ಮಾವಿನ ಎಲೆಯ ಉಪಯೋಗ

ಮಾವಿನ ಹಣ್ಣಿನಂತೆ ಮಾವಿನ ಎಲೆಗಳಿಂದ ಹಲವಾರು ಪ್ರಯೋಜನಗಳಿವೆ. ಇದನ್ನು ಕೇವಲ ತೋರಣ ಕಟ್ಟಲು ಮಾತ್ರವಲ್ಲ ನಿಮ್ಮ ಆರೋಗ್ಯವನ್ನು ವೃದ್ಧಿಸಲು ಸಹ ಉಪಯೋಗಿಸಬಹುದು. ಮಾವಿನ ಎಲೆಯಲ್ಲಿ ಔಷಧೀಯ ಗುಣ ಇದೆ. ಇದು ಹಲವಾರು ರೋಗಗಳನ್ನು ನಿವಾರಣೆ ಮಾಡುತ್ತದೆ ಎಂಬುದು ನಿಮಗೆ ತಿಳಿದಿರಲಿ.
*ಎಳೆ ಮಾವಿನ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ನಿಮ್ಮ ದಿನನಿತ್ಯದ ಆಹಾರದಲ್ಲಿ ಬಳಕೆ ಮಾಡುವುದರಿಂದ ಡಯಾಬಿಟೀಸ್ ಸಮಸ್ಯೆ ನಿವಾರಣೆಯಾಗುತ್ತದೆ.
*ಮಾವಿನ ಎಲೆಗಳನ್ನು ನೀರಿನೊಂದಿಗೆ ಬೆರೆಸಿ ಸೇವನೆ ಮಾಡಿ. ಕಿಡ್ನಿ ಕಲ್ಲುಗಳನ್ನು ನಿವಾರಣೆ ಮಾಡಲು ಇದು ಉತ್ತಮ ಔಷಧಿ.
*ಇದರ ಒಣ ಎಲೆಯನ್ನು ಸುಟ್ಟು ಅದರ ಹೊಗೆಯನ್ನು ಸೇವನೆ ಮಾಡಿದರೆ ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗಯತ್ತವೆ.
*ರಕ್ತ ಭೇದಿ ಉಂಟಾದರೆ ಒಣ ಮಾವಿನ ಎಲೆಯ ಪುಡಿಯ ಚಹಾ ಮಾಡಿ ಮೂರು ದಿನಗಳ ಕಾಲ ತಪ್ಪದೆ ಸೇವನೆ ಮಾಡಿ.
*ಕಿವಿ ನೋವಿನ ಸಮಸ್ಯೆಗಳಿಂದಲೂ ಮಾವಿನ ಎಲೆ ರಿಲೀಫ್ ನೀಡುತ್ತದೆ. ಮಾವಿನ ಎಲೆಯ ರಸವನ್ನು ಮಂದ ಬಿಸಿ ಮಾಡಿ ಕಿವಿಗೆ ಹಾಕಿದರೆ ನೋವು ನಿವಾರಣೆಯಾಗುತ್ತದೆ.
*ಮಾವಿನ ಎಲೆಗಳನ್ನು ಸುಟ್ಟು ಅದರ ಬೂದಿಯನ್ನು ಸುಟ್ಟು ಹೋದ ಕಲೆಯ ಮೇಲೆ ಹಚ್ಚಿದರೆ ಕಲೆ ನಿವಾರಣೆಯಾಗುತ್ತದೆ.
*ಬಿಸಿಯಾದ ನೀರಿಗೆ ಮಾವಿನ ಎಲೆಯನ್ನು ಹಾಕಿ ಅದನ್ನು ರಾತ್ರಿ ಪೂರ್ತಿ ಹಾಗೆ ಬಿಡಿ. ಮರುದಿನ ಬೆಳಗ್ಗೆ ಈ ನೀರನ್ನು ಖಾಲಿ ಹೊಟ್ಟೆಗೆ ಸೇವನೆ ಮಾಡಿದರೆ ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ.

Leave a Comment