ಮುಂಡಗೋಡ : ಸಂಭ್ರಮದ ಬಕ್ರೀದ್

ಮುಂಡಗೋಡ ಆ.23 :-ತ್ಯಾಗ ಮತ್ತು ಬಲಿದಾನದ ಸಂದೇಶ ಸಾರುವ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ತಾಲೂಕಿನಾದ್ಯಂತ ಶ್ರದ್ಧಾಭಕ್ತಿ ಸಂಭ್ರಮದಿಂದ ಆಚರಣೆ ಮಾಡಿದರು.
ಪಟ್ಟಣದ ನೂರಾನಿ ಮಸೀದಿ, ಮದೀನಾ ಮಸೀದಿ, ರಜಾಕೀಯಾ ಮಸಿದಿ, ಬಿಲಾಲ್ ಮಸೀದಿ ಹಾಗೂ ಮಕ್ಬೂಲಿಯಾ ಮಸೀದಿಗಳಲ್ಲಿ ಹಾಗೂ ತಾಲೂಕಿನ ಹಳ್ಳಿಗಳ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಿ ಹಬ್ಬದ ಶುಭಾಶಯಗಳನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡರು.

Leave a Comment