ಮೀನ

ಈ ವರ್ಷ 11.10.2018ರವರೆಗೆ 8ನೇ ಗುರು ಅಶುಭನಿರುವನು. ನಂತರ 29.03.2019ರವರೆಗೆ 9ನೇ ಗುರು ಬಲಿಷ್ಟನಿದ್ದಾನೆ. ತರುವಾಯ 5.4.2019ರವರೆಗೆ 10ನೇ ಗುರು ಮಿಶ್ರಫಲದಾಯಕನಿರುವನು. ಶನಿಯು ವರ್ಷಪೂರ್ತಿ 10ನೆಯವನಿದ್ದಾನೆ. ಇತರ ಗ್ರಹಗಳ ಬಲಗಳನ್ನು ಪರಿಶೀಲಿಸಲಾಗಿ 9ನೇ ಗುರು ಆರ್ಥಿಕ ಮುಗ್ಗಟ್ಟನ್ನು ದೂರಮಾಡಿ ಸಂಪನ್ಮೂಲಗಳನ್ನು ಹೆಚ್ಚಿಸುವನು. ಜೀವನ ಸುಖವಾಗಿದ್ದು, ಸಾಮಾಜಿಕ ವಲಯದಲ್ಲಿ ಕೀರ್ತಿ ಪಡೆಯುವಿರಿ. ಆರೋಗ್ಯಭಾಗ್ಯ ತೃಪ್ತಿಕರವಾಗಿರುತ್ತದೆ. ಉದ್ಯೋಗದಲ್ಲಿ ಪ್ರಗತಿಯಾಗಲಿದೆ. ಮಕ್ಕಳು ಅಧ್ಯಯನದಲ್ಲಿ ಶ್ರದ್ಧೆ ತೋರುವರು. ಪರೀಕ್ಷೆಯಲ್ಲಿ ಉತ್ತೀರ್ಣ ಫಲಿತಾಂಶ ಹೊರಬೀಳುವುದು. ಪ್ರೌಢ ವ್ಯಾಸಂಗಕ್ಕೆ ವಿದೇಶ ಶಿಕ್ಷಣ ಬಯಕೆ ವ್ಯಕ್ತಪಡಿಸುವರು. ಕ್ರೀಡಾರಂಗದ ಸಾಧಕರು ಗೆಲುವು ಪಡೆದು ಚಿನ್ನದ ಪದಕ ಹೊಂದುವರು. ರೈತರು ಮುಂಗಾರು – ಹಿಂಗಾರು ಬೆಳೆಗಳನ್ನು ಸಮೃದ್ಧವಾಗಿ ಬೆಳೆದು ಲಾಭ ಪಡೆಯುವರು. ಜಾನುವಾರುಗಳ ರಕ್ಷಣೆಯನ್ನು ಮಾಡುವರು. ಉಳುಮೆ ಯಂತ್ರ ಖರೀದಿಯಾಗುವುದು. ವ್ಯಾಪಾರಿಗಳು ಆದಾಯ ಪಡೆಯಲು ಹಗಲು – ಇರುಳು ಶ್ರಮಿಸುವರು. ನೌಕರರಿಗೆ ಕಾಲಬಲವಿಲ್ಲ. ಅಧಿಕಾರಿಯ ಸ್ವಭಾವಕ್ಕೆ ಅನುಕೂಲವಾಗಿ ಕಾರ್ಯ ಮಾಡಿರಿ. ವೈವಾಹಿಕ ಜೀವನ ಆನಂದಮಯ. ಬಾಳಸಂಗಾತಿ ನಿಮ್ಮ ಸಹಾಯಕ್ಕೆ ನೆರಳಾಗಿ ನಿಲ್ಲುವಳು. ವರ್ಷದ ಕೊನೆಯ 3 ತಿಂಗಳು ಹೆಚ್ಚಿನ ಆದಾಯ ಬಯಸದೇ ಯಥಾಸ್ಥಿತಿಯಲ್ಲಿ ಜೀವನ ನಡೆಸುವುದೇ ಒಳಿತು. ಸಾಹಿತಿ, ಕಲಾವಿದ, ರಂಗಕರ್ಮಿಗಳು, ವೈದ್ಯರು ಸುಖಾಂತ ಜೀವನ ನಡೆಸುವರು. ಮಹಿಳೆಗೆ ವಿವಾಹಯೋಗ ಕೂಡಿಬರುವುದು. ಈ ವರ್ಷ ನಿಮ್ಮ ಆರೋಗ್ಯವನ್ನು ಆಗಾಗ್ಗೆ ತಪಾಸಣೆ ಮಾಡಿಸುತ್ತಲೇ ಇರಬೇಕು.

ಆದಾಯ – 5, ವ್ಯಯ – 5.