ಮಿರ್ಜಿ ಬಳಿ ಘಟಪ್ರಭ ನದಿಗೆ ಸಮಾನಾಂತರ ಬ್ಯಾರೇಜ್ ಉನ್ನತೀಕರಣ ಕಾಮಗಾರಿ 6ತಿಂಗಳಲ್ಲಿ ಪೂರ್ಣ : ಡಿಸಿಎಂ ಕಾರಜೋಳ

 

ವಿಜಯಪುರ, ಜೂ.29-ಮುಧೋಳ್ ತಾಲೂಕಿನ ಮಿರ್ಜಿ ಗ್ರಾಮದ ಸಮೀಪ ಘಟಪ್ರಭಾ ನದಿಗೆ ಅಡ್ಡಲಾಗಿ ಸಮಾನಾಂತರ ಬ್ರಿಡ್ಜ್ ಕಂ ಬಾಂದರ್ ಉನ್ನತೀಕರಣ ಕಾಮಗಾರಿಗೆ ಇಂದು ಉಪಮುಖ್ಯಮಂತ್ರಿಗಳಾದ ಶ್ರೀ‌ ಗೋವಿಂದ ಎಂ ಕಾರಜೋಳ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ತಾವು 1995-96 ರಲ್ಲಿ ಮೊದಲಬಾರಿಗೆ ಶಾಸಕರಾಗಿದ್ದ ಅವಧಿಯಲ್ಲಿ ಮೂರು ಮೀಟರ್ ಎತ್ತರದಲ್ಲಿ ಈ ಸಮಾನಾಂತರ ಬ್ಯಾರೇಜ್ ಅನ್ನು ನಿರ್ಮಿಸಲಾಗಿತ್ತು. ನೀರಿನ ಸಂಗ್ರಹ ಕಡಿಮೆ ಇದ್ದಕಾರಣ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ಉಂಟಾಗುತ್ತಿದ್ದು, ನೂತನ ಬ್ಯಾರೇಜ್ ನಿರ್ಮಿಸುವಂತೆ ಈ ಭಾಗದ ಜನತೆ ಮನವಿ ಮಾಡಿದ ಮೇರೆಗೆ ಈ ಬ್ಯಾರೇಜ್ ( ಬಿ.ಸಿ.ಬಿ.) ಅನ್ನು 5 ಕೋಟಿ ರೂ. ವೆಚ್ಚದಲ್ಲಿ 5 ಮೀಟರ್ ವರೆಗೆ ಎತ್ತರಿಸಲು ಇಂದು ಶಂಕು ಸ್ಥಾಪನೆ ನೆರವೇರಿಸಲಾಗಿದೆ. 6 ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಇದರಿಂದ ಈ ಭಾಗದ ಜನತೆಗೆ ಸದಾ ಕಾಲ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಪಕ್ಷಿಗಳಿಗೆ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು. ಸಂದರ್ಭದಲ್ಲಿ ವಿವಿಧ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.

gk

 

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ‌ ಕಾರಜೋಳ  ಚಾಲನೆ

 ಮುಧೋಳ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ‌ ಇಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಒಂಟಿಗೋಡಿ ಗ್ರಾಮದ ಸೈಟ್ ಒಂದರ ಬಳಿ ಹಳಕ್ಕೆ‌ ಅಡ್ಡವಾಗಿ 2 ಕೋಟಿ ರೂ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, 11 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ 98 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ. 11 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಒಂಟಿಗೋಡಿ ಗ್ರಾಮದ ಸೈಟ್ 2ರ ಬಳಿ ಇರುವ ಹಳ್ಳಕ್ಕೆ ಅಡ್ಡವಾಗಿ 1.70ಕೋಟಿ ರೂ ವೆಚ್ವದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಕಾಮಗಾರಿಯು 11 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಇದರಿಂದ 105 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ. ಜನತೆ ಹಾಗೂ ಜಾನುವಾರುಗಳಿಗೆ ಸದಾ ಕಾಲ ಕುಡಿಯುವ ಒದಗಿಸಲು ನೆರವಾಗಲಿದೆ. ಈ ಭಾಗದ ಜನತೆ ಈ‌ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ನಂತರ ಬೊಮ್ಮನಬುದ್ನಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ,ಮಹಾತ್ಮಗಾಂಧಿ ‌ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿದ ಅಂಗನವಾಡಿ ಕೇಂದ್ರ, ಶಾಸಕರ ಅನುದಾನದಲ್ಲಿ ನಿರ್ಮಿಸಿದ ಸಮುದಾಯ ಸಮುಚ್ಚಯ ಭವನ, ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು.

 

 

Share

Leave a Comment