ಮಿಲ್ಟನ್ ಶಾಲೆ ವಾರ್ಷಿಕೋತ್ಸವ

ರಾಯಚೂರು.ಫೆ.28-ಶೈಕ್ಷಣಿಕವಾಗಿ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಶಿಕ್ಷಣಕ್ಕಾಗಿ ಹೆಚ್ಚು ಒತ್ತು ನೀಡಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರು ಹೇಳಿದರು.
ಅವರಿಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಿಲ್ಟನ್ ಆಂಗ್ಲ ಶಾಲೆಯ ಶಾಲಾ ವಾರ್ಷಿಕೋತ್ಸವ ಹಾಗೂ ಎಸ್ಎಸ್ಎಲ್‌ಸಿ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, 1995-96 ನೇ ಸಾಲಿನಲ್ಲಿ ಕೇವಲ 49 ವಿದ್ಯಾರ್ಥಿಗಳನ್ನೊಳಗೊಂಡು ಮಿಲ್ಟನ್ ಶಾಲೆಯನ್ನು ಪ್ರಾರಂಭಿಸಿದ್ದರು. ಇಂದು ಶಾಲೆ ಅಭಿವೃದ್ಧಿ ಮಂಡಳಿ ಶ್ರಮದಿಂದ ಸಾವಿರಾರು ವಿದ್ಯಾರ್ಥಿಗಳನ್ನು ಒಳಗಂಡ ಶಾಲೆ ಇದಾಗಿದೆ.
ಶೈಕ್ಷಣಿಕವಾಗಿ ಹೈದ್ರಾಬಾದ್ ಕರ್ನಾಟಕ ಪ್ರದೇಶ ಶಿಕ್ಷಣದಲ್ಲಿ ಉನ್ನತ ಮಟ್ಟಕ್ಕೆ ಸಾಗಲು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಈ ಭಾಗದ ಮಠಾಧೀಶರು ಮತ್ತು ಶಿಕ್ಷಣ ಪ್ರೇಮಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ. ಇದರಿಂದ ಮಕ್ಕಳಿಗೆ ಉತ್ತಮವಾದ ಶಿಕ್ಷಣ ದೊರೆಯುತ್ತಿದೆ. ಈಗಾಗಲೇ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಗಳು ಕಂಡಿವೆ. ಪಾಲಕರು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಮಕ್ಕಳು ಉನ್ನತ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಾರೆ. ಶಿಕ್ಷಣವನ್ನು ಯಾರು ಕದಿಯಲು ಸಾಧ್ಯವಿಲ್ಲ. ಹಾಗೂ ಈ ಭಾಗದ ಜನರಿಗೆ 371 ಜೆ ಕಲಂ ಇದ್ದು, ಉದ್ಯೋಗ ಅವಕಾಶಗಳು ಸಿಗುತ್ತದೆ ಆದ ಕಾರಣ ಪ್ರತಿಯೊಬ್ಬ ಮಕ್ಕಳು ಶಿಕ್ಷಣವನ್ನು ಪ‌ಡೆದುಕೊಳ್ಳಿ ಎಂದು ಹೇಳಿದರು. ನಂತರ ಮಿಲ್ಟನ್ ಶಾಲೆಯಲ್ಲಿ ಕಳೆದ ಬಾರಿ ಎಸ್ಎಸ್ಎಲ್‌ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 50 ಸಾವಿರ ರೂ. ಪ್ರೋತ್ಸಾಹ ಧನ ಹಾಗೂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎ.ಪಾಪಾರೆಡ್ಡಿ, ಜಗದೀಶ್ ಗುಪ್ತಾ, ಯು.ದೊಡ್ಡಮಲ್ಲೇಶಪ್ಪ, ಎಸ್.ಮಹೇಂದ್ರರೆಡ್ಡಿ, ಚಂದ್ರಶೇಖರ್ ಮನುವಳ್ಳಿ, ಎನ್.ಕೇಶವರೆಡ್ಡಿ, ನಾಗರಾಜ್, ಪಿ.ಗೋವಿಂದರಾಜ್, ಕೆ.ಶಾಂತಪ್ಪ, ರಾಜಾ ಶ್ರೀನಿವಾಸ, ಸಂಸ್ಥೆಯ ಅಧ್ಯಕ್ಷರಾದ ಹೆಚ್.ವೆಂಕಟೇಶಲು ಸೇರಿದಂತೆ ಇನ್ನಿತರರು ಇದ್ದರು.

Leave a Comment