ಮೀರತ್‌ನಲ್ಲಿ ಲಘು ಭೂಕಂಪನ

ಹೊಸದಿಲ್ಲಿ.ಸೆ.೧೦-ಉತ್ತರ ಪ್ರದೇಶದ ಮೀರಠ್ ಜಿಲ್ಲೆ ಖಾರ್ಕೋಡದಲ್ಲಿ ಇಂದು ಬೆಳಗ್ಗೆ ಲಘು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪ ತೀವ್ರತೆ ೩.೬ ರಷ್ಟು ದಾಖಲಾಗಿದೆ ಎಂದು ಅಮೆರಿಕದ ಜಿಯೋಗ್ರಾಫಿಕಲ್ ಸರ್ವೆ ಹೇಳಿದೆ.

ಬೆಳಿಗ್ಗೆ ೬.೨೮ರ ವೇಳೆಗೆ ೧೦ ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ. ದೆಹಲಿ ಹಾಗೂ ಉತ್ತರ ಪ್ರದೇಶದ ಹಲವೆಡೆಗಳಲ್ಲಿ ಕೂಡಾ ಕಂಪನದ ಅನುಭವವಾಗಿದೆ. ಆದರೆ ಯಾವುದೇ ಸಾವು ನೋವು ಹಾಗೂ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಕುರಿತು ಮಾಹಿತಿ ದೊರೆತಿಲ್ಲ
ಹರ್ಯಾಣದ ಝಜ್ಜಾರ್ ಜಿಲ್ಲೆಯಲ್ಲಿ ರವಿವಾರ ಮಧ್ಯಾಹ್ನ ರಿಕ್ಟರ್ ಮಾಪಕದಲ್ಲಿ ೩.೮ರಷ್ಟು ತೀವ್ರತೆ ಭೂಕಂಪ ದಾಖಲಾದ ೨೪ ಗಂಟೆಯೊಳಗಾಗಿ ಪಕ್ಕದಲ್ಲೇ ಮತ್ತೆ ಭೂಕಂಪವಾಗಿರುವುದು ಆತಂಕಕಕ್ಕೆ ಕಾರಣವಾಗಿದೆ.
ರವಿವಾರ ಸಂಜೆ ೪.೩೭ಕ್ಕೆ ೧೦ ಕಿಲೋಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

 

Leave a Comment