ಮುಂಡ್ರಿಗಿ ಲೇಔಟ್ ಗೆ ಮುಂದಿನ ತಿಂಗಳು ಭೂಮಿಪೂಜೆ

ಬಳ್ಳಾರಿ, ಸೆ.4: ಬಹು ನಿರೀಕ್ಷಿತ ನಗರದ ಹೊರ ವಲಯದಲ್ಲಿ 300 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಮುಂಡ್ರಿಗಿ ಲೇಔಟ್ ಗೆ ಮುಂದಿನ ತಿಂಗಳು ಭೂಮಿ ಪೂಜೆ ನೆರವೇರಿಸಲಿದೆ ಎಂದು ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಈ ಲೇಔಟ್ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ. ಜಿ+2 ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಆಂಧ್ರ ಪ್ರದೇಶ ಆದೋನಿಯಲ್ಲಿ ನಿರ್ಮಾಣವಾಗಿರುವ ಕಟ್ಟಡದ ಮಾದರಿಯನ್ನು ಪರಿಗಣಿಸಿದೆ.

ಈ ಮಾದರಿಯನ್ನು ಸದ್ಯ ನಗರದ ಜಿಲ್ಲಾ ಆಸ್ಪತ್ರೆ ಎದುರಿನ ನಿವೇಶನದಲ್ಲಿ 12 ಮನೆಗಳ ನಿರ್ಮಾಣ ಕಾರ್ಯ ನಡೆದಿದೆ. ಈ ಮನೆಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿಗೆ ಜಿಲ್ಲಾ ಖನಿಜ ಅಭಿವೃದ್ಧಿ ನಿಧಿಯಿಂದ ನಿರ್ಮಿಸುತ್ತಿದೆ.

ಒಂದೊಂದು ಮನೆಯ ವೆಚ್ಚ 5 ರಿಂದ 5ವರೆ ಲಕ್ಷ ಆಗಲಿದೆ. ಮುಂಡರಗಿ ಯೋಜನೆಗೆ ಈಗಾಗಲೇ ಲಾಟರಿ ಮೂಲಕ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಈ ಮನೆಗಳನ್ನು ನೀಡುತ್ತಿದೆ. ಸರ್ಕಾರ ವಿವಿಧ ಆಶ್ರಯ ಯೋಜನೆಯಡಿ ದೊರೆಯುವ ಅನುದಾನದ ಜೊತೆ ಉಳಿದ ಮೊತ್ತವನ್ನು ಪ್ರಗತಿಕೃಷ್ಣಾ ಗ್ರಾಮೀಣ ಬ್ಯಾಂಕಿನಿಂದ ಪಡೆದು ಫಲಾನುಭವಿಗಳು ಧೀರ್ಘಾವಧಿ ಸಾಲದ ರೂಪದಲ್ಲಿ ತೀರಿಸಬೇಕಿದೆ.

ಈ ಲೇಔಟ್ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಒಂದು ಹೊಸ ಮಾದರಿ ನಗರವಾಗಿ ನಿರ್ಮಾಣವಾಗುತ್ತಿದ್ದು ಶಾಲೆ ಕಾಲೇಜು, ಪೊಲೀಸ್ ಸ್ಟೇಷನ್, ಆಸ್ಪತ್ರೆ, ಅಂಚೆ ಕಛೇರಿ ಸೇರಿ ವಿವಿಧ ನಾಗರೀಕ ಸೇವಾ ಸೌಲಭ್ಯಗಳ ಕಛೇರಿಗಳು ಇರಲಿವೆ.

ಈ ಲೇಔಟ್ ಗೆ ಅಲ್ಲಿಪುರ ಜಲಾಶಯ ಬಳಿಯಿಂದ 45 ಕೋಟಿ ರೂಪಾಯಿ ವೆಚ್ಚದಿಂದ ಶುದ್ಧ ನೀರನ್ನು ಸರಬರಾಜು ಮಾಡುವ ಯೋಜನೆ ರೂಪಿಸಿದೆ. ಸದಾ ನೀರು ದೊರೆಯಲಿದೆ. ಇಲ್ಲಿನ ಜನರಿಗೆಂದರು.

ಇಲ್ಲಿ 40 ಎಕರೆ ಪ್ರದೇಶದಲ್ಲಿ ಪರಿಸರ ಸ್ನೇಹಿ ಕೈಗಾರಿಕಾ ವಲಯ ರೂಪಿಸಿದ್ದು ಗಾರ್ಮೆಂಟ್ ಆಹಾರ ಸಂಸ್ಕರಣೆ, ಸಣ್ಣ ಪ್ರಮಾಣದ ಘಟಕಗಳನ್ನು ಆರಂಭಿಸಲು ಉದ್ದೇಶಿಸಿದೆ ಎಂದು ತಿಳಿಸಿದರು.

Leave a Comment