ಮಿಸ್‌ಇಂಡಿಯಾ ಗೆದ್ದ ಸುಮನ್ ರಾವ್ ಫಿಟ್‌ನೆಸ್ ರಹಸ್ಯ

 

ಕಳೆದ ಶನಿವಾರ ಮುಂಬೈನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ೨೦೧೯ರ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡ ೨೦ ವರ್ಷದ ಚೆಲುವೆ ರಾಜಸ್ಥಾನದ ಸುಮನ್ ರಾವ್ ಅವರ ಅಂದಚೆಂದ ಕಂಡ ಫ್ಯಾಷನ್ ತಜ್ಞರು ಆಕೆಯ ಹಿಂದೆ ಬಿದ್ದಿದ್ದಾರೆ ಎನ್ನಬಹುದು. ಇದೀಗ ಅವರ ಫಿಟ್‌ನೆಸ್ ಮಂತ್ರ ಕೇಳಿ ಇನ್ನಷ್ಟು ಅಚ್ಚರಿಗೊಂಡಿದ್ದಾರೆ.

ಸದ್ಯ ಎರಡನೇ ವರ್ಷದ ಸಿಎ ಪರೀಕ್ಷೆ ಎದುರಿಸಿರುವ ಸುಮನ್ ರಾವ್ ತಮ್ಮ ಸೌಂದರ್ಯಕ್ಕೆ ತಕ್ಕಂತೆ ಫಿಟ್‌ನೆಸ್ ಕಾಪಾಡಿಕೊಂಡಿದ್ದಾರೆ. ಅವರ ಫಿಟ್‌ನೆಸ್ ಮಂತ್ರ ತಿಳಿದ ಸೌಂದರ್ಯ ತಜ್ಞರು ನಿಜಕ್ಕೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗಲ್ಫ್ ನ್ಯೂಸ್‌ನಲ್ಲಿ ಮಾತನಾಡಿರುವ ಸುಮನ್ ರಾವ್ ಅವರು ದೇವರ ಕೃಪೆಯಿಂದ ನನ್ನ ದೈಹಿಕ ಸೌಂದರ್ಯ ಚೆನ್ನಾಗಿದೆ. ಅದಕ್ಕಾಗಿ ನಾನು ಯಾವ ಕಸರತ್ತು ಆಗಲಿ, ಹೆಚ್ಚು ವ್ಯಾಯಾಮ ಮಾಡುವುದಿಲ್ಲ, ಆದರೆ ಒಳಸೌಂದರ್ಯಕ್ಕಾಗಿ ಸಾಕಷ್ಟು ಶ್ರಮಿಸಿದ್ದೇನೆ, ಸಿಎ ಪರೀಕ್ಷೆಗಾಗಿ ತಯಾರಿ ಮಾಡುಲು ಶುರು ಮಾಡಿದ ನಂತರ ಯಾವುದಕ್ಕೂ ಹೆಚ್ಚು ಸಮಯ ಸಿಗುವುದಿಲ್ಲ, ಮುಚ್ಚಿದ ಕೋಣೆಯಲ್ಲಿ ಸದಾ ಪುಸಕ್ತ ಹಿಡಿದು ಓದುವುದೇ ಅಭ್ಯಾಸವಾಗಿಬಿಟ್ಟಿದೆ. ಹಾಗಾಗಿ ಫಿಟ್‌ನೆಸ್ ಕಾಯ್ದುಕೊಳ್ಳಲೆಂದು ಯಾವ ಅಭ್ಯಾಸ ಮಾಡಿಕೊಂಡಿಲ್ಲ, ಮುಂದೆ ನೋಡೋಣ ಎಂದಿದ್ದಾರೆ. ಸಿಎ ಪರೀಕ್ಷೆಯಲ್ಲಿರುವ ಹಲವಾರು ಹಂತಗಳನ್ನು ಒಂದೇ ಬಾರಿ ಮುಗಿಸುವ ಗುರಿ ಹೊಂದಿದ್ದೇನೆ. ಬೇರೆ ವಿದ್ಯಾರ್ಥಿಗಳಂತೆ ಹೊರಗಡೆ ಸುತ್ತಾಡಿ ಹರಾಟೆ ಹೊಡೆಯುವುದು ನನಗೆ ಅಭ್ಯಾಸವಿಲ್ಲ, ನಿಜವಾಗಿಯೂ ಮೊದಲ ನಾನು ಜನರ ಬಳಿ ಹೇಗೆ ಮಾತನಾಡಬೇಕು ಹಾಗೂ ಹೇಗೆ ಹೊಂದಾಣಿಕೆಯಾಗಬೇಕು ಎಂಬುಂದನ್ನು ಕಲಿಯಬೇಕಿದೆ ಎಂದು ಹೇಳಿದ್ದಾರೆ.

ಇನ್ನು ಈ ದೊಡ್ಡ ಗೆಲುವಿನ ಬಗ್ಗೆ ಮಾತನಾಡುತ್ತಾ ಸ್ಫರ್ಧೆಯಲ್ಲಿ ಟಾಪ್ ೩ರಲ್ಲಿ ಆಯ್ಕೆಯಾಗಬಹುದು ಎಂದುಕೊಂಡಿದ್ದೆ, ಆದರೆ ನಾನೇ ಗೆಲ್ಲುತ್ತೇನೆ ಎಂದುಕೊಂಡಿರಲಿಲ್ಲ, ನಿಜಕ್ಕೂ ಆ ಗೆಲುವು ಭಾರಿ ಸಂತಸ ತಂದಿದೆ ಎಂದರು.
ಮೆಂಟರ್ ನೇಹಾ ದುಫಿಯಾ ಹಾಗೂ ದಿಯಾ ಮಿರ್ಜಾ ಅವರ ಬಗ್ಗೆ ಮೆಚ್ಚುಗೆ ಮಾತನಾಡಿದ್ದ ಸುಮನ್ ರಾವ್ ಅವರು ಮೆಂಟರ್‌ಗಳ ಮಾತಿನ ವೈಖರಿ, ಫ್ಯಾಷನ್ ಲೋಕದ ಜ್ಞಾನ ಹಾಗೂ ಮಾಡೆಲಿಂಗ್‌ಗೆ ಬೇಕಾದ ವರ್ಚಸ್ಸು ಎಲ್ಲಾವು ಅದ್ಭುತ ಎಂದು ಹೇಳಿಕೊಂಡಿದ್ದಾರೆ. ಒಬ್ಬ ಮಾಡೆಲ್‌ಗೆ ಬೇಕಾದ ಧೈರ್ಯ, ನಂಬಿಕೆ, ತಾವು ಇಡುವ ಪ್ರತಿ ಹೆಜ್ಜೆಯಲ್ಲಿ ಉರುಪು ತುಂಬುವಂತೆ ನೇಹಾ ದುಫಿಯಾ ನೋಡಿಕೊಳ್ಳುತ್ತಾರೆ. ಅಂತಹ ಮೆಂಟರ್‌ಗಳು ನನ್ನಂತಹ ಎಷ್ಟು ಜನಕ್ಕೆ ಸ್ಫೂರ್ತಿದಾಯಕ, ಅವರಿಂದ ನನ್ನಲ್ಲಿಯೂ ಧೈರ್ಯ ಬಂತು, ನಾನು ಜನರೊಂದಿಗೆ ಹೇಗೆ ಮಾತನಾಡಬಲ್ಲೇ ಎಂಬುದನ್ನು ಕಲಿತುಕೊಂಡೆ ಎಂದು ಮೆಂಟರ್‌ಗಳ ಬಗ್ಗೆ ಗುಣಗಾನ ಮಾಡಿದ್ದಾರೆ.

ಸ್ಫರ್ಧೆಯಲ್ಲಿ ಭಾಗವಹಿಸಿದ್ದ ಇತರೆ ೨೯ ಚೆಲುವೆಯರು ಹಾಗೂ ನಾನು ಸಹೋದರಿಯಂತೆ ಜೊತೆಯಾಗಿದ್ದೇವು, ನಾವು ಸ್ಫರ್ಧೆಯಲ್ಲಿದ್ದೇವೆ ಎಂದು ಯಾರ್‍ಯಾರು ಬೇರೆ ಬೇರೆಯಗಿ ಇರುತ್ತಿರಲಿಲ್ಲ, ನಮ್ಮದ್ದು ಅತ್ಯತ್ತುಮ ಬ್ಯಾಚ್ ಆಗಿತ್ತು. ಪ್ರತಿ ಕ್ಷಣವನ್ನು ನಾವು ಸಂಭ್ರಮಿಸಿ ಖಷಿಪಡುತ್ತಿದ್ದೇವು, ಜೊತೆ ಜೊತೆಯಾಗಿ ಸಮಯ ಕಳೆದು ಅನಿಸಿಕೆ, ಅಭಿಪ್ರಾಯ ಹಂಚಿಕೊಂಡು ಸ್ಪರ್ಧೆಗೆ ತಯಾರಿ ನಡೆಸಿದ್ದೆವು ಎಂದು ಸುಮನ್ ಹೇಳಿಕೊಂಡಿದ್ದಾರೆ. ಅಷ್ಟೆ ಅಲ್ಲ ನಾವು ಎಂದಿಗೂ ಕ್ಯಾಟ್ ಫೈಟ್ ಮಾಡಿಕೊಂಡಿಲ್ಲ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಇನ್ನು ನಾನು ಕೂಡ ಮಬ್ಬಾದ ಚರ್ಮದ ಕಾಂತಿ ಹೊಂದಿದ್ದೇನೆ, ಆದರೆ ನನ್ನಲ್ಲಿ ಆತ್ಮಸ್ಥೆರ್ಯವಿತ್ತು, ಆದು ನನ್ನ ಸೌಂದರ್ಯ ಹೆಚ್ಚಿಸುವಂತೆ ಮಾಡಿದೆ ಎಂದು ಹೇಳುವ ಸುಮನ್ ರಾವ್ ಮುಂಬರುವ ೨೦೧೯ರ ಡಿಸೆಂಬರ್ ೭ ರಂದು ಥೈಲ್ಯಾಂಡ್‌ನ ಪಾಟಿಯಾದಲ್ಲಿ ನಡೆಯಲಿರುವ ಮಿಸ್ ವರ್ಲ್ಡ್ ೨೦೧೯ ಸೌಂದರ್ಯ ಸ್ಪರ್ಧೆಯನ್ನು ಪ್ರತಿನಿಧಿಸಲು ಭಾರಿ ತಯಾರಿ ನಡೆಸಿದ್ದಾರೆ. ಇದೇ ಮೊದಲ ಬಾರಿಗೆ ಹೊರದೇಶಕ್ಕೆ ಪ್ರವಾಸ ಕೈಗೊಳ್ಳುತ್ತಿರುವ ನಾನು ಸ್ಫರ್ಧೆ ಆಯೋಜಕರ ಬಳಿ ಚರ್ಚೆ ನಡೆಸಿದ್ದೇನೆ. ದೇಶಕ್ಕಾಗಿ ಮತ್ತೆ ಸೌಂದರ್ಯ ಕಿರೀಟ ಮುಡಿಗೇರಿಸಿಕೊಳ್ಳಬೇಕೆಂಬ ತವಕ ನನ್ನಲಿಯೂ ಇದೆ. ಒಳ್ಳೆಯದುಕ್ಕಾಗಿಯೇ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

  • ಸುಮನ್ ರಾವ್ ೧೯೯೮ ರ ನವೆಂಬರ್ ೨೩ ರಂದು ರಾಜಸ್ಥಾನದ ಉದಯ್ಪುರದಲ್ಲಿ ಜನಿಸಿದರು. ಉತ್ತಮ ನೃತ್ಯಗಾರ್ತಿಯೂ ಆಗಿದ್ದು, ಕಥಕ್ ನೃತ್ಯದಲ್ಲಿ ಪರಿಣಿತರಾಗಿದ್ದಾರೆ. ೨೦೧೮ ರಲ್ಲಿ ಮಿಸ್ ನವಿ ಮುಂಬೈ ಸ್ಪರ್ಧೆಯಲ್ಲಿ ಭಾಗವಹಿಸಿ, ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ನವದೆಹಲಿಯ ಚಾರ್ಟೆಡ್ ಅಕೌಂಟ್ಸ್ ಆಫ್ ಇಂಡಿಯಾ ಕಾಲೇಜಿನಲ್ಲಿ ಸಿಎ ಮಾಡುತ್ತಿದ್ದಾರೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿರುವ ಸುಮನ್ ಬಹುಮುಖ ಪ್ರತಿಭೆಯೂ ಹೌದು. ಸುಮನ್ ರಾವ್ ಫೆಮಿನಾ ಮಿಸ್ ರಾಜಸ್ಥಾನ ೨೦೧೯ ರ ಆಡಿಷನ್‌ಗೆ ಆಯ್ಕೆಯಾಗಿದ್ದರು. ಮಿಸ್ ಇಂಡಿಯಾ ಸುಮನ್ ರಾವ್ ಅವರಿಗೆ ’ಮಿಸ್ ರ್‍ಯಾಂಪಾ ವಾಕ್ ಅವಾರ್ಡ್ ಕೂಡ ಸಂದಿದೆ.

Leave a Comment