ಮಿಸೆಸ್ ಇಂಡಿಯಾ ಸೌಂದರ್ಯ ಸ್ಪರ್ಧೆ

ಇತ್ತೀಚೆಗೆ ವಿವಾಹವಾದ ಮಹಿಳೆಯರಿಗೂ ಅನೇಕ ಅವಕಾಶಗಳು ಕೈಬೀಸಿ ಕರೆಯುತ್ತಿವೆ. ಮದುವೆ ಆಯ್ತು ಎಂದು ಅವರು ಮನೆಯಲ್ಲಿ ಗೃಹಣಿಯಾಗಿ ಉಳಿಯುವ ಕಾಲ ಈಗ ಬದಲಾಗಿದೆ. ಅಂತಹ ಮಹಿಳೆಯರಿಗೂ ಇದೀಗ ಸಿನಿಮಾ, ಮಾಡೆಲಿಂಗ್ ಕ್ಷೇತ್ರದತ್ತ ತೆರಳಲು ಪ್ರೋತ್ಸಾಹ ದೊರೆಯುತ್ತಿದೆ.

ಮದುವೆಯಾಗಿ ಸಂಸಾರದ ನೊಗ ಹೊತ್ತ ಆ ಮಹಿಳೆಯರಲ್ಲಿ ಆತ್ಮ ವಿಶ್ವಾಸ ಪುಟಿದೇಳುತ್ತಿತ್ತು. ದಾಂಪತ್ಯ ಬದುಕಿಗೆ ಕಾಲಿಟ್ಟ ನಂತರ ಎಲ್ಲವೂ ಮುಗಿದು ಹೋಯಿತು ಎನ್ನುವವರಿಗೆ ಈ ಮಹಿಳೆಯರು ಜ್ವಲಂತ ನಿದರ್ಶನವಾಗಿದ್ದರು.

f1

ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ “ ಮಿಸೆಸ್ ಇಂಡಿಯಾ ಐಯಾಮ್ ಫವರ್ ಪುಲ್ ಕರ್ನಾಟಕ ೨೦೨೦ ಸೌಂದರ್ಯ ಸ್ಪರ್ಧೆಯ ಅಂತಿಮ ಆಡಿಷನ್ ನಲ್ಲಿ ಈ ಮಹಿಳೆಯರು ಥಳಕು ಬಳುಕಿನಿಂದ ಹಾಕುತ್ತಿದ್ದ ಹೆಜ್ಜೆ ಹಲವಾರು ಮಂದಿಗೆ ಸ್ಫೂರ್ತಿಯ ಸೆಲೆಯಾಗಿತ್ತು. ಹೊಸ ಕನಸು ಕಾಣಲು, ಹೊಸ ಬದುಕು ಕಟ್ಟಿಕೊಳ್ಳಲು, ಹೊಸ ಅವಕಾಶಗಳನ್ನು ಹುಡುಕಿಕೊಳ್ಳಲು ಈ ಆಡಿಷನ್ ಪ್ರೇರಣೆ ನೀಡುತ್ತಿತ್ತು.

ಮದುವೆಯಾದ ಮಹಿಳೆಯರಿಗಾಗಿ ಆಯೋಜಿಸಲಾದ ಸೌಂದರ್ಯ ಸ್ಪರ್ಧೆ ಇದಾಗಿದ್ದು, ಒಟ್ಟು ೪೦ ಮಂದಿ ಸುಂದರ ಮಹಿಳೆಯರು ಭಾಗವಹಿಸಿದ್ದರು. ಈ ಪೈಕಿ ೨೦ ಮಂದಿಯನ್ನು ಅಂತಿಮ ಸುತ್ತಿಗೆ ಆಯ್ಕೆಮಾಡಲಾಗಿದೆ. ಇವರು ಗ್ರ್ಯಾಂಡ್ ಫಿನಾಲೆಯ ಅಂತಿಮ ಹಣಾಹಣಿಯಲ್ಲಿ ಪಾಲ್ಗೊಳ್ಳಲು ವೇದಿಕೆ ಅಣಿಯಾಗಿದೆ.

ಮದುವೆಯಾದ ಮಹಿಳೆಯರ ಪ್ರತಿಭೆ ಗುರುತಿಸಿ ಮಾಡೆಲಿಂಗ್, ಜಾಹೀರಾತು, ಸಿನಿಮಾ ಮತ್ತಿತರ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಡಾ. ನಂದಿನಿ ನಾಗರಾಜ್ ಅವರು ಈ ಸ್ಪರ್ಧೆಯನ್ನು ಆಯೋಜಿಸಿದ್ದರು. ಮದುವೆಯಾದ ಮಹಿಳೆಯರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿ ಉತ್ತೇಜನ ನೀಡುವುದೇ ಇದರ ಉದ್ದೇಶವಾಗಿದೆ.

ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣದಿಂದ ಬಂದಿದ್ದ ಗೃಹಿಣಿಯರನ್ನು ಹೆಸರಾಂತ ಚಿತ್ರನಟರು, ಜ್ಯೂರಿ ಆಗಿ ಪಾಲ್ಗೊಂಡು ಅಂತಿಮ ಸುತ್ತಿಗೆ ಆಯ್ಕೆಮಾಡಿದರು. ನಟ ಜೆಕೆ, ಮಿಸೆಸ್ ಗ್ಲೋಬೆಲ್ ಯೂನಿವರ್ಸಲ್ ,ಸವಿತಾ ರೆಡ್ಡಿ ಮತ್ತು ಸಂತೋಷ್ ರೆಡ್ಡಿ. ಶ್ವೇತಾ ಮಯೂರಿ, ಮಿಸೆಸ್ ಇಂಡಿಯಾ ವರ್ಲ್ಡ್ ವೈಡ್ ಚೈತನ್ಯ ಮಿಸೆಸ್ ಇಂಡಿಯಾ ಟೂರಿಸಂ, ಮಿಸೆಸ್ ವರ್ಲ್ಡ್ ವೈಡ್ ಶ್ವೇತಾ ನಿರಂಜನ್ ಮಿಸೆಸ್ ಇಂಡಿಯಾ ಮಧುರ ವಿ ಆಚಾರ್ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಹೆಚ್ಚಿನ ಮಾಹಿತಿಗಾಗಿ ಡಾ. ನಂದಿನಿ ನಾಗರಾಜ್-

9901755163

Leave a Comment