ಮಿಸ್ಟರ್ ಅಂಡ್ ಮಿಸ್ ಇಂಡಿಯಾ ಸೂಪರ್ ಮಾಡೆಲ್

ಐಟಿಬಿಟಿ ಸಿಟಿ ಸಿಲಿಕಾನ್ ಸಿಟಿಯಲ್ಲಿ ಯುವಜನತೆ ಮಾಡದ ಪ್ಯಾಷನ್ ಇಲ್ಲ….. ಅವರ ಅಭಿರುಚಿ, ನಾಡಿಮಿಡಿತ ಅರಿತ ಸಿಲ್ವರ್ ಸ್ಟಾರ್ ಇಂಡಿಯಾ  ಮಾಡದ  ಪ್ಯಾಷನ್ ಶೋ ಇಲ್ಲ…. ಅಂತಹ ಸಾಲಿಗೆ ಮತ್ತೊಂದು ಪ್ಯಾಷನ್ ಶೋ ಆಯೋಜಿಸಿ ಸಿಲ್ವರ್ ಸ್ಟಾರ್ ಇಂಡಿಯಾ ಗಮನ ಸೆಳೆದಿದೆ.

ವರ್ಷದ ಆರಂಭದಲ್ಲೇ ನಡೆದ ಪ್ಯಾಷನ್ ಶೋನಲ್ಲಿ ರಂಗು ರಂಗಾದ ವೇದಿಕೆ ಮೇಲೆ ಹೆಜ್ಜೆ ಹಾಕಿದ ರೂಪದರ್ಶಿಗಳು ನಿಜಕ್ಕೂ ಅಪರೂಪದ ವಿನ್ಯಾಸದ ಉಡುಗೆ ತೊಟ್ಟು ತೀಪುಗಾರರ ಗಮನ ಸೆಳೆದರು. ಅಷ್ಟಕ್ಕೂ ಇದೆಲ್ಲಾ ನಡೆದದ್ದು ನಗರದ ಗೋಕುಲ ಗ್ರ್ಯಾಂಡ್ ಹೋಟೆಲ್‌ನಲ್ಲಿ ಮಿಸ್ಟರ್ ಅಂಡ್ ಮಿಸ್ ಇಂಡಿಯಾ ಸೂಪರ್ ಮಾಡೆಲ್‌ನಲ್ಲಿ ಕಂಡು ಬಂದಂತಹ ಝಲಕ್ ಆಗಿದೆ.

fashion2-2

  • ವಿಜೇತರ ಪಟ್ಟಿ
  • ಅಸ್ಮಿತಾ ಸಿಂಗ್-ಮಿಸ್
  • ಇಂಡಿಯಾ ಸೂಪರ್ ಮಾಡೆಲ್
  • ರಿಮ್‌ಜಿಮ್ ಗುಪ್ತ- ಫಸ್ಟ್ ರನ್ನರ್‌ಅಪ್
  • ಸಪ್ನ ಸಿಂಗ್ -ಸೆಕೆಂಡ್ ರನ್ನರ್‌ಅಪ್
  • ಜಗದೀಶ್-ಮಿಸ್ಟರ್ ಇಂಡಿಯಾ ಸೂಪರ್ ಮಾಡೆಲ್
  • ಅಭಿಷೇಕ್ -ಫಸ್ಟ್ ರನ್ನರ್ ಅಪ್
  • ವಿಕ್ರಮ್-ಸೆಕೆಂಡ್ ರನ್ನರ್ ಅಪ್

fashion1-2

ಕಳೆದ ಹತ್ತು ವರ್ಷಗಳಿಂದ ಸಿಲ್ವರ್ ಸ್ಟಾರ್ ಇಂಡಿಯಾ ಪ್ರತಿ ವರ್ಷವೂ ಫ್ಯಾಷನ್ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದೆ. ಈ ಬಾರಿಯೂ ನವಯುಗದ ೨೦೧೯ರ ಮೊದಲನೇ ಬೆಂಗಳೂರಿನ ಫ್ಯಾಷನ್ ಶೋ ಇದಾಗಿದ್ದು ಇದರಲ್ಲಿ ೧೬ ಯುವತಿಯರು ೧೩ ಯುವಕರು ಸ್ಪರ್ಧಿಯಾಗಿ ಉತ್ಸಾಹದಿಂದ ಭಾಗಿಯಾಗಿದ್ದರು.

ಈ ೨೯ ಸ್ಪರ್ಧಿಗಳಲ್ಲಿ ಯುವತಿಯರ ತಂಡದಿಂದ ೩ ಹಾಗೂ ಯುವಕರ ತಂಡದಿಂದ ೩ ಸೂಪರ್ ಮಾಡೆಲ್‌ಗಳು ತಮ್ಮ ಮುಡಿಗೆ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಇದರ ಜೊತೆ ಸ್ಯಾಂಡಲ್‌ವುಡ್‌ನ ನಟ ಯಶಸ್ ಸೂರ್ಯ, ನಟಿ ಸಾಕ್ಷಿ, ನಟ ಸಂಚಾರಿ ವಿಜಯ್, ನಟ ಧನು ಗೌಡ, ನಟಿ ನಿಮಿಕಾ ರತ್ನಾಕರ್, ಶುಭಾ ರಕ್ಷಾ, ನಿರ್ದೇಶಕಿ ರಿಶಿಕಾ ಶರ್ಮ, ನಟ ನಿಹಾಲ್, ಕಲಾವಿದ ರವಿ ರೆಡ್ಡಿ ಹಾಗೂ ರಾಣಿ ರಿಯಾ, ಸೇರಿದಂತೆ ಮುಂತಾದವರು ಭಾಗವಹಿಸಿ ಯುವ ರೂಪದರ್ಶಿಗಳನ್ನು ಬೆಂಬಲಿಸಿದರು.

ಜೋರು ಸಂಗೀತದ ಮಧ್ಯೆ, ಬೆಳಕಿನ ಆಟಗಳ ಮಧ್ಯೆ ನಡೆದ ಫ್ಯಾಷನ್ ಶೋಗೆ  ಮೆರಗು ಮೂಡಿತ್ತು. ಇದರ ಬಗ್ಗೆ ಮಾತನಾಡಿದ ಆಯೋಜಕ ರವಿ ಸತತವಾಗಿ ಹತ್ತು ವರ್ಷಗಳಿಂದ ಸಿಲ್ವರ್ ಸ್ಟಾರ್ಸ್ ಸಂಸ್ಥೆಯೂ ಚಿತ್ರರಂಗಕ್ಕೆ ಹಾಗೂ ಫ್ಯಾಷನ್ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

೨೦೧೯ರ ಮೊದಲ ಫ್ಯಾಷನ್ ಶೋ ಇದಾಗಿದ್ದೂ, ವರ್ಷಾಂತ್ಯದ ಒಳಗೆ ನಾಲ್ಕಕ್ಕೂ ಅಧಿಕ ಫ್ಯಾಷನ್ ಶೋಗಳನ್ನು ಆಯೋಜಿಸಲಿದ್ದೇವೆ ನಮ್ಮಲ್ಲಿ ಗೆದ್ದಂತಹ ರೂಪದರ್ಶಿಗಳಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗಲಿದೆ ಎಂದು ಹೇಳಿದರು.

Leave a Comment