ಮುಖ್ಯಮಂತ್ರಿ ಹೇಳಿಕೆ ವಿರುದ್ದ ಬಿಜೆಪಿ ಪ್ರತಿಭಟನೆ

ಪ್ರತಿಭಟನಾಕಾರರ ಬಂಧನ – ಬಿಡುಗಡೆ
ದಾವಣಗೆರೆ,ಜ,13 ; ಬಿಜೆಪಿ, ಆರ್‍ಎಸ್.ಎಸ್. ಭಜರಂಗದಳ ಸಂಘಟನೆಗಳು ಉಗ್ರಗಾಮಿಗಳು ಎಂದು ಕರೆದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹೇಳಿಕೆಯನ್ನು ವಿರೋಧಿಸಿ ಭಾರತಿಯ ಜನತಾ ಪಕ್ಷದ ಕಾರ್ಯಕರ್ತರು ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು.
ಬಿಜೆಪಿ ಕಾರ್ಯಾಲಯದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಬಿಜೆಪಿಯವರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೆ ಪ್ರತಿಭಟನಾಕಾರರನ್ನು ಜಯದೇವ ವೃತ್ತದಲ್ಲಿಯೇ ಪೊಲೀಸರು ಬಂಧಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್, ಬಿಜೆಪಿ, ಆರ್‍ಎಸ್‍ಎಸ್. ಹಾಗೂ ಭಜರಂಗದಳ ಸಂಘಟನೆಗಳು ದೇಶಕ್ಕಾಗಿ ಹೋರಾಡುತ್ತಿವೆ. ಭಾರತದ ಹಾಗೂ ಸಂಸ್ಕøತಿಗಳ ರಕ್ಷಣೆ ಮಾಡುವಲ್ಲಿ ಶ್ರಮಿಸುತ್ತಿವೆ. ಇಂತಹ ಸಂಘಟನೆಗಳನ್ನು ಉಗ್ರಗಾಮಿ ಸಂಘಟನೆಗಳಿಗೆ ಹೋಲಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.
ಉಗ್ರಗಾಮಿ ಸಂಘಟನೆಗಳಿಗೆ ಕುಮ್ಕಕ್ಕು ನೀಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ದೇಶದ್ರೋಹಿಗಳು. ಪಿಎಫ್‍ಐ, ಕೆಎಫ್‍ಡಿ ಸಂಘಟನೆಗಳನ್ನು ನಿಷೇಧಿಸದೆ, ಉಗ್ರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ರಾಜ್ಯದಲ್ಲಿ 250ಕೂ ಹೆಚ್ಚು ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಆರೋಪಿಗಳನ್ನು ಬಂಧಿಸಿ, ಕ್ರಮಕೈಗೊಳ್ಳುವಲ್ಲಿ ಸರಕಾರ ವಿಫಲವಾಗಿದೆ. ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಎನ್.ರಾಜಶೇಖರ್ ಮಾತನಾಡಿ, ಹಿಂದೂ ಕಾರ್ಯಕರ್ತ ರುದ್ರೇಶ ಹತ್ಯೆಯಲ್ಲಿ ಪಿಎಫ್‍ಐ, ಕೆಎಫ್‍ಡಿ ಸಂಘಟನೆಗಳು ನೇರ ಕೈವಾಡ ಇದೆ ಎಂದು ತಿಳಿದಿದ್ದರೂ, ಅವುಗಳ ವಿರುದ್ಧ ಕ್ರಮಕೈಗೊಳ್ಳದೆ, ಮೃಧುಧೋರಣೆ ತಾಳುತ್ತಿರುವುದನ್ನು ಖಂಡಿಸಿದರು.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ದೇಶಕಂಡ ಅತ್ಯಂತ ದುವರ್ತನೆಯ ಮುಖ್ಯಮಂತ್ರಿ. ಬಿಜೆಪಿ, ಆರ್‍ಎಸ್‍ಎಸ್, ಭಜರಂಗದಳವನ್ನು ಉಗ್ರ ಸಂಘಟನೆಗಳು ಎಂದು ಕರೆದಿರುವ ಅವರು ತಾಕತ್ತಿದ್ದರೆ ಈ ಸಂಘಟನೆಗಳನ್ನು ನಿಷೇಧ ಮಾಡಲಿ, ನಮ್ಮನ್ನು ಬಂಧಿಸಲಿ ಎಂದು ಸವಾಲು ಹಾಕಿದರು.ಬಿಜೆಪಿ, ಆರ್‍ಎಸ್‍ಎಸ್, ಭಜರಂಗದಳವನ್ನು ನಿಷೇಧಿಸಲು ಯಾರಿಗೂ ಸಾಧ್ಯವಾಗಿಲ್ಲ. ತಾಕತ್ತಿದ್ದರೆ ನೀವು ನಿಷೇಧಿಸಿ ಎಂದರು ಅಲ್ಲದೆ, ನಿಜವಾದ ದೇಶಭಕ್ತರು ಎಂದರೆ ನಾವೆ ಎಂದುರು.ಜಯದೇವ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿಗೆ ತೆರಳುತ್ತಿದ್ದ ನೂರಾರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ವ್ಯಾನ್ ಮೂಲಕ ಕರೆದುಕೊಂಡು ಹೋದರು. ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯ ಡಿ.ಕುಮಾರ್, ಹೆಚ್.ಎನ್.ಶಿವಕುಮಾರ್, ಪಿ.ಸಿ.ಶ್ರೀನಿವಾಸ, ಶಾಂತಕುಮಾರ ಸೋಗಿ, ಜಯಮ್ಮ, ಚೇತನ, ಶಿವನಗೌಡ ಪಾಟೀಲ್, ಹೇಮಂತಕುಮಾರ್,. ಮುಕುಂದಪ್ಪ, ಸರೋಜ ದಿಕ್ಷೀತ್ ಮತ್ತಿತರರು ಇದ್ದರು.

Leave a Comment