ಮಾಸ್ತಿ ಗುಡಿ

ಬಿಳಿಗಿರಿ, ರಂಗನತಿಟ್ಟು ಅರಣ್ಯ ಪ್ರದೇಶದಲ್ಲಿ ತೊಂಭತ್ತರ ದಶಕದಲ್ಲಿ ನಡೆದಿದ್ದ ನೈಜ ಘಟನೆಯನ್ನು ಆಧರಿಸಿದ ಚಿತ್ರವಾಗಿದೆ ‘ಮಾಸ್ತಿ ಗುಡಿ’. ಆ ಸಂದರ್ಭದಲ್ಲಿ ಒಂದೊಳ್ಳೆ ಉದ್ದೇಶದಿಂದಲೇ ಹತ್ತಾರು ಹುಲಿಗಳನ್ನು ಕೊಲ್ಲಲಾಗಿತ್ತು. ಆದರೆ ಇದರಿಂದ ಪ್ರಾಕೃತಿಕ ಚಕ್ರದ ಮೇಲೆ ಎಂಥಾ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಪಕ್ಕಾ ವೈಜ್ಞಾನಿಕ ವಿವರಗಳನ್ನು ಕಲೆ ಹಾಕಿ ಶೋಧನೆ ನಡೆಸಿ ಕಥೆ ಮಾಡಿ ನಿರ್ದೇಶಿಸಿದ್ದಾರೆ ನಾಗಶೇಖರ್.  ವೈಜ್ಞಾನಿಕ ಅಚ್ಚರಿಗಳನ್ನು ಚಿತ್ರದಲ್ಲಿ ತೆರೆದಿಡಲಾಗಿದೆಯಂತೆ.

ಚಿತ್ರೀಕರಣದ ವೇಳೆ ನಡೆದ ದುರಂತದಲ್ಲಿ ಮೃತಪಟ್ಟಿರುವ ನಟರಾದ ಅನಿಲ್ ಕುಮಾರ್ ಹಾಗೂ ರಾಘವ್ ಉದಯ್  ಅವರ ನೆನಪಿಗಾಗಿ ಈ ಸಿನಿಮಾವನ್ನು ಅರ್ಪಣೆ ಮಾಡಲಾಗಿದೆ. ಅನಿಲ್ ಕುಮಾರ್ ಸಹ ನಿರ್ಮಾಪಕ ಆಗುವುದರೊಂದಿಗೆ ನಟಿಸಿದ್ದರು. ಚಿತ್ರಕ್ಕೆ ಕಥಾ ವಸ್ತು ಒದಗಿಸಿರುವ ನಾಯಕ ದುನಿಯಾ ವಿಜಯ್ ಚಿತ್ರ ಜೀವನದಲ್ಲಿಯೇ ‘ಮಾಸ್ತಿಗುಡಿ’ ಮೈಲಿಗಲ್ಲಾಗುತ್ತದೆ ಎನ್ನುವ ನಿರೀಕ್ಷೆ ಇದೆ. ಅಮೂಲ್ಯ ಅವರ ವಿವಾಹದ ದಿನವೇ ಚಿತ್ರ ತೆರೆಕಾಣುತ್ತಿರುವುದು ವಿಶೇಷ. ಕೃತಿ ಕರಬಂಧ ಮತ್ತೊಬ್ಬ ನಾಯಕಿ.

ರಂಗಾಯಣ ರಘು, ಶ್ರೀ ನಿವಾಸಮೂರ್ತಿ, ಸುಹಾಸಿನಿ ಮನಿರತ್ನಂ, ದತ್ತಣ್ಣ, ಬಿ ಜಯಶ್ರೀ, ದೇವರಾಜ್, ಶೋಭರಾಜ್ ಮುಂತಾದವರ ತಾರಾಗಣವಿದ್ದು, ಕವಿರಾಜ್ ಗೀತ ಸಾಹಿತ್ಯ, ಸಾಧು ಕೋಕಿಲ  ಸಂಗೀತ, ಸತ್ಯ ಹೆಗ್ಡೆ ಛಾಯಾಗ್ರಹಣ, ಜೋನಿ ಹರ್ಷ ಸಂಕಲನ, ಕಲೈ  ನೃತ್ಯ,, ಎಂ ಎಸ್ ರಮೇಶ್  ಸಂಭಾಷಣೆ, ಡಾ ರವಿ ವರ್ಮ, ವಿಜಯ್ ಹಾಗು ವಿನೋದ್ ಸಾಹಸ ಸಂಯೋಜನೆ ಚಿತ್ರಕ್ಕಿದೆ.  ಕೆ, ಪಿ ಎಸ್ ಕಂಬೈನ್ಸ್ ಲಾಂಛನದಲ್ಲಿ ಸುಂದರ್ ಗೌಡ ಮತ್ತು ಅನಿಲ್ ಕುಮಾರ್  ನಿರ್ಮಾಣ ಮಾಡಿದ್ದಾರೆ.

Leave a Comment