ಮುಂಬೈ ಖಾಸಗಿ ಆಸ್ಪತ್ರೆಯನ್ನೇ ಕೋವಿಡ್ ಹಾಟ್ ಸ್ಪಾಟ್ ಎಂದು ಘೋಷಣೆ

ಮುಂಬೈ : ಮಹಾರಾಷ್ಟ್ರದಲ್ಲಿ ಮಾರಕ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಅತಿ ಹೆಚ್ಚು ಮಂದಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಏತನ್ಮಧ್ಯೆ, ಮುಂಬೈನ ಖಾಸಗಿ ಆಸ್ಪತ್ರೆ ವಾಕಾರ್ಟ್ ನ ಮೂವರು ವೈದ್ಯರು ಹಾಗೂ 26 ನರ್ಸ್ ಗಳಲ್ಲಿ ಮಾರಕ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನೇ ಕೊರೊನಾ ಹಾಟ್ ಸ್ಪಾಟ್ ಎಂದು ಘೋಷಿಸಲಾಗಿದೆ. ಅಲ್ಲದೇ, ಆಸ್ಪತ್ರೆಯನ್ನು ಬಂದ್ ಮಾಡಲಾಗಿದೆ.

ಇದರೊಂದಿಗೆ ಆಸ್ಪತ್ರೆಯಲ್ಲಿ ಈ ಮಟ್ಟಿಗೆ ಸೋಂಕು ಹರಡಲು ಕಾರಣವೇನೆಂದು ಪತ್ತೆ ಹಚ್ಚಲು ಮುಂದಾಗಿರುವ ಕೇಂದ್ರ ಸರ್ಕಾರ ತನಿಖೆಗೂ ಆದೇಶಿಸಿದೆ. ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಸೋಂಕು ತಗುಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಲು ಎರಡು ಬಾರಿ ವೈದ್ಯಕೀಯ ತಪಾಸಣೆ ನಡೆಸಲು ನಿರ್ಧರಿಸಿದ್ದು, ಮುನ್ನೆಚ್ಚರಿಕೆಯಾಗಿ ಬಂದ್ ಮಾಡಲಾಗಿದೆ.

ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಚೀನಾ ಕೈಗೊಂಡಿದ್ದ ಕ್ರಮವನ್ನೇ ಭಾರತದಲ್ಲಿ ಅನುಸರಿಸಲಾಗುತ್ತಿದ್ದು, ಸೋಂಕಿತ ಪ್ರದೇಶವನ್ನು ಒಂದು ತಿಂಗಳವರೆಗೆ ನಿರ್ಬಂಧಿಸಲಾಗುತ್ತದೆ. ಅದರಂತೆ ಈಗ ಮುಂಬೈನ ವಾಕಾರ್ಟ್ ಆಸ್ಪತ್ರೆಯನ್ನು ಒಂದು ತಿಂಗಳ ವರೆಗೆ ಬಂದ್ ಮಾಡಲು ನಿರ್ಧರಿಸಲಾಗಿದೆ. ಕನಿಷ್ಟ 4 ವಾರಗಳ ಕಾಲ ನಿರ್ದಿಷ್ಟ ಪ್ರದೇಶದಿಂದ ಹೊಸ ಸೋಂಕು ಪತ್ತೆಯಾಗದಿದ್ದರೆ ಮಾತ್ರ ಈ ನಿರ್ಬಂಧ ತೆರವು ಗೊಳಿಸಲಾಗುತ್ತದೆ…

Leave a Comment