.ಮೀನುಗಾರಿಕೆ ಮಹಾಮಂಡಳಿ ನಿರ್ದೇಶಕರಾಗಿ ಹೆಚ್.ಜಿ.ಮಂಜಪ್ಪ

ದಾವಣಗೆರೆ, ಜು. 12 – ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿ ನಿಗಮದ ಚುನಾವಣೆಯಲ್ಲಿ ಸ್ಪರ್ಧಿಸಿ ನಿರ್ದೇಶಕನಾಗಿ ಜಯಸಾಧಿಸಿದ್ದೇನೆ ಎಂದು ಕುಂದುವಾಡ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಹೆಚ್.ಜಿ.ಮಂಜಪ್ಪ ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಕಳೆದ ಜುಲೈ 5 ರಂದು ರಾಜ್ಯ ಸಹಕಾರ ಮೀನುಗಾರಿಕೆ ಮಹಾಮಂಡಳಿ ನಿಗಮ ಮೈಸೂರು ಇದರ 5 ವರ್ಷ ಅವಧಿಗೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಸ್ಪರ್ಧಿಸಿ ನಿರ್ದೇಶಕನಾಗಿ ಆಯ್ಕೆಯಾಗಿದ್ದೇನೆ. ರಾಜ್ಯದಲ್ಲಿ 11 ಸ್ಥಾನಕ್ಕೆ ಚುನಾವಣೆ ನಡೆದಿತ್ತು.ಮೀನುಗಾರರಿಗೆ ಬೇಕಾಗಿರುವ ಸೌಲಭ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದರು. ಸುದ್ದಿಗೋಷ್ಟಿಯಲ್ಲಿ ಅಂಜಿಬಾಬು, ಸುರೇಶ್, ಹೆಚ್.ಎಂ.ಚಿರಂಜೀವಿ ಇದ್ದರು.

Leave a Comment