’ಮೀ ಟೂ’ ಮೌನ ಮುರಿದ ಅಮೀರ್ ಖಾನ್

ನವದೆಹಲಿ, ಅ .೧೧-ದೇಶಾದ್ಯಂತ ವಿವಾದದ ಬಿರುಗಾಳಿ ಎಬ್ಬಿಸಿರುವ ಲೈಂಗಿಕ ಕಿರುಕುಳ ಮೀ ಟೂ ಆಂದೋಲನ ಬಲು ಜೋರಾಗಿಯೇ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ, ಮೌನ ಮುರಿದಿರುವ ಬಾಲಿವುಡ್ ನಟ ಅಮಿರ್ ಖಾನ್, ಇಂತಹ ಆರೋಪಗಳಿಗೆ ಗುರಿಯಾಗಿರುವವರ ಜೊತೆ ಕೆಲಸ ಮಾಡದೆ ದೂರ ಉಳಿಯುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಟ್ವಿಟರ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಲೈಂಗಿಕ ಕಿರುಕುಳದಂತಹ ವರ್ತನೆಯಿಂದ ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಂಡಿರುವುದಾಗಿ ಹೇಳಿದರು.

ಎರಡು ವಾರಗಳ ಹಿಂದೆ ಮೀ ಟೂ ಆಂದೋಲನ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳಕಿಗೆ ಬಂದಿತ್ತು. ಈ ಬಗ್ಗೆ ಕೆಲವರು ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಎದುರಿಸುತ್ತಿರುವವರ ಜೊತೆ ಕೆಲಸ ಮಾಡುತ್ತೀರಾ ಎಂದು ತಮ್ಮ ಗಮನ ಸೆಳೆದಿದ್ದರು. ಇಂತಹ ಪ್ರಕರಣಗಳ ಬಗ್ಗೆ ನ್ಯಾಯ ಸಮ್ಮತ ರೀತಿಯಲ್ಲಿ ತನಿಖೆ ಹಾಗೂ ಕಾನೂನು ಪ್ರಕ್ರಿಯೆಗೂ ಚಾಲನೆ ನೀಡಬೇಕೆಂದು ಅಮಿರ್ ಖಾನ್ ಮತ್ತು ಪತ್ನಿ ಕಿರಣ್ ರಾವ್ ಸಹಿ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯಾರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅಥವಾ ಯಾವುದೇ ವ್ಯಕ್ತಿಯ ಪರ ತೀರ್ಪು ನೀಡಲು ತಾವು ತನಿಖಾ ಸಂಸ್ಥೆಯಲ್ಲ. ತಾವು ’ಥಗ್ಸ್ ಆಫ್ ಹಿಂದೋಸ್ತಾನ್’ವಿ ಚಲನ ಚಿತ್ರದಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ.

ಲೈಂಗಿಕ ಕಿರುಕುಳ ನೀಡಿರುವ ಕುರಿತು ವಿವಿಧ ಸೆಲೆಬ್ರಿಟಿಗಳ ವಿರುದ್ದ ಕೇಳಿ ಬಂದಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಆವರು, ಚಲನಚಿತ್ರ ರಂಗದಲ್ಲಿ ಆತ್ಮವಿಶ್ವಾಸ ಮೂಡಿಸುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಬದಲಾವಣೆ ತರುವ ಅಗತ್ಯವಿದೆ ಎಂದು ಹೇಳಿದರು.

ಗುಲ್ಶನ್ ಕುಮಾರ್ ನಿರ್ಮಾಣದ ಚಲನಚಿತ್ರದಿಂದ ಹಿಂದೆ ಸರಿದಿರುವ ನಟ ಅಮೀರ್ ಖಾನ್ ನಿರ್ಧಾರವನ್ನು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಶಾಮೀಲಾಗಿರುವ ನಿರ್ದೇಶಕ ಸುಭಾಶ್ ಕಪೂರ್ ಹೇಳಿದ್ದಾರೆ.

ಈ ಮಧ್ಯೆ, ನಟಿ ದೀಪಿಕಾ ಅಮೀನ್ ಮುಂಬೈನಲ್ಲಿ ಪ್ರತಿಕ್ರಿಯೆ ನೀಡಿ, ಹಿರಿಯ ನಟ ಆಲೋಕ್ ಲೈಂಗಿಕ ಕಿರುಕುಳ ನೀಡಿರುವುದು ಬಾಲಿವುಡ್ ಚಿತ್ರರಂಗದಲ್ಲಿ ಪ್ರತಿಯೊಬ್ಬರಿಗೂ ತಿಳಿದ ವಿಚಾರ ಎಂದು ಹೇಳುವ ಮೂಲಕ ಮೀ ಟೂ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾರೆ.

ಈ ಸಂಬಂಧ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, ಅಲೋಕ್‌ನಾಥ್ ಓರ್ವ ಮದ್ಯವ್ಯಸನಿ ಹಾಗೂ ಕಿರುಕುಳ ನೀಡುವ ವ್ಯಕ್ತಿ ಎಂದು ದೂರಿದ್ದಾರೆ. ಇತ್ತೀಚೆಗಷ್ಟಢ ’ಸೋನು ಕೀ ಟಿಟು ಕಿ ಸ್ವೀಟಿ’ ಯಲ್ಲಿ ಅಮಿನ್ ಅಲೋಕ್‌ನಾಥ್ ಜೊತೆ ನಟಿಸಿದ್ದಳು. ಟೆಲಿಫಿಲಂಗಾಗಿ ಹೊರಾಂಗಣ ಚಿತ್ರೀಕರಣಕ್ಕೆ ತೆರಳಿದ ವೇಳೆ ಕೊಠಡಿಗೆ ನುಗ್ಗಲು ಯತ್ನಿಸಿದ್ದರು ಎಂದು ಬರೆದುಕೊಂಡಿದ್ದಾರೆ.

ನನ್ನ ಸುತ್ತ ಚಿತ್ರೀಕರಣ ತಂಡವಿದ್ದ ಕಾರಣ ತಾವು ಸುರಕ್ಷಿರವಾಗಿ ಪಾರಾದೆ ಎಂದು ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

Leave a Comment