ಮುಖ್ಯಾಧಿಕಾರಿ-ಸಿಬ್ಬಂಧಿಯಿಂದ ಅಭಿವೃದ್ಧಿ ಕುಂಠಿತ : ಮಲ್ಲಿಕಾರ್ಜುನ

ಕುಂದಗೋಳ,ಆ.12-  ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿಗಳ ಹೊಂದಾಣಿಕೆ ಹಾಗೂ ಪಿತೂರಿಗಳಿಂದಾಗಿ ತಮ್ಮ-ತಮ್ಮಲ್ಲಿ ಅಪನಂಬಿಕೆಯಿಂದ ಪಟ್ಟಣದ ಪ.ಪಂ ಸಭಾಭವನದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ವರು ಮಾತನಾಡಿ ಆಡಳಿತ ಮಟ್ಟವು ಎಲ್ಲ ರೀತಿಯಲ್ಲಿ ಸಂಪೂರ್ಣ ಕುಸಿಯುತ್ತಿದ್ದು, ಇದೆಲ್ಲವೂ ಸರಿಯಾಗಬೇಕೆಂದರೆ ಈ ಕೂಡಲೆ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ವರ್ಗಾವಣೆಯಾಗಲು ಶಾಸಕರಾದ ಶಿವಳ್ಳಿ ಅವರು ಹಕರಿಸಬೇಕೆಂದು ಮನವಿ ಮಾಡಿದರು.
ಸದಸ್ಯ ವಿಠ್ಠಲ ಚವ್ಹಾಣ ಅವರ ಪಟ್ಟಣದಲ್ಲಿ ಅಭಿವೃದ್ದಿ ಕಾಮಗಾರಿಗಳೆಲ್ಲ ಕಳಪೆ ಮಟ್ಟದಿಂದ ಕೂಡಿದ್ದು, ಇದರಲ್ಲಿ ಲಕ್ಷಾಂತರ ಹಣ ಲೂಟಿ ಮಾಡಲಾಗಿದೆ ಎಂಬ ಆರೋಪಕ್ಕೆ ಮುಖ್ಯಾಧಿಕಾರಿ ಪ್ರಭುಲಿಂಗ ಇಬ್ರಂಡಿ ಮಾತನಾಡಿ ಈ ಹೇಳಿಕೆ ನಿಜವಾಗಿದ್ದು, ಗುತ್ತಿಗೆದಾರರಿಗೆ ಸರಿ ಪಡಿಸುವಂತೆ ಸೂಚಿಸಿದ್ದೇನೆ ಎಂದು ಒಪ್ಪಿಕೊಂಡರು.
ನಂತರ ಶಾಸಕ ಸಿ.ಎಸ್.ಶಿವಳ್ಳಿ ಅವರು ಮಾತನಾಡಿ ಗುತ್ತಿಗೆದಾರರಿಗೆ ಹಣ ಮಂಜೂರಾಉ ಮಾಡಬಾರದು ಅಲ್ಲದೆ ಪಂಚಾಯತ ಎಲ್ಲ ಸಿಬ್ಬಂದಿಗಳ ವೇತನ ಸರಿಯಾಗಿ ನೀಡಿ ತಮಗೂ ಹಾಗೂ ತಹಶಿಲ್ದಾರರಿಗೂ ಮಾಹಿತಿ ಒದಗಿಸಬೇಕು ಮುಖ್ಯಾಧಿಕಾರಿ ಇಬ್ರಂಡಿ ಅವರಿಗೆ ಕಠುವಾಗಿ ಹೇಲಿದರು.
ಸಭೆಯಲ್ಲಿ ತಹಶಿಲ್ದಾರ ನವೀನ ಹುಲ್ಲೂರ, ಸದಸ್ಯರಾದ ರಜಿಯಾಬೇಗಂ ಹಸೂಬಾಯಿ, ಮಾಬೂಬಲಿ ನದಾಫ, ಬಸವರಾಜ ದೊಡ್ಡಮನಿ, ಉಮೇಶ ಬೀಡನಾಳ, ರಾಜು ಶಿವಳ್ಳಿ, ಯಲ್ಲವ್ವ ಭಜಂತ್ರಿ, ಸಾವಕ್ಕ ಬಡಿಗೇರ, ಬಸಮ್ಮ ಅಲ್ಲಾಪೂರ, ದ್ಯಾಮವ್ವ ಬೀಡನಾಳ, ಹಾಸಂಭಿ ಛಡ್ಡಿ ಸೇರಿದಂತೆ ಸಿಬ್ಬಂದಿ ವರ್ಗದವರಿದ್ದರು.

Leave a Comment