ಮುಂದುವರೆದ ಕಾರ್ಯಾಚರಣೆ : 4 ಬುಕ್ಕಿ ಬಂಧನ

ರಾಯಚೂರು.ಏ.21- ದೇವದುರ್ಗ ಪಟ್ಟಣಾದ್ಯಂತ ಮಟ್ಕಾ ದಂಧೆಗೆ ಕಡಿವಾಣ ಹಾಕುವ ಪೊಲೀಸರ ಕಾರ್ಯಾಚರಣೆ ತೀವ್ರಗೊಂಡು ಸಾರ್ವಜನಿಕ ಪ್ರದೇಶದಲ್ಲಿ ಮಟ್ಕಾ ಬರೆಯುವಲ್ಲಿ ನಿರತರಾಗಿದ್ದ ಅಡ್ಡೆ ಮೇಲೆ ಪ್ರತ್ಯೇಕ ದಾಳಿ ನಡೆಸಿದ ದೇವದುರ್ಗ ಠಾಣಾ ಪೊಲೀಸರು ನಾಲ್ವರು ಬುಕ್ಕಿಗಳನ್ನು ನ್ಯಾಯಾಂಗ ವಶಕ್ಕೆ ಪಡೆದು ಬಂಧಿತರಿಂದ 5,03,152 ನಗದು ಜಪ್ತಿ ಮಾಡಲಾಗಿದೆ.

ಪಟ್ಟಣ ವ್ಯಾಪ್ತಿಗೆ ಬರುವ ಗೋಪಳಾಪೂರ, ಅರಕೇರಾ ಗ್ರಾಮದಲ್ಲಿ ಮಟ್ಕಾ ಚೀಟಿ ಬರೆಯುವ ಖಚಿತ ಮಾಹಿತಿಯನ್ನಾಧರಿಸಿ ಏಕಕಾಲಕ್ಕೆ ಪ್ರತ್ಯೇಕ ದಾಳಿ ನಡೆಸಿದ ಎ‌ಎಸ್‌ಪಿ ಲೋಕೇಶ್ ನೇತೃತ್ವದ ಸಿಪಿಐ ದೌಲತ್ ಎನ್.ಕುರಿ, ಚಿದಾನಂದ, ನಿಂಗಪ್ಪ, ದೇವಪ್ಪ, ರಮೇಶ, ಸಂಗಪ್ಪ ಹಾಗೂ ಮೌಲಾ ಹುಸೇನ್, ಸಿಬ್ಬಂದಿ ವರ್ಗ ದಂಧೆಯಲ್ಲಿ ತೊಡಗಿದ್ದ ಪರಮಣ್ಣ ಗೋಪಳಾಪೂರ, ರಾಚಯ್ಯಸ್ವಾಮಿ, ದೇವಪ್ಪ ಗಣೇಕಲ್ ಹಾಗೂ ನಾಗಯ್ಯಸ್ವಾಮಿ ಎನ್ನುವ ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ 5,03,152 ನಗದು ಸಮೇತ ಮಟ್ಕಾ ಸಾಮಾಗ್ರಿ ಜಪ್ತಿ ಮಾಡಲಾಗಿದೆ.
ಈ ಸಂಬಂಧ ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Leave a Comment