ಮುಂಬರುವ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ

ಪಿರಿಯಾಪಟ್ಟಣ, ಸೆ.6- ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದೆಂದು ಕರ್ನಾಟಕ ರಿಪಬ್ಲಿಕನ್ ಸೇನಾ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ತಿಳಿಸಿದರು.
ಪಟ್ಟಣ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲೋಕಸಭಾ ಚುನಾವಣೆ ನಿರ್ಣಾಯಕ ಹಾಗೂ ಪೈಪೋಟಿಯಿಂದ ಕೂಡಿದೆ. ಕೋಮುವಾದ ಹಾಗೂ ಭ್ರಷ್ಟಾಚಾರ ವಿರುದ್ದ ಹೋರಾಡುವ ಸಲುವಾಗಿ ಬಾಬಸಾಹೇಬ್ ಅಂಬೇಡ್ಕರ್‍ರವರ ಮೊಮ್ಮಗ ರಾಷ್ಟ್ರಾಧ್ಯಕ್ಷ ಆನಂದ್‍ರಾಜ್ ಮಾರ್ಗದರ್ಶನದಲ್ಲಿ ರಾಜ್ಯದಾದ್ಯಂತ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.
ಮುಂಬರುವ ಲೋಕಸಭಾ ಚುನಾವಣೆಗೆ ಸಂಭವಿತ ಅಭ್ಯರ್ಥಿಗಳ ಪಟ್ಟಿ ತಯಾರಾಗಿದ್ದು ಅದರಲ್ಲಿ 9 ಮಂದಿ ಮುಸ್ಲಿಂ ಜನಾಂಗ, 6 ಮಂದಿ ಪರಿಶಿಷ್ಟ ಜನಾಂಗ, 4 ಮಂದಿ ಪರಿಶಿಷ್ಟ ಪಂಗಡದವರು 3 ಮಂದಿ ಮಹಿಳೆಯರು ಉಳಿದಂತೆ ವಿದ್ಯಾವಂತ ಯುವಕರು ಹಾಗೂ ಸಾಮಾಜಿಕ ಜನಪರ ಕಾಳಜಿವುಳ್ಳ ಅಭ್ಯಗಳನ್ನು ಕಣಕ್ಕಿಳಿಸಲು ತಿರ್ಮಾನಿಸಲಾಗಿದೆ. ರಾಷ್ಟ್ರಾಧ್ಯಕ್ಷ ಆನಂದ್‍ರಾಜ್‍ರವರು ಸಹ ಕೋಲಾರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದರು. ಚುನಾವಣೆಯಲ್ಲಿ ಸ್ಪರ್ಧಿಸುವವರು ಕೇವಲ ಹಣ ಹಾಗೂ ಜಾತಿ ಬಲ ಹೊಂದಿಲ್ಲದೆ ಉತ್ತಮ ಹೆಸರುಳ್ಳ ಅಭ್ಯರ್ಥಿಗಳು ಚುನಾವಣಗೆ ಸ್ಪರ್ಧಿಸಬಹುದು ಎಂಬುದಕ್ಕೆ ನಮ್ಮ ಪಕ್ಷದ ಅಭ್ಯರ್ಥಿಗಳು ಸಾಕ್ಷಿಯಾಗಲಿದ್ದಾರೆ ಎಂದರು.
ಇದೇ ಸಂದರ್ಭ ಶಿವಮೊಗ್ಗ ಜಿಲ್ಲೆಗೆ ವಿಜಯ್‍ಕುಮಾರ್, ಚಿಕ್ಕಮಗಳೂರಿಗೆ ಕಲೀಲ್, ಬೆಂಗಳೂರು ದಕ್ಷಿಣಕ್ಕೆ ಚಂದ್ರಶೇಖರ್‍ಬಾಬು, ಮಂಡ್ಯಕ್ಕೆ ದುಗ್ಗನಹಳ್ಳಿ ಮಹದೇವಪ್ಪ, ಮೈಸೂರು ಜಿಲ್ಲೆಗೆ ಪಿರಿಯಾಪಟ್ಟಣದ ರಶೀದ್ ಅಹಮ್ಮದ್‍ರವರನ್ನು ಸಂಭಾವ್ಯ ಅಭ್ಯರ್ಥಿಗಳಾಗಿ ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಮಹದೇವಪ್ಪ, ರಶೀದ್‍ಅಹಮ್ಮದ್, ಟಿ.ಹೆಚ್.ನಾಗರಾಜು, ಚಂದ್ರಶೇಖರ್‍ಬಾಬು, ಎಂ.ಎಸ್.ರಾಮು, ಮುನಿರಾಜ್, ಮನ್ಸೂರ್, ನಿಸಾರ್ ಹಾಜರಿದ್ದರು.

Leave a Comment