ಮುಂದಿನ ಸಿಜೆಐ ಆಗಿ ರಂಜನ್ ಗೊಗೊಯ್, ಮಿಶ್ರಾ ಶಿಫಾರಸು

ನವದೆಹಲಿ, ಸೆ. ೪- ಸುಪ್ರೀಂ ಕೋರ್ಟ್‌ನ ಎರಡನೇ ಅತ್ಯಂತ ಹಿರಿಯ ನ್ಯಾಯಾಧೀಶರಾದ ರಂಜನ್ ಗೊಗೊಯ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಕ ಮಾಡುವಂತೆ ಭಾರತದ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಶಿಫಾರಸು ಮಾಡಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಅಕ್ಟೋಬರ್ 1 ರಂದು ಮಿಶ್ರಾ ಅವರ ಕೊನೆಯ ಕೆಲಸದ ದಿನವಾಗಿದ್ದು, ಅಕ್ಟೋಬರ್ 2 ಸಾರ್ವತ್ರಿಕ ರಜಾದಿನವಾಗಿರುವ ಕಾರಣ, ಅಕ್ಟೋಬರ್ 3 ರಂದು ಗೊಗೊಯ್ ಅಧಿಕಾರ ಸ್ವೀಕರಿಸಲಿದ್ದಾರೆ.
ಮುಂದಿನ ವರ್ಷ ನವೆಂಬರ್ 17ರವರೆಗೆ ನ್ಯಾಯಮೂರ್ತಿ ಗೊಗೊಯ್ ಮುಖ್ಯನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಲಿದ್ದಾರೆ.

Leave a Comment