸು ನನಸಾಗಿದೆ ಎಂದು ಬೀಗಿದ್ದಾರೆ.
“ರಾಯೀಸ್” ಚಿತ್ರದ ಸೆಟ್‌ನಲ್ಲಿ ಮೊದಲ ಭಾರಿಗೆ ಶಾರುಖ್ ಖಾನ್ ಅವರನ್ನು ಭೇಟಿ ಮಾಡಿದ ಬಿಚ್ಚಮ್ಮ ಸನ್ನಿ ಲಿಯೋನ್‌ಗೆ ಮುಜುಗರವಾಗಿತ್ತಂತೆ. ಆರೆ.. ಏನಿದು ಆಶ್ಚರ್ಯ ಎನ್ನುತ್ತೀರಾ.. ಸನ್ನಿಯನ್ನು ನೋಡಿ ಶಾರುಖ್ ಮುಜುಗರ ಪಟ್ಟುಕೊಳ್ಳಬೇಕು ಅಂತಹುದರಲ್ಲಿ ಸನ್ನಿಗೆ ಮಜುಗುರವಾಗಿದೆ ಎಂದರೆ ಹೇಗೆ ಎನ್ನುವ ಪ್ರಶ್ನೆ ಸಹಜ.
ಇದಕ್ಕೆ ಸೆಕ್ಸ್‌ಬಾಂಬ್ ಸನ್ನಿ ಲಿಯೀನ್ ಸಂದರ್ಶನವೊಂದರಲ್ಲಿ ತಮಗಾದ ಮುಜುಗರದ ಸಂಗತಿಯನ್ನು ಅನಾವರಣ ಮಾಡಿದ್ದಾರೆ. ಶಾರುಖ್ ಖಾನ್ ಅವರನ್ನು ಮೊದಲ ಬಾರಿಗೆ ಚಿತ್ರದ ಸೆಟ್‌ನಲ್ಲಿ ಭೇಟಿಯಾಗಿದ್ದಾಗ ನನ್ನ ಬಗ್ಗೆ ನನಗೆ ಮುಜುಗರವಾಗಿತ್ತು. ಅದಕ್ಕೆ ಕಾರಣ ನನ್ನ ಹಿನ್ನೆಲೆ. ನಾನು ಹೆಚ್ಚಾಗಿ ಬಟ್ಟೆಯನ್ನು ಹಾಕುತ್ತಿರಲಿಲ್ಲ. ಅದಕ್ಕೆ ಕಾರವೂ ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ ಶಾರುಖ್ ನನ್ನನ್ನು ಯಾವ ರೀತಿ ನೋಡುತ್ತಾರೆ.ನನ್ನ ಬಗ್ಗೆ ಏನೆಂದುಕೊಳ್ಳುತ್ತಾರೋ ಎನ್ನುವ ಮುಜುಗರದಲ್ಲಿಯೇ ಭೇಟಿಯಾಗಿದ್ದೆ. ಆ ಭೇಟಿ ನಿಜಕ್ಕೂ ಖುಷಿ ಮತ್ತು ಸಂತಸ ತರಿಸಿತ್ತು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.
“ರಾಯೀಸ್” ಸೆಟ್‌ನಲ್ಲಿ ಶಾರುಖ್ ಖಾನ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದಾಗ ಎಕ್ಟೈಟ್ ಆಗಿದ್ದೆ. ಶಾರುಖ್ ಜೊತೆ ಮಾತನಾಡುವ ವೇಳೆ ಚಿತ್ರದ ಹಾಡಿಗೆ ನನ್ನನ್ನು ಆಯ್ಕೆ ಮಾಡಿಕೊಂಡದ್ದಕ್ಕೆ ಅವರಿಗೆ ಧನ್ಯವಾದ ಹೇಳಿದೆ. ಮತ್ತೆ ಮತ್ತೆ ಅವರಿಗೆ ಧನ್ಯವಾದ ಹೇಳುತ್ತಿದ್ದಾಗ ಪ್ರತಿಕ್ರಿಯಿಸಿದ ಶಾರುಖ್ ನಾವಿಬ್ಬರೂ ಜೊತೆಯಾಗಿ ಚಿತ್ರದಲ್ಲಿ ಕೆಲಸ ಮಾಡುತ್ತಿರುವುದು ಖುಷಿ ಕೊಟ್ಟಿದೆ ಎಂದಾಗ ಸಂತಸಕ್ಕೆ ಪಾರವೇ ಇರಲಿಲ್ಲ ಎಂದು ಸನ್ನಿ ಹೇಳಿಕೊಂಡಿದ್ದಾಳೆ.
ಶಾರುಖ್ ಭೇಟಿಯ ಬಳಿಕ ಕ್ಯಾರಾವಾನ್‌ಗೆ ತೆರಳಿದಾದ ನನ್ನ ಹೇರ್ ಸ್ಟೈಲ್ ಮಾಡುವ ಮೇಕಪ್ ಕಲಾವಿದೆ ಬಂದರು. ಆಗ ಅವರ ಬಳಿ ನಾನು ಶಾರುಖ್ ಅವರನ್ನು ಭೇಟಿ ಮಾಡಿದುದು ನಿಜವೇ ಎಂದು ಅವರನ್ನು ಕೇಳಿದ್ದೆ,ಶಾರುಖ್ ಭೇಟಿಯಾದದ್ದನ್ನು ನಂಬಲೂ ಆಗುತ್ತಿರಲಿಲ್ಲ. ಚಿತ್ರದಲ್ಲಿ ಹೆಜ್ಜೆ ಹಾಕಿದ ಲೈಲಾ ಒ ಲೈಲಾ ಹಾಡಿನ ಟೀಸರ್ ನೋಡಿ ಖುಷಿಯಾಯಿತು. ಅಷ್ಟರ ಮಟ್ಟಿಗೆ ಹಾಡು ಮೂಡಿಬಂದಿದೆ ಎಂದಿದ್ದಾರೆ.
’ಲೈಲಾ ಒ ಲೈ’ ಹಾಡು ಬಾಲಿವುಡ್‌ನಲ್ಲಿ ಬಂದ ಐಟಂ ಹಾಡುಗಳಲ್ಲಿ ಅತ್ಯಂತ ಹಾಟ್ ಆದ ಹಾಡು ಇದಾಗಲಿದೆ ಎನ್ನುವ ವಿಶ್ವಾಸ ಸನ್ನಿಲಿಯೋನ್ ಅವರದ್ದು.

 

Leave a Comment