ಮುಖ್ಯಗುರು ಅನಂತಶಯನರಿಗೆ ಬೀಳ್ಕೊಡುಗೆ.

ರಾಯಚೂರು.ಫೆ.1- ತಾಲೂಕಿನ ಸಿಂಗನೋಡಿ ವಲಯದ ವಡವಾಟಿಯ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಮಾಣಿಕ ಕರ್ತವ್ಯ ನಿಷ್ಠೆಯಿಂದ ಉತ್ತಮ ಶಿಕ್ಷಕರಾಗಿ, ಸಂಪನ್ಮೂಲ ವ್ಯಕ್ತಿಗಳಾಗಿ, ಮುಖ್ಯೋಪಾಧ್ಯರಾಗಿ 39 ವರ್ಷ 2 ತಿಂಗಳ ಸುಧೀರ್ಘವಾಗಿ ಸೇವೆಸಲ್ಲಿಸಿ ನಿವೃತ್ತಿ ಹೊಂದಿದ ಅನಂತಶಯನ ಇವರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಅನಂತಶಯನ ಹಾಗೂ ಅವರ ಧರ್ಮಪತ್ನಿ ಶ್ರೀದೇವಿಯವರಿಗೆ ಅಂತರರಾಷ್ಠ್ರೀಯ ಕ್ಲಾರಿಯೋನೆಟ್ ವಾದಕರಾದ ಡಾ.ಪಂ.ನರಸಿಂಹಲು ವಡವಾಟಿಯವರು ಹಾಗೂ ಶಾಲೆಯ ಸರ್ವರೂ ಶಾಲು ವದಿಸಿ ಹೂವಿನ ಹಾರ ಹಾಕಿ ನೆನಪಿನ ಕಾಣಿಕೆ ನೀಡಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ಮಾತನಾಡಿದ ಡಾ.ಪಂ.ವಡವಾಟಿಯವರು ಸಮಾರಂಭದಲ್ಲಿ ನೆರೆದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳುತ್ತಾ, ಗುರುದೇವೋ ಮಾಹಾದೇವೋ… ಗುರುದೇವೋ… ಸದಾಶಿವಹಃ… ಗುರುದೈವತ್ ಪರಮ್ನಾಸ್ಥಿ… ತಸ್ಮೈ ಶ್ರೀ ಗುರುವೇ ನಮಃ… ಎಂಬ ಶ್ಲೋಕವನ್ನು ದಿನಾಲು ಬರೀ ಸ್ಮರಿಸುವುದೊಂದೇ ಅಲ್ಲ… ಅದಲ್ಲಿರುವಂತ ಅರ್ಥವನ್ನು ತಿಳಿದುಕೊಂಡು ಜೀವನ ಸಾಗಿಸಿದರೆ ನಿಮ್ಮ ಮುಂದಿನ ಜೀವನದಲ್ಲೂ ಯಶಸ್ಸುಕಾಣುತ್ತೀರಿ, ಗುರು ಎಂದರೆ ಯಾರು‌‌ ಎಂದು ನೀವು ತಿಳ್ಕೊಂಡಿದೀರಾ ಆತನೇ ಸಾಕ್ಷಾತ್ ಭಗವಂತ… ಗುರುವಿಗೆ ನಿಮ್ಮ ಮನಸ್ಸುಪೂರ್ವಕ ಶೃದ್ಧಾ, ಭಕ್ತಿಯಿಂದ ನಮಿಸಿದರೆ ತಾನಾಗಿಯೇ ನಿಮಗೆ ಆಶೀರ್ವಾದ ಮಾಡುವುದಲ್ಲದೇ ನೀವು ನಿಮ್ಮ ಜೀವನದಲ್ಲಿ ಯಶಸ್ಸು ಕಾಣಿರಿ ಒಳ್ಳೇದಾಗ್ಲಿ ಎಂದು ಆಶೀರ್ವದಿಸುತ್ತಾನೆ ಎಂದು ಹೇಳಿದರು.

Leave a Comment