ಮುಂಡಗೋಡ ಪ.ಪಂ. ಚುನಾವಣೆ ಬಿಜೆಪಿ, ಕಾಂಗ್ರೆಸ್‍ನಲ್ಲಿ ಭುಗಿಲೆದ್ದ ಬಂಡಾಯ !

ಮುಂಡಗೋಡ ಆ.23 :-ಮುಂಡಗೋಡ ಪಟ್ಟಣ ಪಂಚಾಯತ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರತೊಡಗಿದೆ. ಕಳೆದ 5ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ ಕಾಣದ ಉಭಯ ಪಕ್ಷಗಳ ಸದಸ್ಯರ ಬಗ್ಗೆ ಅಸಮಾಧಾನಗೊಂಡ ಮತದಾರರಲ್ಲಿ ಈ ಹಿಂದೆ ಇದ್ದ ಹಳೆಯ ಮುಖಗಳನ್ನು ಬದಲಾಯಿಸಿ ಹೊಸ ಮುಖಗಳ ಆಯ್ಕೆಯ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.
ಈ ನಡುವೆ ಪಕ್ಷದ ಟಿಕೆಟ್ ಸಿಗದೇ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಉಭಯ ಪಕ್ಷಗಳ ಅಭ್ಯರ್ಥಿಗಳು ಚುನಾವಣೆಯ ಸ್ಪರ್ಧೆಗೆ ಸಜ್ಜಾಗಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಅವರನ್ನು ಮನವೊಲಿಸುವುದು ಹರಸಾಹಸವಾಗಿದೆ. ಸಾಮಾನ್ಯ ಮೀಸಲಾತಿ ಹೊಂದಿರುವ ವಾರ್ಡಗಳಲ್ಲಿ ಬಂಡಾಯ ಅಭ್ಯರ್ಥಿಗಳ ಭರಾಟೆ ಜೋರಾಗಿ ನಡೆದಿದೆ. ಇದರಿಂದ ಪಕ್ಷದ ಅಭ್ಯರ್ಥಿಗಳಿಗೆ ಆಯ್ಕೆಯಾಗಿ ಬರುವುದು ಸುಲಭದ ಮಾತಲ್ಲ ಎಂದು ಕೇಳಿ ಬರುತ್ತಿದೆ. ವಾರ್ಡ ನಂ.2, 3, 7 ಮತ್ತು 14ರಲ್ಲಿ ಸಾಮಾನ್ಯ ಮೀಸಲಾತಿ ಹಾಗೂ ವಾರ್ಡ ನಂ.9ರಲ್ಲಿ ಸಾಮಾನ್ಯ ಮಹಿಳೆ ಮೀಸಲಾತಿ ಹೊಂದಿದ್ದು ಈ ವಾರ್ಡಗಳಲ್ಲಿ ಬಹುತೇಕ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಬಂಡಾಯ ಅಭ್ಯರ್ಥಿಗಳ ಸೆಣಸಾಟ ನಡೆದಿದೆ.  ಇನ್ನೊಂದು ಕಡೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದ ಅಭ್ಯರ್ಥಿಗಳು ಎರಡು ವಾರ್ಡಗಳಲ್ಲಿ ಬೇರೆ ಪಕ್ಷದಿಂದ ಟಿಕೆಟ್ ಪಡೆದು ಬಂಡಾಯದ ಬಿಸಿ ತಟ್ಟಿಸಿದ್ದಾರೆ.
ಉಭಯ ಪಕ್ಷಗಳ ಹಿರಿಯ ಮುಖಂಡರು ಈಗಾಗಲೇ ಬಂಡಾಯ ಅಭ್ಯರ್ಥಿಗಳ ಮನವೊಲಿಸಲು ಪ್ರಯತ್ನ ನಡೆಸಿದ್ದಾರೆ. ಇವರ ಮಾತಿಗೆ ಮಣಿದು ಬಂಡಾಯ ಅಭ್ಯರ್ಥಿಗಳು ತೆದುಕೊಳ್ಳುವ ನಿರ್ಣಯವೇನಾಗಬಹುದು ಎಂದು ಕಾದು ನೋಡಬೇಕಾಗಿದೆ.
ಒಟ್ಟು 85ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. 10ವಾರ್ಡಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದೇ 21ಬಂಡಾಯ ಅಭ್ಯರ್ಥಿಗಳಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ ಸಿಗದೇ 7ವಾರ್ಡಗಳಲ್ಲಿ 12ಅಭ್ಯರ್ಥಿಗಳು ಬಂಡಾಯವೆದ್ದಿದ್ದಾರೆ.
ರವಿಗೌಡ ಪಾಟೀಲ(ತಾಲೂಕಾ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ) :-ಶಾಸಕ ಶಿವರಾಮ ಹೆಬ್ಬಾರ ಜತೆಗೂಡಿ ನಾವೆಲ್ಲ ಪಕ್ಷದ ಹಿರಿಯ ಮುಖಂಡರು ಪಕ್ಷದಿಂದ ಟಿಕೆಟ್ ನೀಡಿದವರಿಗೆ ಬೆಂಬಲಿಸಲು ಅಸಮಾಧಾನಗೊಂಡವರಿಗೆ ಮನವೊಲಿಸುತ್ತೇವೆ ಮತ್ತು ಟಿಕೆಟ್ ವಾಪಸ್ ಪಡೆಯಲು ಕೇಳಿಕೊಳ್ಳುತ್ತೇವೆ.
ಅಶೋಕ ಚಲವಾದಿ(ಬಿಜೆಪಿ ಜಿಲ್ಲಾ ಎಸ್.ಸಿ.ಮೋರ್ಚಾ ಅಧ್ಯಕ್ಷ) :-ಪಕ್ಷ ಬೆಳೆದಂತೆ ಆಕಾಂಕ್ಷಿಗಳ ಪಟ್ಟಿ ಬೆಳೆಯುವುದು ಸ್ವಾಭಾವಿಕ. ಅಸಮಾಧಾನವಿದ್ದರೂ ನಾವೆಲ್ಲಾ ಹಿರಿಯರು ಸೇರಿ ಸಮಸ್ಯೆಯಿದ್ದ ವಾರ್ಡಗಳಲ್ಲಿ ಚರ್ಚೆ ಮಾಡಿ ಪಕ್ಷಕ್ಕೆ ಪೂರಕವಾಗಿ ನಡೆಯುವಂತೆ ಮಾಡುತ್ತೇವೆ. ಪಕ್ಷದ ಚೌಕಟ್ಟನ್ನು ಮೀರಿ ನಮ್ಮ ಅಭ್ಯರ್ಥಿಗಳು ಹೋಗುವುದಿಲ್ಲ. ಟಿಕೆಟ್ ವಾಪಸ್ ಪಡೆಯುವಂತೆ ಮನವೊಲಿಸುತ್ತೇ

Leave a Comment