ಮಿರ್ಚಿ ಪ್ರಕರಣ; ಇಡಿ ಮುಂದೆ ಹಾಜರಾದ ರಾಜ್ ಕುಂದ್ರಾ

ಮುಂಬೈ, ಅ 30- ಗ್ಯಾಂಗ್ ಸ್ಟರ್ ಇಕ್ಬಾಲ್ ಮಿರ್ಚಿ ವಿರುದ್ಧದ ಅಕ್ರಮ ಹಣ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಹಾಗೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಬುಧವಾರ ಜಾರಿ ನಿರ್ದೇಶನಾಲಯದ (ಇ.ಡಿ) ಎದುರು ಹಾಜರಾದರು.

ಬೆಳಗ್ಗೆ 11 ಗಂಟೆ ವೇಳೆಗೆ ವಕೀಲರೊಂದಿಗೆ  ಆಗಮಿಸಿದ ಕುಂದ್ರಾ ಅವರಿಗೆ ತನಿಖಾಧಿಕಾರಿಗಳು ಪಿಎಂ ಎಲ್ ಎ  ಕಾಯ್ದೆಯಡಿ ವಿಚಾರಣೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ರಂಜೀತ್ ಬಿಂದ್ರ ಮತ್ತು ಬಾಸ್ಟಿಯನ್ ಹಾಸ್ಪಿಟಾಲಿಟಿ ಫರ್ಮ್ ನೊಂದಿಗೆ ಸಂಬಂಧದ ಕುರಿತು ಇಡಿ ವಿಚಾರಣೆ ನಡೆಸುತ್ತಿದೆ. ಕೆಲ ಸಮಯದ ಹಿಂದೆ ಇಡಿ ಬಿಂದ್ರಾನನ್ನು ಬಂಧಿಸಿದೆ.

ಕಳೆದ ವರ್ಷ ಕೂಡ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಕುಂದ್ರ ವಿಚಾರಣೆ ನಡೆಸಿತ್ತು.

2013ರಲ್ಲಿ ಲಂಡನ್ ನಲ್ಲಿ ಮೃತಪಟ್ಟ ಮಿರ್ಚಿ ವಿರುದ್ಧ ಜಾಗತಿಕ ಉಗ್ರ ದಾವೂದ್ ಇಬ್ರಾಹಿಂ ಬಲಗೈ ಬಂಟನಾಗಿದ್ದು, ಅಕ್ರಮ ಮದ್ಯ ಸಾಗಣೆ ಮತ್ತಿತರರ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದರು.

Leave a Comment