ಮುಗಿಯುತ್ತಿವೆ ಧಾರಾವಾಹಿ ಎಪಿಸೋಡ್‌ಗಳು

ಕೊರೊನಾ ಭೀತಿಯಿಂದಾಗಿ ಮನೆಯಲ್ಲಿ ಕೂತು ಧಾರಾವಾಹಿ ನೋಡುವ ಪ್ರೇಕ್ಷಕರಿಗೂ ಇನ್ನು ಮುಂದೆ ನಿರಾಸೆ ಉಂಟಾಗಲಿದೆ. ಕೊರೊನಾ ಹಾವಳಿಯಿಂದ ಕಿರುತೆರೆ ಸಂಪೂರ್ಣ ಸ್ಥಗಿತವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಹೊಸ ಕಂತು ಪ್ರಸಾರ ಸ್ಥಗಿತಗೊಳ್ಳಲಿದೆ.

ಏಕೆಂದರೆ ಈಗಾಗಲೇ ಧಾರಾವಾಗಿ ಚಿತ್ರೀಕರಣ ನಿಂತುಹೋಗಿದ್ದು, ಕೆಲವೇ ದಿನಗಳಲ್ಲಿ ಹೊಸ ಕಂತು ಸ್ಟಾಕ್ ಮುಗಿಯಲಿವೆ. ಆ ಬಳಿಕೆ ಜನರು ಮತ್ತೆ ಹೊಸ ಎಪಿಸೋಡ್ ನೋಡಲು ಕೆಲ ತಿಂಗಳು ಕಾಯಲೆಬೇಕಾಗಿದೆ.

ದಿನದ ಲೆಕ್ಕದಲ್ಲಿಯೇ ನಡೆಯುವ ಧಾರವಾಹಿ ಉದ್ಯಮವಂತೂ ಪೂರ್ಣವಾಗಿ ನೆಲಕಚ್ಚಿದೆ. ಧಾರವಾಹಿಯ ನಿರ್ಮಾಪಕರುಗಳು, ನಟರು, ದಿನಗೂಲಿ ನೌಕರರು ಹೈರಾಣಾಗಿದ್ದಾರೆ. ತಿಂಗಳಲ್ಲಿ ಸರಾಸರಿ ೨೨ ರಿಂದ ೨೫ ದಿನಗಳು ಧಾರವಾಹಿ ಚಿತ್ರೀಕರಣ ಇರುತ್ತದೆ. ನಟ-ನಟಿಯರಿಂದ ಹಿಡಿದು ಬಹುತೇಕ ಎಲ್ಲರಿಗೂ ದಿನದ ಲೆಕ್ಕದಲ್ಲಿಯೇ ಸಂಭಾವನೆಯನ್ನು ಗೊತ್ತು ಮಾಡಲಾಗಿರುತ್ತದೆ. ಆದರೆ ಪೇಮೆಂಟ್ ಮಾತ್ರ ಕೆಲವೆಡೆ ಆ ದಿನದಂದೇ ಅಥವಾ ಒಟ್ಟಾಗಿ ತಿಂಗಳಿಗೊಮ್ಮೆ ನೀಡಲಾಗುತ್ತದೆ.

s2

ರಾಜ್ಯದಲ್ಲಿರುವ ವಿವಿಧ ಕನ್ನಡ ಚಾನೆಲ್‌ಗಳು ಅದರಲ್ಲಿ ಪ್ರಸಾರವಾಗುತ್ತಿರುವ ಸಂಖ್ಯೆ ಲೆಕ್ಕ ಹಾಕಿದರೆ ಸುಮಾರು ಐವತ್ತು ದಾಟುತ್ತದೆ. ಪ್ರತಿ ಧಾರವಾಹಿಗೆ ಕನಿಷ್ಟ ಐವತ್ತು ಮಂದಿ ಪ್ರತಿದಿನ ದುಡಿಯುತ್ತಾರೆ, ನಟ, ನಿರ್ದೇಶಕ, ತಂತ್ರಜ್ಞರನ್ನು ಹೊರತುಪಡಿಸಿದರೆ ಸಣ್ಣ ಮಟ್ಟಿನ ದಿನಗೂಲಿ ಕಲಾವಿದರು, ತಂತ್ರಜ್ಞರೇ ಹೆಚ್ಚು ಇವರ ಜೀವನ ನಿರ್ವಹಣೆ ತೀವ್ರ ಸಂಕಷ್ಟದಲ್ಲಿದೆ. ಇವರ ಆದಾಯ, ಖರ್ಚು, ನಿರ್ಮಾಪಕರಿಗೆ ಬರಬೇಕಾದ ಹಣ ಲೆಕ್ಕಾ ಹಾಕಿದರೆ ಪ್ರತಿದಿನ ಕೋಟ್ಯಂತರ ಹಣ ನಷ್ಟವಾಗುತ್ತಿದೆ. ಒಂದು ಧಾರವಾಹಿ ಸೆಟ್‌ನಲ್ಲಿ ಕನಿಷ್ಟ ೫೦ ಮಂದಿ ಗರಿಷ್ಟ ೭೦ ಮಂದಿ ಇರುತ್ತಾರೆ. ಅವರೆಲ್ಲಾ ಸ್ಥಿತಿ ನಿಜಕ್ಕೂ ಶೋಚನಿಯವಾಗಿದೆ.

ಇನ್ನು ಕಿರುತೆರೆ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿರುವ ಜೊತೆಜೊತೆಯಲ್ಲಿ ಧಾರಾವಾಹಿಯನ್ನು ನೋಡುಲು ಪ್ರೇಕ್ಷಕರು ಕಾಯುತ್ತ ಕುಳಿತಿರುತ್ತಾರೆ. ಇನ್ನು ಈ ಧಾರಾವಾಹಿಯ ಹೊಸ ಕಂತು ಏಪ್ರಿಲ್ ೧೦ವರೆಗೂ ಪ್ರಸಾರವಾಗಬಹುದು ಎಂದು ಹೇಳಲಾಗಿದೆ. ತದನಂತರ ವಾಹಿನಿಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ನೋಡಬೇಕಿದೆ.

 

s3
ಇನ್ನು ಗಟ್ಟಿಮೇಳ, ಮಾಂಗಲ್ಯಂ ತಾಂತುನಾನೇನಾ, ವರಲಕ್ಷ್ಮಿ ಸ್ಟೋರ್‍ಸ್, ಪ್ರೇಮಲೋಕ, ಪಾಪಪಾಂಡು, ಮಗಳು ಜಾನಕಿ, ಸೇರಿದಂತೆ ಅನೇಕ ಧಾರಾವಾಹಿಗಳು ಕೂಡ ಹೊಸ ಎಪಿಸೋಡ್‌ಗಳಿಲ್ಲದೇ ಪರದಾಡುವಂತಾಹ ಸ್ಥಿತಿ ತಲುಪಿದ್ದು, ಒಂದು ದಿನದ ಸಂಚಿಕೆಯಲ್ಲಿ ೨ ಸೀನ್ ಬರುವುದು ಹೆಚ್ಚಾಗಿದೆ.

 

ಧಾರವಾಹಿ ನಿರ್ಮಾಣ ಸುಲಭವಲ್ಲ, ಪ್ರತಿ ದಿನ 90 ರಿಂದ 1.50 ಲಕ್ಷದ ವರೆಗೆ ಖರ್ಚು ಬರುತ್ತದೆ. ಒಂದು ದಿನ ಶೂಟಿಂಗ್ ನಿಂತರೆ ಖರ್ಚಿಗೂ ಹೆಚ್ಚಿನ ಮೊತ್ತದ ನಷ್ಟ ನಿರ್ಮಾಪಕನಿಗೆ ಆಗುತ್ತದೆ

ಧಾರವಾಹಿ ನಿರ್ಮಾಪಕ ಸೋಮಶೇಖರ್

Leave a Comment