ಮುಖ್ಯಮಂತ್ರಿ ಹುದ್ದೆ ಚರ್ಚೆ ಅನಗತ್ಯ : ಪರಮೇಶ್ವರ್

 

ಕಲಬುರಗಿ,ಮೇ.16-ಮುಖ್ಯಮಂತ್ರಿ ಸದ್ಯ ಇದ್ದಾರೆ. ಆ ಬಗ್ಗೆ ಈಗ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೋ ನನಗೆ ಗೊತ್ತಿಲ್ಲ. ಸದ್ಯ ಮುಖ್ಯಮಂತ್ರಿ ಆಯ್ಕೆ ನಡೆಯುತ್ತಿಲ್ಲ. ನನ್ನನ್ನು ಸೇರಿ ಬಹಳ ಜನ ಮುಖ್ಯಮಂತ್ರಿ ಆಗುವ ಆಸೆ ಹೊಂದಿದ್ದೇವೆ ಎಂದರು.

ಸಿದ್ದರಾಮಯ್ಯ ಟ್ವೀಟ್ ನಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಪರಮೇಶ್ವರ ರೇವಣ್ಣ-ಸಿದ್ದರಾಮಯ್ಯ ಆತ್ಮೀಯರಿದ್ದಾರೆ. ಈ ಹಿಂದೇ ಅವರಿಬ್ಬರು ಒಂದೇ ಪಕ್ಷದಲ್ಲಿದ್ದರು. ಹೀಗಾಗಿ ರೇವಣ್ಣ ಕೂಡ ಸಿಎಂ ಆಗಬಹುದು ಎಂದು ಹೇಳಿರುವುದರಲ್ಲಿ ಯಾವ ತಪ್ಪಿಲ್ಲ ಎಂದರು.

ಶೋಭಾ ಕರಂದ್ಲಾಜೆ ಅವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಪರಮೇಶ್ವರ, ಯಾರೋ ಏನೋ ಹೇಳಿದರು ಅಂದ ಮಾತ್ರಕ್ಕೆ ನಾನೇಕೆ ಅದಕ್ಕೆ ಪ್ರತಿಕ್ರಿಯೆ ನೀಡಲಿ ಎಂದು ಪ್ರಶ್ನಿಸಿದರು.

@12bc = ಸರ್ಕಾರ ಸುಭದ್ರ

ಯಾವುದೇ ಕಾರಣಕ್ಕೂ ಸರ್ಕಾರ ಬೀಳಲ್ಲ. ಇಪ್ಪತ್ಮೂರಲ್ಲ, ಇಪ್ಪತ್ನಾಲ್ಕಲ್ಲ, ನಾಲ್ಕು ವರ್ಷ ಉತ್ತಮ ಆಡಳಿತ ನೀಡುತ್ತೇವೆ. ಯಡಿಯೂರಪ್ಪ ನೂರು ಸಾರಿ ಜಪ ಮಾಡಿದರು ಸರ್ಕಾರ ಬೀಳಲ್ಲ. ನಾನು ಸರ್ಕಾರದ ಉಪ ಮುಖ್ಯಮಂತ್ರಿಯಾಗಿ ಹೇಳುತ್ತೇನೆ ಸರ್ಕಾರ ತನ್ನ ಅವಧಿ ಪೂರ್ಣಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇವೆಲ್ಲ ವೈಯಕ್ತಿಕ ಹೇಳಿಕೆಗಳು. ಈ ಹೇಳಿಕೆಗಳಿಂದ ಏನೂ ಆಗಲ್ಲ ಎಂದರು.

Leave a Comment