ಮುಂದುವರಿದ ಹುಲಿ ದಾಳಿ ; ಮರಿಗಳೊಂದಿಗೆ ಬೀಡು ಬಿಟ್ಟಿರುವ ಶಂಕೆ ?

ಹುಣಸೂರು, ಆ.25- ಹನಗೂಡು ಹೋಬಳಿ ಕೆ.ಜಿ.ಹಬ್ಬನಕುಪ್ಪೆ ಗ್ರಾಮದ ತರಗನ್ ಎಸ್ಟೇಟ್‍ನಲ್ಲಿ ಕಳೆದ ಹತ್ತು ದಿನದಿಂದ ಬೀಡುಬಿಟ್ಟಿರುವ ಹುಲಿ ನಿನ್ನೆ ಪುನಃ ಹಸುವೊಂದರ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವುದು ಅಧಿಕಾರಿಗಳಲ್ಲಿ ಹಾಗೂ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿರುವುದರೊಂದಿಗೆ ಹುಲಿ ತನ್ನ ಇರುವಿಕೆಯನ್ನು ಸ್ಪಷ್ಟಪಡಿಸಿದೆ.
ನಿನ್ನೆ ಗ್ರಾಮದ ಕಾವೇರಪ್ಪ ತಮ್ಮ ಹಸುವನ್ನು ಎಸ್ಟೇಟ್‍ನಲ್ಲಿ ಮೇಯಲು ಬಿಟ್ಟ ಸಮಯದಲ್ಲಿ ಹುಲಿ ದಾಳಿ ಮಾಡಿದ್ದು, ದಾಳಿಗೆ ಹೆದರಿದ ಹಸುವಿನ ಅರಚ್ಚಾಟಕ್ಕೆ ಆನೆ ಮೂಲಕ ಕೊಂಬಿಗ್ ನಡೆಸುತ್ತಿದ್ದ ತಂಡ ಸ್ಥಳಕ್ಕೆ ತೆರಳಿದಾಗ ಹುಲಿ ಕಣ್ಮರೆಯಾಗಿದೆ.
ಹುಲಿ ಸೆರೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮೊನ್ನೆ ಸ್ಥಳಕ್ಕೆ ಬಂದು ಪರೀಶಿಲಿಸಿ ಶತಾಯಗತಾಯ ಹುಲಿ ಸೆರೆ ಹಿಡಿಯುವ ಎಲ್ಲಾ ಪ್ರಯತ್ನ ಮುಂದುವರೆಸುವಂತೆ ಸೂಚಿಸಿದ್ದಾರೆ.
ನಿರ್ದಿಷ್ಟ ಸ್ಥಳದಲ್ಲಿ ಸತತ ಹತ್ತು ದಿನದಿಂದ ಹುಲಿ ಮೊಕ್ಕಾಂ ಹೂಡಿರುವುದರಿಂದ ಅದರೊಂದಿಗೆ ಎರಡರಿಂದ ಮೂರು ಮರಿಗಳು ಇರುವ ಅನುಮಾನವನ್ನು ತಳ್ಳಿ ಹಾಕುವಂತಿಲ್ಲ ಎಂದು ಕೆಲ ಗ್ರಾಮಸ್ಥರು ಹಾಗೂ ಅರಣ್ಯ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

Leave a Comment