ಮುಚ್ಚಿರುವ ಚರ್ಚ್, ಪ್ರಾರ್ಥನಾ ಮಂದಿರಗಳ ಬಾಗಿಲು ತೆರೆಯಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ

ವಾಷಿಂಗ್ಟನ್, ಮೇ 23- ಅಮೆರಿಕಾದಲ್ಲಿ ಚರ್ಚ್ ಗಳು ಹಾಗೂ ಇತರ ಪ್ರಾರ್ಥನಾ ಮಂದಿರಗಳನ್ನು ಕೂಡಲೇ ತೆರೆಯಬೇಕೆಂದು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸೂಚನೆ ನೀಡಿದ್ದಾರೆ. ಪ್ರಾರ್ಥನಾ ಕೇಂದ್ರಗಳು ಅತ್ಯಂತ ಮುಖ್ಯ ಸ್ಥಳಗಳು, ಅವುಗಳನ್ನು ಮುಕ್ತಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳ ಗರ್ವನರ್ ಗಳಿಗೆ ಕರೆ ನೀಡಿದ್ದಾರೆ.
ಧಾರ್ಮಿಕ ನಂಬಿಕೆಗಳಿಗೆ ಮಹತ್ವದ ಕೇಂದ್ರಗಳಾಗಿರುವ ಪ್ರಾರ್ಥನಾ ಮಂದಿರಗಳನ್ನು ಈ ವಾರದ ಅಂತ್ಯದೊಳಗೆ ತೆರೆಯಬೇಕೆಂದು ಡೊನಾಲ್ಡ್ ಟ್ರಂಪ್ ಆದೇಶ ಜಾರಿಗೊಳಿಸಿದ್ದಾರೆ. ಶ್ವೇತ ಭವನದಲ್ಲಿ ಮಾಧ್ಯಮ ಗೋಷ್ಟಿಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಆದಷ್ಟು ತ್ವರಿತವಾಗಿ ಮತ್ತೆ ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಲು ಟ್ರಂಪ್ ಬಯಸಿದ್ದು, ಈ ಹಿನ್ನಲೆಯಲ್ಲಿ ಅವರು ಎಲ್ಲ ರಾಜ್ಯಗಳ ಗರ್ವನರ್ ಗಳಿಗೆ ಆದೇಶ ನೀಡುತ್ತಿದ್ದಾರೆ.
ಪ್ರಾರ್ಥನಾ ಮಂದಿರಗಳನ್ನು ತೆರೆಯಬೇಕೆಂದು ಟ್ರಂಪ್ ಹೇಳಿದ ತಕ್ಷಣ, ಅಮೆರಿಕಾದ ರೋಗ ನಿಯಂತ್ರಣ ಹಾಗೂ ಮುನ್ನೆಚ್ಚರಿಕೆ ಕೇಂದ್ರ (ಸಿಡಿಸಿ) ಕೆಲ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ್ದು, ಧಾರ್ಮಿಕ ಕೇಂದ್ರಗಳನ್ನು ಸುರಕ್ಷಿತವಾಗಿ ಹೇಗೆ ತೆರೆಯಬೇಕು ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ವಿಶಾಲ ಪ್ರದೇಶಗಳಲ್ಲಿ ಮಾತ್ರವೇ ಪ್ರಾರ್ಥನೆಗಳನ್ನು ನಡೆಸಬೇಕು ಎಂದು ಅದರಲ್ಲಿ ಸೂಚಿಸಿದೆ.

Leave a Comment