ಮೀನುಗಾರರ ಸುಳಿವಿಲ್ಲ

ತಮ್ಮ ಹೇಳಿಕೆಯನ್ನೇ ಸುಳ್ಳೆಂದ ಗೃಹಸಚಿವರು!

ಉಡುಪಿ, ಜ.೧೨- ಮಲ್ಪೆ ಸಮುದ್ರ ತೀರದಿಂದ ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟ್ ಹಾಗೂ ಮೀನುಗಾರರ ಬಗ್ಗೆ ಸುಳಿವು ಸಿಕ್ಕಿದೆ. ಆದರೆ ಸುಳಿವಿನ ಕುರಿತು ತನಿಖೆಯ ದೃಷ್ಟಿಯಿಂದ ಈಗಲೇ ಏನನ್ನೂ ಹೇಳಲಾಗದುಎಂದಿದ್ದ ಗೃಹಸಚಿವ ಎಂ.ಬಿ.ಪಾಟೀಲ್ ಇಂದು ಮತ್ತೆ ವಿಭಿನ್ನ ಹೇಳಿಕೆ ನೀಡಿದ್ದಾರೆ. ಮೀನುಗಾರರ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನುವ ಮೂಲಕ ತಮ್ಮದೇ ಹೇಳಿಕೆಯನ್ನು ಸುಳ್ಳು ಎಂದಿರುವುದು ಮೀನುಗಾರರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

 

ಕೆಲದಿನಗಳ ಹಿಂದೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದ ಗೃಹಸಚಿವರು ಮೀನುಗಾರರ ಪತ್ತೆಗೆ ರಾಜ್ಯ ಸರಕಾರ ಶ್ರಮಿಸುತ್ತಿದೆ. ಅವರ ಬಗ್ಗೆ ಖಚಿತ ಸುಳಿವು ಕೂಡಾ ಸಿಕ್ಕಿದೆ. ಆದರೆ ಅದೆಲ್ಲವನ್ನೂ ಮಾಧ್ಯಮಗಳಿಗೆ ಹೇಳಲಾಗದು ಎಂದಿದ್ದರು. ಆದರೆ ಇಂದು ತಮ್ಮ ಹೇಳಿಕೆ ಸುಳ್ಳು, ಅವರ ಬಗ್ಗೆ ಸುಳಿವು ಸಿಕ್ಕಿಲ್ಲ. ಮೀನುಗಾರರನ್ನು ಹುಡುಕಲು ತಾವೂ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿರುವುದು ಗೊಂದಲಕ್ಕೆ ಕಾರಣವಾಗಿದೆ. ರಾಜ್ಯ ಸರಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಮೀನುಗಾರ ಸಂಘಟನೆಗಳು ಆರೋಪಿಸುವ ಮಧ್ಯೆಯೇ ಗೃಹಸಚಿವರ ಈ ಹೇಳಿಕೆ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

Leave a Comment