ಮಾ. 11ರಿಂದ ಅಣ್ಣಾಭಾವು ಸಾಠೆ ಸಾಹಿತ್ಯಸಮ್ಮೇಳನ

ಕಲಬುರಗಿ ಫೆ 17: ಮರಾಠಿ ಕ್ರಾಂತಿಕಾರಿ ಲೇಖಕ ಅಣ್ಣಾಭಾವು ಸಾಠೆ ಅವರ ಬರಹಗಳ ಕುರಿತು ಆಯೋಜಿಸಿದ ಸಾಹಿತ್ಯ ಸಮ್ಮೇಳನ ಬರುವ ಮಾರ್ಚ 11 ಮತ್ತು 12 ರಂದು ನಗರದ ಡಾ ಎಸ್ ಎಂ ಪಂಡಿತರಂಗಮಂದಿರದಲ್ಲಿ ನಡೆಯಲಿದೆ.
ಅಣ್ಣಾಭಾವು ಸಾಠೆ ಸಾಹಿತ್ಯ ಕುರಿತು ಮಹಾರಾಷ್ಟ್ರದಲ್ಲಿ ಈಗಾಗಲೇ 7 ಸಮ್ಮೇಳನ ಜರುಗಿವೆ. ಕಲಬುರಗಿಯಲ್ಲಿ ನಡೆಯುವ 8 ನೆಯ ಸಮ್ಮೇಳನದ ಯಶಸ್ಸಿಗೆ ಸಮಿತಿಯನ್ನು ರಚಿಸಲಾಗಿದೆ. ಸಾಹಿತಿ ಪ್ರೊ ಎಸ್. ಜಿ ಸಿದ್ದರಾಮಯ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ.ಎಂದು ಸಮಿತಿಯ ಪ್ರಧಾನ ಸಂಚಾಲಕ ಬಸಣ್ಣ ಸಿಂಗೆ ಮತ್ತು ಸಂಚಾಲಕ ಪ್ರೊ ಆರ್ ಕೆ ಹುಡಗಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
11. ರಂದು ಬೆಳಿಗ್ಗೆ 11.30 ಕ್ಕೆ ಡಾ ಆನಂದ ತೇಲತುಂಬ್ಡೆ ಸಮ್ಮೇಳನ ಉದ್ಘಾಟಿಸುವರು. ನಿಡುಮಾಮಿಡಿ ಸ್ವಾಮೀಜಿ, ಡಾ.ಎಲ್ ಹನುಮಂತಯ್ಯ ಸೇರಿದಂತೆ ಅನೇಕ ಪ್ರಗತಿಪರ ಚಿಂತಕರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು
ಮೊದಲದಿನ ಮಧ್ಯಾಹ್ನ 2.30ಕ್ಕೆ ನಡೆಯುವ ಗೋಷ್ಠಿಯಲ್ಲಿ ಇಂದೂಧರ ಹೊನ್ನಾಪುರ,ರಹಮತ್ ತರೀಕೆರೆ,ಡಾ. ಎಚ್ ಎಸ್ ಅನುಪಮಾ,ಮಾತನಾಡಲಿದ್ದು ಸಂಜೆ 5 ಕ್ಕೆ ಬಹುಬಾಷಾ ಕವಿಗೋಷ್ಠಿ ಇದೆ.ಮಾ.12 ರಂದು ಬೆಳಿಗ್ಗೆ 10 30 ಕ್ಕೆ ಪ್ರಾರಂಭವಾಗುವ 2ನೆಯ ಗೋಷ್ಠಿಯಲ್ಲಿ ಪ್ರೊ ಕೆಎಸ್ ಭಗವಾನ್À,ಬಂಜಗೆರೆ ಜಯಪ್ರಕಾಶ,ಸರಜೂ ಕಾಟ್ಕರ್, ಪ್ರೊ ಅಪ್ಪಗೆರೆ ಸೋಮಶೇಖರ ಮಾತನಾಡುವರು.ಮಧ್ಯಾಹ್ನ 3 ಕ್ಕೆ ನಡೆಯುವ ಸದ್ಭಾವನಾ ಗೋಷ್ಠಿಯಲ್ಲಿ ಸ್ಮಿತಾ ಫನ್ಸಾರೆ ಸೇರಿದಂತೆ ಅನೇಕರು ಭಾಗವಹಿಸುವರು .ಸಂಜೆ 5 ಕ್ಕೆ ಸಮಾರೋಪ ನಡೆಯಲಿದ್ದು ಸಾಧಕರನ್ನು ಸನ್ಮಾನಿಸಲಾಗುವದು ಎಂದರು
ಸುದ್ದಿಗೋóಷ್ಠಿಯಲ್ಲಿ ಡಾ ವಿಠ್ಠಲ ದೊಡ್ಮನಿ,ಬಿಬಿ ರಾಂಪುರೆ,ಎ.ಬಿ ಹೊಸಮನಿ,ಡಾ.ಕಾಶೀನಾಥ ಅಂಬಲಗಿ,ಮೌಲಾಮುಲ್ಲಾ ಉಪಸ್ಥಿತರಿದ್ದರು

Leave a Comment