ಮುಂಬೈ

ಬಹು ನಿರೀಕ್ಷಿತ ಮುಂಬೈ ಚಿತ್ರ ಈ ವಾರ ಬಿಡುಗಡೆ ಯಾಗಿದೆ ಸುಮಾರು ೨೫೦ ಚಿತ್ರಮಂದಿರದಲ್ಲಿ ಚಿತ್ರವು ಬಿಡುಗಡೆಗೊಂಡಿದ್ದು ಎಲ್ಲಾ ವರ್ಗದ ಪ್ರೇಕ್ಷಕರನ್ನು ರಂಜಿಸಲಿದೆ ಎನ್ನುತ್ತಾರೆ ನಿರ್ಮಾಪಕ ರಾಮು.

ಗೋಲಿಬಾರ್ ಮೂಲಕ ನಿರ್ಮಾಪಕನಾಗಿ, ಹಲವು ಆಕ್ಷನ್ ಸಿನಿಮಾಗಳನ್ನು ತೆರೆಗೆ ತಂದು ಯಶಸ್ವಿಯಾಗಿದ್ದೇನೆ ಅದರಂತೆ ಮುಂಬೈ ಆಗಲಿದೆ ಎಂಬ ಆಶಾಭಾವನೆ ಇದೆ.ನಾಯಕ ಮದರಂಗಿ ಕೃಷ್ಣ ಇದರಿಂದ ಕಮರ್ಷಿಯುಲ್ ಹೀರೋ ಆಗಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಏಕೆ ೪೭ ಚಿತ್ರಕ್ಕೆಕಥೆ ಬರೆದಿದ್ದ ಎಸ್‌ಆರ್ ಬ್ರದರ್ರ್‍ಸ್ ಮುಂಬೈ ಚಿತ್ರಕ್ಕೂ ಕಥೆ ಬರೆದಿದ್ದು, ಎಸ್.ಆರ್. ಬ್ರದರ್ರ್‍ಸ್‌ರಲ್ಲಿ ಒಬ್ಬರಾದ ರಮೇಶ್‌ರವರೇ ಈ ಚಿತ್ರದ ನಿರ್ದೇಶಕರಾಗಿದ್ದಾರೆ ೧೯೯೯ರಲ್ಲಿ ಬಿಡುಗಡೆಯಾದ ಏಕೆ-೪೭ ಚಿತ್ರವು ಯಶಸ್ವಿಯಾಗಿತ್ತು. ಅದೇ ರೀತಿಯ ಯಶಸ್ಸನ್ನು ಮುಂಬೈ ಚಿತ್ರದಿಂದಲೂ ನಿರೀಕ್ಷಿಸಿದ್ದಾರೆ ಎಸ್.ಆರ್.ರಮೇಶ್.

ಚಿತ್ರೀಕರಣ ಮಾಡಲು ೫ ದಿನ ಕೇಳಿದರೆ, ಏಕೆ ಆತುರ ೭ ದಿವಸ ತೆಗೆದುಕೊಳ್ಳಿ. ಸಾಹಸ ದೃಶ್ಯಕ್ಕೆ ೪ ಕಾರು ಅವಶ್ಯಕತೆ ಇದೆ ಎಂದಾಗ, ಬೇಕಿದ್ದರೆ ೭ ಕಾರನ್ನು ಉಪಯೋಗಿಸಿ ಅಂತ ಹೇಳುತ್ತಾರೆ.ಬಳ್ಳಾರಿ, ಬೆಂಗಳೂರು, ಮುಂಬೈ ಕಡೆ ೧೩೦ ದಿನಗಳಲ್ಲಿ ಚಿತ್ರೀಕರಿಸಲಾಗಿದೆ ಇಂತಹ ಅಭಿರುಚಿ ಇರುವ ನಿರ್ಮಾಪಕರು ಇರುವುದರಿಂದಲೇ ಅವರ ಸಂಸ್ಥೆಯಿಂದ ೩೬ ಚಿತ್ರಗಳು ತೆರೆಕಂಡಿವೆ ಅದರಲ್ಲಿ ಬಹುಪಾಲು ಆಕ್ಷನ್ ಸಿನಿಮಾಗಳು ಅದೇ ರೀತಿಯಲ್ಲಿ ಮುಂಬೈ ಚಿತ್ರ ಮೂಡಿಬಂದಿದೆ ಎಂದು ರಮೇಶ್ ಹೇಳಿಕೊಂಡರು.

ಸಮಾಜದಲ್ಲಿ ನಡೆಯುವ ಘಟನೆಗಳನ್ನು ಆಧರಿಸಿ ಸಂಭಾಷಣೆ ಬರೆಯಲಾಗಿದೆ. ಮೊದಲ ಚಿತ್ರಕ್ಕೆ ದೊಡ್ಡ ಬ್ಯಾನರ್‌ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು ಸಂಭಾಷಣೆಕಾರ ಮನುಕಲ್ಯಾಣ್.

ಮೂರು ಸಿನಿಮಾ ಮಾಡಿದ ನನಗೆ ಕರೆ ಬಂದಾಗ ನಂಬಲಾಗಲಿಲ್ಲ. ಕಚೇರಿಗೆ ಹೋದಾಗ ಅಲ್ಲಿರುವ ಹಿಟ್ ಚಿತ್ರಗಳ ಪೋಸ್ಟರ್‌ಗಳನ್ನು ನೋಡಿ ಖುಷಿ, ಭಯ ಬಂತು. ಒಂದು ದೃಶ್ಯದಲ್ಲಿ ಹಳೇ ನೋಟು ಕಾಣಿಸುತ್ತದೆ. ಅದು ಇದ್ದರೆ ನೋಡುಗರಿಗೆ ತಪ್ಪು ಕಲ್ಪನೆ ಬರುತ್ತದೆಂದು ನಿರ್ಮಾಪಕರು ಮತ್ತೊಮ್ಮೆ ದೃಶ್ಯವನ್ನು ಬದಲಿಸಿದ್ದಾರೆ. ಇದು ಅವರು ಸಿನಿಮಾ ಮೇಲಿನ ಬದ್ದತೆ ತೋರಿಸುತ್ತದೆ ಎಂದರು ನಾಯಕ ಮದರಂಗಿಕೃಷ್ಣ.

ಚಿಂಗಾರಿಯಲ್ಲಿ ನನ್ನ ಸಣ್ಣ ಪಾತ್ರವನ್ನು ಇಷ್ಟಪಟ್ಟಿದ್ದ ರಮೇಶ್‌ರವರು ನಾನೇ ಬೇಕೆಂದು ಎರಡು ತಿಂಗಳು ಕಾದು ಅವಕಾಶ ಮಾಡಿಕೊಟ್ಟಿದ್ದಾರೆ. ಮೊದಲು ಗಂಡುಬೀರಿಯಾಗಿ, ನಂತರ ಬದಲಾವಣೆ ಬಯಸುವ ಪಾತ್ರ ಅಂತ ವಿವರಣೆ ನೀಡಿದರು ನಾಯಕಿ ತೇಜು.

Leave a Comment