ಮುಂಬೈನಿಂದ ಕರೆ ಮಾಡಿ ಬೆದರಿಸಿದ್ರೆ ಜೈಲು!

ಉಡುಪಿ ಡಿಸಿ ವಾರ್ನಿಂಗ್

ಉಡುಪಿ, ಮೇ ೨೩ ಮುಂಬೈನಿಂದ ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ಕ್ವಾರಂಟೈನ್ ವಿಚಾರಕ್ಕೆ ಸಂಬಂಧಿಸಿ ಕೆಲಮಂದಿ ಕಿಡಿಗೇಡಿಗಳು ಫೋನ್ ಕರೆ ಮಾಡಿ ಬೆದರಿಸುತ್ತಿರುವ ಘಟನೆಗಳು ಬೆಳಕಿಗೆ ಬಂದಿದ್ದು ಅಂತವರಿಗೆ ಉಡುಪಿ ಡಿಸಿ ಜಿ. ಜಗದೀಶ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ನಿನ್ನೆ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಂಸದೆ ಶೋಭಾ ಕಂರದ್ಲಾಜೆ ಅಧ್ಯಕ್ಷತೆಯಲ್ಲಿ ಕರೆಯಲಾದ ಸಭೆಯಲ್ಲಿ ಅವರು ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೇನ್ ವಿಚಾರವಾಗಿ ಮುಂಬೈಯಲ್ಲಿ ಕುಳಿತು ಕೆಲವರು ಕರೆ ಮಾಡಿ ಜಿಲ್ಲಾಡಳಿತ ಮತ್ತು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ನಾವು ಇಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದರೂ ಅದನ್ನು ಗಮನಿಸದೆ ಕಿಡಿಗೇಡಿಗಳು ವಾರ್ತನೆ ತೋರುತ್ತಿದ್ದಾರೆ. ಅವರನ್ನು ಮುಂಬೈನಿಂದ ಕರೆದುಕೊಂಡು ಬಂದು ಶಿಕ್ಷಿಸಲಾಗುವುದು, ಇನ್ನೂ ಕೆಲವರು ವಾರ್ಯ್ಸ್ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ, ಅವರನ್ನು ಜೈಲಿಗಟ್ಟುವ ಕಾರ್ಯ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Leave a Comment