ಮಿಥುನ

ವರ್ಷಾರಂಭ (29.03.2016) 12.09.2017ರವರೆಗೆ 4ನೇ ಗುರು ಸಾಮಾನ್ಯ ಫಲದಾಯಕನಿದ್ದಾನೆ. ಕೌಟುಂಬಿಕ, ಸಾಮಾಜಿಕ ಹಾಗೂ ಔದ್ಯಮಿಕವಾಗಿ ಅನೇಕ ನಷ್ಟ, ಕಷ್ಟಗಳನ್ನು ತಂದೊಡ್ಡುವನು. ಅರ್ಥ ವ್ಯವಸ್ಥೆಯಲ್ಲಿ ಕುಸಿಯುವುದು. ಕಾರ್ಮಿಕ ವರ್ಗ ಪ್ರತಿಭಟನೆಯ ದಾರಿ ತುಳಿಯುವುದು. ಮನೋವಿಕಾರ, ಬೇಸರದ ಪ್ರಸಂಗಗಳು ಚಿಂತೆಗೆ ದೂಡುವವು. ಮಕ್ಕಳ ಸಾಧನೆಗಳು, ಮಡದಿಯ ಗೃಹ ಕೈಗಾರಿಕೆಗಳು ಇಳಿಮುಖವಾಗುವವು. ಸಾಮಾಜಿಕ ಹಾಗೂ ರಾಜಕೀಯ ರಂಗಗಳಲ್ಲಿ ತೊಂದರೆ ಅನುಭವಿಸುವಿರಿ. ನಂತರ 12.09.2017 ರಿಂದ 17.03.2018ರವರೆಗೆ ನಿಮ್ಮ ಭವಿಷ್ಯ ಉಜ್ವಲವಾಗುವುದು. ಆರ್ಥಿಕವಾಗಿ ಬಲಿಷ್ಟರಾಗುತ್ತೀರಿ. ಉದ್ಯಮದಲ್ಲಿ ಹೊಸಶಾಖೆ ಆರಂಭಿಸುವಿರಿ. ಆದಾಯ ಓತಪ್ರೋತವಾಗಿ ಹರಿದುಬರುವುದು. ಮಾನ, ಸನ್ಮಾನಗಳು ಅಲಂಕರಿಸುವವು. ಕೋರ್ಟ್, ಕಚೇರಿ ಕೆಲಸಗಳು ನಿಮ್ಮಂತಾಗುವವು. ಹೂಡಿಕೆಗಳು, ಆಸ್ತಿಪಾಸ್ತಿಗಳು, ಒಡವೆ, ವಸ್ತ್ರಗಳು ಸಂಗ್ರಹವಾಗುವವು. ನೌಕರಿದಾರರಿಗೆ ಬಡ್ತಿ, ಅಧಿಕಾರಗಳು ಅಯಾಚಿತವಾಗಿ ಬರುವುದು. ಶನಿದೇವನು 20.06.2017ರವರೆಗೆ 7ನೇಯವನು. ನಂತರ 6ನೆಯವನು. ಆರೋಗ್ಯ ಸಂಪತ್ತನ್ನು ಕೊಡುವನು. ಕುಟುಂಬ ಹಾಗೂ ಉದ್ಯಮ ನಿಯಮಿತ ಮಾರ್ಗದಲ್ಲಿ ಮುನ್ನಡೆ ಸಾಧಿಸುವುದು. ಎಲ್ಲೆ‌ಡೆ ಗೌರವಾದರಗಳು ಪ್ರಾಪ್ತಿಯಾಗುವವು. ರೈತರು, ವ್ಯಾಪಾರಿಗಳು, ಶಿಕ್ಷಣ ಸಾಧಕರು, ಕ್ರೀಡಾರಂಗದವರು ಸರ್ಕಾರಿ ಹಾಗೂ ಖಾಸಗಿ ಸಂಘ ಸಂಸ್ಥೆಗಳಿಂದ ಗೌರವ ಪಡೆಯುವರು. ಸಾಹಿತಿ, ಕಲಾವಿದರು ಬರಹ,ಕಲೆಗಳಿಂದ ಶ್ರೇಷ್ಠ ಲಾಭ ಪಡೆಯುವರು. ತೈಲ, ಚರ್ಮೋದ್ಯಮಿಗಳು ಸಂಪದ್ಭರಿತರಾಗುವರು.

ಆದಾಯ – 2, ವ್ಯಯ – 11.