ಮುಂಬೈ ಕಟ್ಟಡ ಕುಸಿತ; ಮೃತರ ಕುಟುಂಬಕ್ಕೆ ಪ್ರಧಾನಿ ಸಂತಾಪ

ನವದೆಹಲಿ, ಜುಲೈ 16 – ಮುಂಬೈ ನ ಡೋಂಗ್ರಿ ಪ್ರದೇಶದ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಕುರಿತು ಪ್ರಧಾನಿ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಕಚೇರಿಯಿಂದ ಹೊರಬಿದ್ದಿರುವ ಟ್ವೀಟ್ ನಲ್ಲಿ ಅವರು, ‘ಮುಂಬೈ ಡೋಂಗ್ರಿಯ ಕಟ್ಟಡ ಕುಸಿತ ನೋವು ತಂದಿದೆ. ದುರ್ಘಟನೆಯಲ್ಲಿ ಜೀವ ಕಳೆದುಕೊಂಡವರ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದಿದ್ದಾರೆ.
‘ಗಾಯಾಳುಗಳು ಶೀಘ್ರ ಸುಧಾರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಮಹಾರಾಷ್ಟ್ರ ಸರ್ಕಾರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಹಾಗೂ ಸ್ಥಳೀಯ ಆಡಳಿತ ರಕ್ಷಣಾ ಕಾರ್ಯದಲ್ಲಿ ತೊಡಗಿವೆ’ ಎಂದಿದ್ದಾರೆ.
ದಕ್ಷಿಣ ಮುಂಬೈನ ಡೋಂಗ್ರಿ ಪ್ರದೇಶದಲ್ಲಿ ಬಹುಮಹಡಿ ಕಟ್ಟಡ ಕುಸಿತದಿಂದ ಕನಿಷ್ಠ 12 ಜನರು ಮೃತಪಟ್ಟಿದ್ದು, ಹಲವರು ಕಟ್ಟಡದ ಅವಶೇಷಗಳಡಿ ಸಿಲುಕಿರುವುದು ವರದಿಯಾಗಿದೆ.

Leave a Comment