ಮಾಸ್ಟರ್ ಕೌಶಲ್ ಅತಿ ಕಿರಿಯ ಸ್ಕೂಬಾ ಡೈವರ್

ಬೆಂಗಳೂರು, ಜ. ೧೨- ಮಾಸ್ಟರ್ ಕೌಶಲ್ ಕಿರಣ್ ಕುಮಾರ್ ಗೋವಾದಲ್ಲಿ  ಗ್ರ್ಯಾಂಡೇ ಹೈಲ್ಯಾಂಡ್‌ನಲ್ಲಿ ನಡೆದ  ಜಿಗಿತ ಮತ್ತು ನೀರಿನೊಳಗಿನ ವಿವಿಧ ಕೌಶಲ್ಯಗಳನ್ನು ಪ್ರದರ್ಶಿಸಿ ಅತ್ಯಂತ ಕಿರಿಯ ಭಾರತೀಯ ಸ್ಕೂಬಾ ಡೈವರ್ ಆಗಿ ಹೊರ ಹೊಮ್ಮಿದ್ದಾನೆ ಎಂದು ತರಬೇತುದಾರ ಅರವಿಂದ್ ವೇಣು ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಹತ್ತು ವರ್ಷ ವಯಸ್ಸಿನ ಕೌಶಲ್ ಕಿರಣ್ ಕುಮಾರ್ ಅವರು ಬ್ರರಾ ಕೂಡ ಡೈವಿಂಗ್ ಇಂಡಿಯಾ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದು, 2014ರಲ್ಲಿ ಮುಂಬೈ ಮೂಲದ ತಮ್ಮಣ್ಣ ಬಾಲಚಂದರ್ ಅವರು ಹತ್ತು ವರ್ಷ ಒಂದು ದಿನದ ವಯಸ್ಸಿನಲ್ಲಿ ಮಾಡಿದ್ದ ದಾಖಲೆಯನ್ನು ಕೌಶಲ್ ಕಿರಣ್ ಕುಮಾರ್ ಮುರಿದಿದ್ದಾರೆ.
ಕೇವಲ 8ನೇ ವಯಸ್ಸಿನಲ್ಲಿ ಈಜು ತರಬೇತಿ ಪ್ರಾರಂಭಿಸಿ, ಕರ್ನಾಟಕ ಎಂಜಿಎಸ್ ಅಕಾಡೆಮಿಯ ಬೆಂಗಳೂರಿನ ಈಜು ತಂಡದಲ್ಲಿದ್ದಾರೆ. ಈತನ ಪ್ರತಿಭೆಯನ್ನು ಗುರುತಿಸಿ ತರಬೇತುದಾರ ಅರವಿಂದ್ ವೇಣು ಅವರು 2018, ಡಿಸೆಂಬರ್ 10 ರಂದು ಗೋವಾದಲ್ಲಿ ನಡೆದ ರಿಕ್ರಿಯೇಷನಲ್ ಟ್ರೈ ಸ್ಕೂಬಾ ಡೈವಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲಾಗಿತ್ತು.
ಅವರ ಪೋಷಕರ ಸಹಕಾರದಿಂದ ಈ ಸ್ಕೂಬಾ ಡೈವಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೀರಿನೊಳಗೆ ಜಿಗಿದು ವಿಶಿಷ್ಠವಾದ ಕೌಶಲ್ಯಗಳನ್ನು ಪ್ರವೇಶಿಸಿದ್ದಾನೆ. ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕೌಶಲ್ ಶಾಲಾ ಬೇಸಿಗೆ ಈಜು ಶಿಬಿರದಲ್ಲಿ ವಿಶೇಷ ಪ್ರದರ್ಶನ ನೀಡಿದ್ದಾನೆ ಎಂದು ಪ್ರಶಂಸಿಶಿದ್ದಾರೆ.

Leave a Comment