ಮುಖ್ಯಮಂತ್ರಿಗಳಿಗೆ ಶಾಸಕರಿಂದ ಸನ್ಮಾನ ನಿವೃತ್ತಿ ವೇತನ ಬಿಡುಗಡೆಗೆ ಮನವಿ

ಹುಬ್ಬಳ್ಳಿ: ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ (ಲಿಡಕರ್) ಅಧ್ಯಕ್ಷರಾಗಿ ನೇಮಕಗೊಂಡ ಶಾಸಕ ಪ್ರಸಾದ ಅಬ್ಬಯ್ಯ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳವರನ್ನು ಭೇಟಿ ಮಾಡಿ ಸನ್ಮಾನಿಸಿ, ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ನಿವೃತ್ತ ನೌಕರರಿಗೆ ಬಾಕಿ ಇರುವ ನಿವೃತ್ತ ವೇತನವನ್ನು ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಯಿತು.
ಮೇಯರ್ ಸುಧೀರ ಸರಾಫ್, ಪಾಲಿಕೆ ವಿಪಕ್ಷ ನಾಯಕ ಗಣೇಶ ಟಗರಗುಂಟಿ, ಇತರರು ಇದ್ದರು.

Leave a Comment