ಮುಕ್ತಿಯಾರ್ ಸ್ವಂತ ಖರ್ಚಿನಲ್ಲಿ ಸಸಿಗೆ ನೀರು

ರಾಯಚೂರು.ಏ.6- ಪರಿಸರ ಸಂರಕ್ಷಣೆ ವಿಷಯ ಕೇವಲ ಚರ್ಚೆ, ಭಾಷಣಕ್ಕೆ ಸೀಮಿತಗೊಳ್ಳುತ್ತಿದೆ. ಆದರೆ ನಗರದ ಬಿಜೆಪಿ ಮುಖಂಡ ಮುಕ್ತಿಯಾರ್ ಅವರ ಸ್ವಂತ ಖರ್ಚಿನಿಂದ ಸಸಿಗಳಿಗೆ ನೀರು ಹಾಕುವ ಕೆಲಸ ನಡೆಯುತ್ತಿದೆ.
ನಗರದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೂ ಹಾಗೂ ಬಸವೇಶ್ವರ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತದವರಿಗೆ ಸಸಿಗಳನ್ನು ನಡೆಸಲಾಗಿದ್ದು, ಬೇಸಿಗೆ ಕಾಲ ಆರಂಭವಾದ ಹಿನ್ನೆಲೆ ಸಸಿಗಳಿಗೆ ಸಮರ್ಪಕವಾಗಿ ನೀರು ದೊರೆಯದ ಕಾರಣ ಒಣಗಿ ಹೋಗುತ್ತಿವೆ. ಕಳೆದ ಹಲವು ದಿನಗಳಿಂದ ಮುಕ್ತಿಯಾರ್ ಅವರು ತಮ್ಮ ಸ್ವಂತ ನೀರಿನ ಟ್ಯಾಂಕರ್ ಬಳಸಿಕೊಂಡು ಸಸಿಗಳಿಗೆ ನೀರೊದಿಗಿಸುವ ಕೆಲಸ ಮಾಡಲಾಗುತ್ತಿದೆ. ಸ್ವತಃ ಮುಕ್ತಿಯಾರ್ ಅವರು ನಗರದ ಪ್ರಮುಖ ವೃತ್ತಗಳಲ್ಲಿ ಅಳವಡಿಸಲಾಗಿದ್ದ ಸಸಿಗಳಿಗೆ ನೀರಿನ ಸರಬರಾಜು ಮಾಡುತ್ತಿದ್ದಾರೆ. ಅವರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.

Leave a Comment