ಮುಂದಿನವಾರ ಬಣ್ಣಗಳು

ಯುವಜನರನ್ನು ಕೇಂದ್ರೀಕರಿಸಿ ಚಿತ್ರೀಕರಣ ಮಾಡಿರುವ “ಒಂಥರಾ ಬಣ್ಣಗಳು” ಚಿತ್ರ ಮುಂದಿನವಾರ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

ಚಿತ್ರದಲ್ಲಿ ಯೋಗೇಶ್ ನಾರಾಯಣ್,ಪ್ರವೀಣ್ ಕುಮಾರ್, ಸೋನುಗೌಡ, ಹಿತಾ ಚಂದ್ರ ಶೇಖರ್ ಸೇರಿದಂತೆ ಮೂವರು ಹುಡುಗರು ಮತ್ತು ಇಬ್ಬರು ಹುಡುಗಿಯರ ಸುತ್ತಾ ಸಾಗುವ ಕಥೆಯನ್ನು ಚಿತ್ರ ಒಳಗೊಂಡಿದೆ ಎಂದು ಹೇಳಿಕೊಂಡರು ನಿರ್ದೇಶಕ ಸುನೀಲ್ ಭೀಮರಾವ್. ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಹುಡುಗರು ಜೀವನದ ಜಂಜಾಟ ಮರೆತು ಪ್ರವಾಸ ಹೊರಡುತ್ತಾರೆ ಅವರಿಗೆ ಇಬ್ಬರು ಹುಡುಗಿಯರೂ ಸೇರಿಕೊಳ್ಳುತ್ತಾರೆ.

ಬೆಂಗಳೂರಿನಿಂದ ಬಾದಾಮಿಗೆ ಹೋಗುವ ಮಾರ್ಗ ಮಧ್ಯೆ ಹುಡುಗರ ತುಂಟಾಟ, ಚೆಲ್ಲಾಟ ಮತ್ತು ಜೀವನದ ಕತೆ ಅನಾರವಣವಾಗಲಿದೆ ಎಲ್ಲರೂ ಉತ್ತಮವಾಗಿ ನಟಿಸಿದ್ದಾರೆ ಎಂದು ಹೇಳಿಕೊಂಡರು ನಿರ್ದೇಶಕರು. ನಟಿ ಸೋನುಗೌಡ ಮಾತನಾಡಿ, ಹಳ್ಳಿಯಿಂದ ನಗರಕ್ಕೆ ಬರುವ ಹುಡುಗಿಯ ಪಾತ್ರ ನನ್ನದು. ಸ್ನೇಹಿತೆಯ ಜೊತೆ ಸೇರಿಕೊಂಡು ನಾನು ಪ್ರವಾಸ ಹೋಗುತ್ತೇನೆ ಅಲ್ಲಿ ಏನೆಲ್ಲಾ ಆಗಲಿದೆ ಎನ್ನುವುದು ಚಿತ್ರದ ಕುತೂಹಲ ಎಂದು ಹೇಳಿಕೊಂಡರು.

ಹಿತಾ ಚಂದ್ರ ಶೇಖರ್ ಒಳ್ಳೆಯ ಪಾತ್ರ ಸಿಕ್ಕಿದೆ. ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ಮತ್ತಷ್ಟು ಗುರುತಿಸಿಕೊಳ್ಳುವಂತಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

Leave a Comment