ಮುಕ್ತಾಯದ ಸನಿಹದಲ್ಲಿ ಪ್ರೀಮಿಯರ್ ಪದ್ಮಿನಿ

ಕಿರುತೆರೆಯಲ್ಲಿ ಮೋಡಿ ಮಾಡಿರುವ ನಿರ್ದೇಶಕಿ, ನಿರ್ಮಾಪಕಿ  ಶೃತಿ ನಾಯ್ಡು ಹಿರಿತೆರೆಗೆ ಬಡ್ತಿ ಪಡೆದಿದ್ದಾರೆ. ಹಾಗಂತ ಕಿರುತೆರೆಯನ್ನು ಮರೆತಿಲ್ಲ. “ಪ್ರೀಮಿಯರ್ ಪದ್ಮನಿ” ಮೂಲಕ ಬೆಳ್ಳಿತೆರೆಯಲ್ಲಿ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ.

ಶೃತಿ ತಾವೂ ಹಿರಿತೆರೆಗೆ ಪ್ರವೇಶಿಸುವ ಜೊತೆಗೆ ಕಿರಿತೆರೆ ನಿರ್ದೇಶಕ ರಮೇಶ್ ಇಂದಿರಾ ಅವರನ್ನು ಕರೆತಂದಿದ್ದಾರೆ.ಚಿತ್ರದಲ್ಲಿ ಹಿರಿಯ ನಟ ಜಗ್ಗೇಶ್ ಅವರಿಗೆ ಜೋಡಿಯಾಗಿ ಮಧುಬಾಲ ಕಾಣಿಸಿಕೊಂಡಿದ್ದಾರೆ. ಅವರಲ್ಲದೆ ಪ್ರಮೋದ್, ಹಿತಾ ಚಂದ್ರಶೇಖರ್,ಸೇರಿದಂತೆ ಯುವ ಮತ್ತು ಅನುಭವಿ ಕಲಾವಿದರ ದಂಡೇ ಚಿತ್ರದಲ್ಲಿದೆ.

premier-padmini_103

ಕಳೆದವಾರ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಮಾಧ್ಯಮದವರನ್ನು ಆಹ್ವಾನಿಸಿದ್ದ ಚಿತ್ರತಂಡ ಚಿತ್ರ ಬಗ್ಗೆ ಮಾಹಿತಿ ನೀಡಿತು. ಮೊದಲು ಮಾತಿಗಿಳಿದ ಶೃತಿ ನಾಯ್ಡು,ಸಣ್ಣ ಪುಟ್ಟ ಗೊಂದಲ ಸಮಸ್ಯೆಗಳಿಂದ ವಿಚ್ಛೇಧನ ನೀಡುತ್ತಿದ್ದಾರೆ.ಜೊತೆಗೆ ಹರೆಯದ ಮಕ್ಕಳನ್ನು ಪೋಷಕರು ಸರಿಯಾಗಿ ನೋಡಿಕೊಳ್ಳದಿದ್ದರೆ ಏನೆಲ್ಲಾ ಆಗಲಿದೆ ಎನ್ನುವ ಸೂಕ್ಷ್ಮತೆಗಳನ್ನು ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ. ಗಂಡ ಹೆಂಡತಿಯ ನಡುವಿನ ಸಮಸ್ಯೆಗಳನ್ನು ತೆರೆಯ ಮೇಲೆ ತರಲಾಗಿದೆ ಎಂದರು,

ನಿರ್ದೇಶಕ ರಮೇಶ್ ಇಂದಿರಾ, ಇನ್ನೂ ಹದಿನೈದು ದಿನಗಳ ಚಿತ್ರೀಕರಣ ಪೂರ್ಣಗೊಂಡರೆ ಚಿತ್ರ ಚಿತ್ರೀಕರಣ ಪೂರ್ಣಗೊಳಿಸಲಿದೆ. ಆ ನಂತರ ಯಾಗಾವ ಚಿತ್ರ ಬಿಡುಗಡೆ ಮಾಡಬೇಕು ಎನ್ನುವುದನ್ನು ನಿರ್ಧರಿಸಲಾಗುವುದು ಎಂದು ವಿವರ ನೀಡಿದರು.

premier-padmini_160

ನಟ ಜಗ್ಗೇಶ್, ಪ್ರತಿಯೊಂದು ಸೂಕ್ಷ್ಮತೆಗಳನ್ನು ತೆರೆಯ ಮೇಲೆ ತರಲಾಗಿದೆ. ಚಿತ್ರದ ಪಾತ್ರ ಮನಸ್ಸಿಗೆ ಹಿಡಿಸಿದೆ. ಈ ಚಿತ್ರದ ಮೂಲಕ ಪ್ರಶಸ್ತಿ ಬರಬಹುದೆನ್ನುವ ನಿರೀಕ್ಷೆ ಇದೆ. ಪಾತ್ರ ಮಾಡುವಾಗ ಅತ್ತಿರುವ ಉದಾಹಣೆಯೂ ಇದೆ. ಚಿತ್ರಕ್ಕೆ ಏನೆಲ್ಲಾ ಬೇಕೋ ಅದನ್ನು ನಿರ್ಮಾಪಕರು ಮತ್ತು ನಿರ್ದೇಶಕರು ತಯಾರಿ ಮಾಡಿಕೊಂಡಿದ್ದಾರೆ.

ಇದರ ಪರಿಣಾಮ ಚಿತ್ರ ಯಾವುದೇ ಅಡೆ ತಡೆಗೊಂದವಿಲ್ಲದೆ ಮುಗಿಯುವ ಹಂತಕ್ಕೆ ಬಂದಿದೆ.ಕಲವಿದರ ಸೈಕಾಲಜಿ ಅರ್ಥ ಮಾಡಿಕೊಂಡು ನಿರ್ದೇಶಕರು ಕೆಲಸ ಮಾಡುತ್ತಾರೆ ಇದು ಖುಷಿಯ ಸಂಗತಿ. ಎಲ್ಲರೂ ಉತ್ತಮ ಪ್ರಯತ್ನ ಮಾಡಿದ್ದಾರೆ. ಚಿತ್ರ ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸ ಅವರದು.

ಪ್ರತಿಯೊಬ್ಬರು ಮನೆಯ ಕೆಲಸ ಎಂದು ಅಚ್ಚುಕಟ್ಟಾಗಿಮಾಡುತ್ತಾರೆ ಇದು ಖುಷಿಯ ಸಂಗತಿ.ದಾಂಪತ್ಯ ಜೀವನದ ಸುತ್ತಾ ಸಾಗುವ ಕಥೆ ಎಲ್ಲರಿಗೂ ಇಷ್ಟವಾಗಲಿದೆ. ಹೆಂಡತಿಯ ಜೊತೆ ಯಾವುದೇ ಜಗಳ ಮಾಡಿಕೊಳ್ಳದಿದ್ದರೂ ಬೇರೆ ಬೇರೆಯಾಗುವ ಸನ್ನಿವೇಶ ಮನಸ್ಸಿಗೆ ನೋವು ತರಿಸಿದೆ. ಆ ನೋವಿನಲ್ಲಿಯೂ ಖುಷಿಯಿಂದ ವಿವಾಹ ವಿಚ್ಚೇಧನಕ್ಕೆ ಸಹಿ ಹಾಕುವ ಪಾತ್ರದಿಂದ ಮುಂದಿನ ದಿನಗಳಲ್ಲಿ ಮಹಿಳಾ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದರು.

ನಟಿ ಹಿತಾ ಚಂದ್ರಶೇಖರ್, ಪ್ರಮೋದ್ ಸೇರಿದಂತೆ ಚಿತ್ರತಂಡದ ಸದಸ್ಯರು ತಮ್ಮ  ಅನುಭವ ಹಂಚಿಕೊಂಡರು.

Leave a Comment