ಮುಖಾಮುಖಿ ಡಿಕ್ಕಿ-ಸಂಚಾರ ಅಸ್ತವ್ಯಸ್ತ

ರಾಯಚೂರು.ಮಾ.13- ದ್ವಿಚಕ್ರ ವಾಹನ – ಕಾರು ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಸವಾರ ತೀವ್ರವಾಗಿ ಗಾಯಗೊಂಡ ಘಟನೆ ರಾಯಚೂರು – ಲಿಂಗಸೂಗೂರು ಮುಖ್ಯ ರಸ್ತೆಯಲ್ಲಿ ನಡೆದಿದೆ.
ಕಾರಿನ ವೇಗ ನಿಯಂತ್ರಣಕ್ಕೆ ಬಾರದೇ ಎದುರಿಗೆ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಸವಾರನನ್ನು ತುರ್ತು ಚಿಕಿತ್ಸಾ ವಾಹನ ಮೂಲಕ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಬೆಳ್ಳಂ ಬೆಳಿಗ್ಗೆ ರಸ್ತೆ ಅಪಘಾತದಿಂದಾಗಿ ಗಂಟೆಗೂ ಅಧಿಕ ಕಾಲ ಲಿಂಗಸೂಗೂರು ಮುಖ್ಯ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ಸುಗಮ ಸಂಚಾರಕ್ಕಾಗಿ ವಾಹನ ಸವಾರರು ಪರದಾಡುವಂತಾಯಿತು.

Leave a Comment