ಮುಕ್ತ ಕಲಿಕೆಗೆಅವಕಾಶ ಅತ್ಯವಶ್ಯ – ಚಿಕ್ಕಮಠ

ಧಾರವಾಡ ಜ.22- ಕಲಿಕೆಯಲ್ಲಿ ವಿದ್ಯಾರ್ಥಿಗಳಿಗೆ ಯಾವದೇ ಬಾಹ್ಯ ಒತ್ತಡವಿರದೇ ಮುಕ್ತ ಕಲಿಕೆಗೆ ಅವಕಾಶವಿರಬೇಕು ಎಂದು ನಿವೃತ್ತ ಶಿಕ್ಷಕರಾದ ಮಲ್ಲಿಕಾರ್ಜುನ್ ಚಿಕ್ಕಮಠ ಹೇಳಿದರು.
ಅವರು ಶಾಲ್ಮಲಾ ನಗರದ ನವಭಾರತ ಎಜ್ಯುಕೇಶನ್ ಮತ್ತು ಪ್ಲಾಂಟೇಶನ್ ಫಾರ್ಮರ್ಸ್ ಸೊಸಾಯಿಟಿಯ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಸಕ್ತ ಸಾಲಿನ ವಾರ್ಷಿಕೋತ್ಸವ ಹಾಗೂ ಪಾಲಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳ ಸ್ವಂತಿಕೆಯನ್ನು ಗೌರವಿಸಬೇಕು. ಅವರ ಆಸಕ್ತಿ,ಅಭಿರುಚಿ ಹಾಗೂ ಸಾಮಥ್ರ್ಯಕ್ಕೆ ತಕ್ಕಂತೆ ಬೋಧಿಸಿದರೆ ಕಲಿಕೆ ಸಂತಸದಾಯಕವಾಗುವುದು. ಬೋಧನೆ ಕೇವಲ ಪಠ್ಯಕ್ಕೆ ಸೀಮಿತವಾಗದೇ ಒಳ್ಳೆಯ ಸಂಸ್ಕಾರ ಹಾಗೂ ಜೀವನ ಮೌಲ್ಯಗಳನ್ನು ಬಿತ್ತಬೇಕು. ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸದಲ್ಲಿ ಶಿಕ್ಷಕರಷ್ಟೇ ಪಾಲಕರೂ ಜವಾಬ್ದಾರರು ಎಂದರು.
ಇಷ್ಠಾರ್ಥ ಡಿ.ಇ.ಡಿ ಕಾಲೇಜಿನ ಪ್ರಾಚಾರ್ಯ ಹಾಗೂ ಸಂಸ್ಥಾಪಕರಾದ ಡಾ.ಟಿ.ಡಿ.ಪೂಜಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸುಮ್ಮನೆ ಬರುವದಿಲ್ಲಾ. ಅದಕ್ಕೆ ನಿರಂತರ ಪರಿಶ್ರಮ ಹಾಗೂ ಪ್ರಯತ್ನ ಅಗತ್ಯ. ಆ ಯಶಸ್ಸು ನಿಮ್ಮ ಭವಿಷ್ಯಕ್ಕೊಂದು ಶ್ರೇಯಸ್ಸು. ವಿದ್ಯಾರ್ಥಿಗಳು ಶಾಲೆ ನನ್ನದು ಗುರುಗಳು ನನ್ನವರು ಎಂಬ ಉದಾತ್ತ ಭಾವನೆ ಹೊಂದಿ ಕೀರ್ತಿಶಾಲಿಗಳಾಗಿ ಎಂದು ಹಾರೈಸಿದರು.
ನ್ಯಾಯವಾದಿ ಎಸ್.ಎನ್.ಚಿಕ್ಕಣ್ಣವರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಾಲೆಯ ಹಿಂದಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನ್ಯಾಯವಾದಿ ಹೇಮಂತ ಹಾವರಗಿ ಡಾ.ರವಿಕುಮಾರ ಪೂಜಾರ, ಭಾಸ್ಕರ್ ಶೆಟ್ಟಿ, ರಾಜ್ಯ ಸಂಪನ್ಮೂಲ ವ್ಯಕ್ತಿ ವೀರಣ್ಣ ಒಡ್ಡೀನ, ಗುರುಮಾತೆ ಶಾರದಾದೇವಿ ಪೂಜಾರ, ಡಾ. ಸಂತೋಷಕುಮಾರ ಪೂಜಾರ, ಎಂ.ನಾಗರಾಜ, ಎಚ್.ದುರ್ಗಪ್ಪ, ಬಸವರಾಜ ಆನೆಗುಂದಿ, ಕೆ.ಎಂ.ಮಂಡ್ಯಾಳ, ಎಂ.ಎಚ್.ವಗ್ಗರ್ ಮುಂತಾದವರು ವೇದಿಕೆಯಲ್ಲಿದ್ದರು.
ವಾರ್ಷಿಕ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಎಸ್.ಎಂ.ಬುಟ್ಟಣ್ಣವರ್ ನಿರೂಪಿಸಿದರು. ಮಲ್ಲಿಕಾರ್ಜುನ್ ಧೂಮಗೊಂಡ ಸ್ವಾಗತಿಸಿದರು. ಟಿ.ಎಸ್.ವಿಶ್ವನಾಥ ಪರಿಚಯಿಸಿದರು. ಎಸ್.ವಿ.ಜೋಶಿ ವಂದಿಸಿದರು.

Leave a Comment