ಮೀನುಗಾರಿಕಾ ದೋಣಿ ಅವಘಡ: ನಾಲ್ವರು ಗಾಯ

ಮಂಜೇಶ್ವರ, ಸೆ.೧೨- ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ದೋಣಿ ಬಿರುಗಾಳಿಗೆ ಸಿಲುಕಿ ಮಗುಚಿ ನಾಲ್ವರು ಗಾಯಗೊಂಡ ಘಟನೆ ಮೂಸೋಡಿ ಎಂಬಲ್ಲಿ ನಿನ್ನೆ ನಡೆದಿದೆ. ಮಂಜೇಶ್ವರ ನಿವಾಸಿಗಳಾದ ಮೊಹಮ್ಮದ್ ಕುಂಞಿ(೫೮), ಖಾತಿಮ್(೫೩), ಸವಾದ್(೩೨), ಖಲೀಲ್(೩೫) ಗಾಯಗೊಂಡಿದ್ದು ಇವರನ್ನು ಉಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರು ನಿನ್ನೆ ಮುಂಜಾನೆ ಮೀನುಗಾರಿಕೆಗೆ ದೋಣಿ ಮೂಲಕ ತೆರಳಿದ್ದರು. ಕಡಲೊಳಗೆ ಒಂದಷ್ಟು ದೂರ ಸಾಗುತ್ತಿರುವಂತೆ ಗಾಳಿ ಹಾಗೂ ಹೆದ್ದೆರೆಗೆ ಸಿಲುಕಿದ ದೋಣಿ ನಿಯಂತ್ರಣ ಕಳಕೊಂಡು ಮುಗುಚಿ ಬಿದ್ದು ಬೃಹತ್ ತಡೆಗೋಡೆಗೆ ಬಡಿದು ಅಪಘಾತಕ್ಕೀಡಾಗಿದೆ.

Leave a Comment