ಮುಂದಿನ ವರ್ಷ ಅಲಿಬಾಬಾ ಉಪಾಧ್ಯಕ್ಷ ರಾಜೀನಾಮೆ

ಬೀಜಿಂಗ್, ಸೆ. ೧೦- ಚೀನಾದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರಾದ ಬ್ಯಾಕ್‌ಮಾ ಮುಂದಿನ ವರ್ಷ ಅಲಿಬಾಬಾ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಾಗಿ ಇಂದಿಲ್ಲಿ ಪ್ರಕಟಿಸಿದ್ದಾರೆ.
ಅವರು ಬೃಹತ್ ಇ ಕಾಮರ್ಸ್ ಸಂಸ್ಥೆಯ ಸಿಇಒ ತಮ್ಮ ಸ್ಥಾನಕ್ಕೆ ಬರಲಿದ್ದಾರೆ ಎಂದು ತಮ್ಮ 54ನೇ ಹುಟ್ಟುಹಬ್ಬದ ದಿನವಾದ ಇಂದು ಪ್ರಕಟಿಸಿದರು. ಅಧಿಕಾರ ಹಸ್ತಾಂತರ ಸುಲಲಿತವಾಗಿ ಆಗುವತ್ತ ತಾವು ಉಪಾಧ್ಯಕ್ಷರಾಗಿರುವ ಒಂದು ವರ್ಷದ ಅವಧಿಯಲ್ಲಿ ಮಾ ಶ್ರಮಿಸಲಿದ್ದಾರೆ.
ಅವರು 46 ವರ್ಷದ ಡೇನಿಯಲ್ ಝಾಂಗ್ ಅವರಿಗೆ ಬೀಗದ ಕೈಗಳನ್ನು ನೀಡಲಿದ್ದಾರೆ ಎಂದು ದಿ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.
2019ರ ಸೆ. 10 ರಂದು ಝಾಂಗ್ ಅವರನ್ನು ಅಲಿಬಾಬಾದ ಕಾರ್ಯಾಧ್ಯಕ್ಷರ ಸ್ಥಾನಕ್ಕೆ ಬಡ್ತಿ ನೀಡಲಾಗುತ್ತಿದೆ.

Leave a Comment