ಮುಖಾಮುಖಿ ಡಿಕ್ಕಿ – ತೀವ್ರ ಗಾಯ

ರಾಯಚೂರು.ಡಿ.07- ಲಾರಿಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಚಾಲಕರು ತೀವ್ರವಾಗಿ ಗಾಯಗೊಂಡ ಘಟನೆ ಮುದುಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಸರಕು ಸಾಗಣೆಯಲ್ಲಿ ತೊಡಗಿದ್ದ ಆಂಧ್ರ ಮೂಲದ ಎಪಿ-03 ವೈ-5789 ಎನ್ನುವ ಸಂಖ್ಯಾಫಲಕದ ಲಾರಿ ವೇಗ ನಿಯಂತ್ರಣಕ್ಕೆ ಬಾರದೇ ಎದುರಿಗೆ ಬಂದ ಲಾರಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಏಕಾಏಕಿ ನಡೆದ ದುರ್ಘಟನೆಯಲ್ಲಿ ಗಾಜು ಹೊಡೆದು ಲಾರಿ ನುಜ್ಜುಗುಜ್ಜಾಗಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿರುವ ಮುದುಗಲ್ ಠಾಣಾ ಪೊಲೀಸರು ತೀವ್ರ ರಕ್ತಸ್ರಾವವಾಗಿ ಗಾಯಗೊಂಡಿರುವ ಚಾಲಕರನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಲಾರಿ ಅಪಘಾತದಿಂದಾಗಿ ಗಂಟೆಗೂ ಅಧಿಕ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಸಾಲುಗಟ್ಟಿ ಪರದಾಡುವಂತಾಯಿತು.

Leave a Comment