ಮುಂಬೈ ನಂಟು; ಹಾಸನದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕ್ಕೆ 85 ಏರಿಕೆ: ಜಿಲ್ಲಾಧಿಕಾರಿ

ಹಾಸನ, ಮೇ 22-ಜಿಲ್ಲೆಯಲ್ಲಿ ಹೊಸದಾಗಿ 18 ಕೋವಿಡ್-19 ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 85 ಕ್ಕೆ ಏರಿಕೆಯಾಗಿದೆ.

ಇಂದು ವರದಿಯಾದ ಎಲ್ಲಾ ಪ್ರಕರಣಕ್ಕೆ ಮುಂಬೈ ಮೂಲದ ನಂಟಿದೆ. ಎಲ್ಲರೂ ಚನ್ನರಾಯಪಟ್ಟಣ ತಾಲ್ಲೂಕಿಗೆ ಸೇರಿದವಾರಗಿದ್ದಾರೆ. ಜಿಲ್ಲೆಗೆ ಮಹಾರಾಷ್ಟ್ರ ದಿಂದ ಅಗಮಿಸಿದವರಿಂದ ಕರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ.

ಕಳೆದ ವಾರವಷ್ಟೇ ಗ್ರೀನ್‌ ಝೋನ್‌ನಲ್ಲಿದ್ದ ಹಾಸನದಲ್ಲಿ ಏಕಾಏಕಿ ಸೋಂಕು ಕಾಣಿಸಿಕೊಂಡು ಇಂದಿಗೆ ಸೋಂಕಿತರ ಸಂಖ್ಯೆ 85ಕ್ಕೆ ಏರಿಕೆ. ಹೆಚ್ಚಾಗಿ ಮಹಾರಾಷ್ಟ್ರದಿಂದ ಬಂದವರಲ್ಲಿಯೇ ಸೋಂಕು ಕಾಣಿಸಿಕೊಂಡಿದ್ದು, ಎಲ್ಲರನ್ನೂ ಕ್ವಾರಂಟೈನ್‌ನಲ್ಲಿ ಇರಿಸಿರುವುದರಿಂದ ಸೋಂಕು ಹೆಚ್ಚಾಗಿ ಹರಡಿಲ್ಲ.

Leave a Comment