ಮುಂದುವರೆದ ಚೆಕ್ ಪೋಸ್ಟ್ ತಪಾಸಣೆ  ಸೋಂಕು ಪರೀಶೀಲನೆ ಪರಿಕರ ಇಲ್ಲ.

ಬಳ್ಳಾರಿ,ಮಾ.26: ಕರೋನಾ ರೋಗ ಸಾಂಕ್ರಮಿಕವಾಗಿ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಮುಂಜಾಗ್ರತ ಕ್ರಮವಾಗಿ ಜಿಲ್ಲೆಗೆ ಹೊರ ರಾಜ್ಯಗಳಿಂದ ಮತ್ತು ಹೊರ ಜಿಲ್ಲೆಗಳಿಂದ ಬರುವ ವಾಹನಗಳಲ್ಲಿನ ಜನರನ್ನು ತಪಾಸಣೆ ಮಾಡಿ ಬಿಡಲು ಸ್ಥಾಪಿಸಲಾಗಿರುವ ಚೆಕ್‍ಪೋಸ್ಟ್‍ಗಳ ಕಾರ್ಐ ಮುಂದುವರೆದಿದೆ. ಆದರೆ ಇಲ್ಲ ಸೋಂಕು ಪರಿಶೀಲನೆಯ ಪರಿಕರ ಥರ್ಮಾ ಮೀಟರ್ ಮಾತ್ರ ಇಲ್ಲ, ಇಲ್ಲಿರುವ ಸಿಬ್ಬಂದಿ ಎಲ್ಲಿಂದ ಬಂದೀರಿ, ಎಲ್ಲಿಗೆ ಹೋಘುತ್ತೀರಿ ಎಂದು ಪರಿಶೀಲನೆ ಮಾಡುತ್ತಿದೆ.

ಅನಗತ್ಯವಾಗಿ ಜಿಲ್ಲೆಗೆ ಬರುವುದು ಕಂಡುಬಂದಲ್ಲಿ ಚೆಕ್‍ಪೋಸ್ಟ್ ಬಳಿಯೇ ಅಂತವರನ್ನು ನಿಷೇಧಿಸಿ ವಾಪಸ್ ಕಳುಹಿಸಲಾಗುತ್ತಿದೆ. ಜಿಲ್ಲೆಯಿಂದ ಹೊರಹೋಗುವವರನ್ನು ಸಹ ಯಾವ ಕಾರಣಕ್ಕಾಗಿ ಹೋರಹೋಗಲಾಗುತ್ತಿದೆ, ಮತ್ತೇ ಮರಳಿ ಬಂದರೇ ಜಿಲ್ಲೆಯೊಳಗೆ ಪ್ರವೇಶವಿಲ್ಲ ಎಂಬ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿ ಹೊರಬಿಡಲಾಗುತ್ತಿದೆ.

ಸಂಶಯಾಸ್ಪದ ಪ್ರಕರಣಗಳು ಕಂಡುಬಂದಲ್ಲಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವ ಕೆಲಸವೂ ಈ ಚೆಕ್‍ಪೋಸ್ಟ್‍ಗಳಲ್ಲಿ ಮಾಡಲಾಗುತ್ತಿದೆ. ಕಂದಾಯ,ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಈ ಚೆಕ್‍ಪೋಸ್ಟ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Leave a Comment