ಮಾವಿನಹಣ್ಣಿನಲ್ಲಿದೆ ಗರ್ಭೀಣಿಯರ ಆರೋಗ್ಯ

ಬೇಸಿಗೆಯಲ್ಲಿ ಮಾವಿನ ಹಣ್ಣು ಯಥೇಚ್ಛವಾಗಿದ್ದು ಇದರಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಅನೇಕ ಸಮಸ್ಯೆಗಳಿಗೆ ಅದರಲ್ಲೂ ಗರ್ಭಿಣಿಗೆ ಹೆಚ್ಚಿನ ಶಕ್ತಿ ನೀಡುವ ಜೊತೆಗೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಆದರೆ ಹೆಚ್ಚು ತಿನ್ನುವುದರಿಂದ ತೂಕವೂ ಹೆಚ್ಚುವ ಕಾರಣ ಗರ್ಭಿಣಿ ಬಯಸಿದ ಎಲ್ಲಾ ಆಹಾರಗಳನ್ನು ತಿನ್ನುವುದು ಸರಿಯಲ್ಲ. ಗರ್ಭಾವಸ್ಥೆಯಲ್ಲಿ ಮಗುವಿನ ಪೋಷಣೆಯನ್ನೂ ತಾಯಿಯ ಆಹಾರವೇ ಪೂರೈಸಬೇಕಾದ ಕಾರಣ ಗರ್ಭಿಣಿ ಹೆಚ್ಚು ಸತ್ವಯುತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಬೇಕು.

ಸಾಮಾನ್ಯವಾಗಿ ಸೇವಿಸಲು ಬಯಕೆ ಮೂಡುವ ಒಂದು ಆಹಾರವೆಂದರೆ ಮಾವಿನ ಹಣ್ಣು. ಬೇಸಿಗೆಯಲ್ಲಿ ಮಾವಿನ ಹಣ್ಣು ಯಥೇಚ್ಛವಾಗಿದ್ದು ಇದರಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಗರ್ಭಿಣಿಗೆ ಹೆಚ್ಚಿನ ಶಕ್ತಿ ನೀಡುವ ಜೊತೆಗೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಬೇಸಿಗೆಯಲ್ಲಿ ಲಭ್ಯವಾಗುವ ಮಾವಿನ ಹಣ್ಣಿನಲಿ ವಿಟಮಿನ್ ಸಿ, ಎ, ಬಿ೬, ಪೊಟ್ಯಾಶಿಯಂ ಹಾಗೂ ಫೋಲಿಕ್ ಆಮ್ಲಗಳೂ ಇವೆ. ಗರ್ಭಿಣಿಗೆ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಬೇಕಾಗಿದ್ದು ಈ ಆವಧಿಯಲ್ಲಿ ಮಾವಿನ ಹಣ್ಣಿನ ಸೇವನೆ ಉತ್ತಮವಾಗಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಗರ್ಭಿಣಿಗೆ ಹೆಚ್ಚಿನ ಶಕ್ತಿ ನೀಡುವ ಜೊತೆಗೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಗರ್ಭಾವಸ್ಥೆಯಲ್ಲಿ ಗರ್ಭಿಣಿಯರು ತಾತ್ಕಾಲಿಕ ಮಲಬದ್ಧತೆಯ ತೊಂದರೆಯನ್ನೂ ಅನುಭವಿಸುತ್ತಾರೆ. ಈ ತೊಂದರೆಯನ್ನು ಮಾವಿನ ಹಣ್ಣಿನ ಸೇವನೆ ನಿವಾರಿಸುತ್ತದೆ. ಈ ಹಣ್ಣಿನಲ್ಲಿರುವ ಕರಗದ ನಾರು ಮಲಬದ್ಧತೆಯಾಗದಂತೆ ತಡೆಯುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಸಾಮಾನ್ಯವಾಗಿ ಗರ್ಭಿಣಿಯರಿಗೆ ಪ್ರಾರಂಭದ ದಿನದಲ್ಲಿ ಹುಳಿ ತಿನ್ನುವ ಮನಸ್ಸಾದರೂ ಎರಡನೆಯ ತಿಂಗಳಿನಿಂದ ಹೆರಿಗೆಯ ಸಮಯದವರೆಗೂ ಸಿಹಿ ತಿನ್ನುವ ಬಯಕೆ ಇರುತ್ತದೆ. ಆದರೆ ಸಿಹಿಪದಾರ್ಥಗಳನ್ನು ಸೇವಿಸುವುದು ಒಳ್ಳೆಯದಲ್ಲ. ಇವುಗಳರಲ್ಲಿರುವ ಹೆಚ್ಚಿನ ಸಕ್ಕರೆ ಗರ್ಭಿಣಿಯ ಆರೋಗ್ಯ ಕೆಡಿಸಬಹುದು ಅಥವಾ ತೂಕವನ್ನು ಅತಿಯಾಗಿ ಹೆಚ್ಚಿಸಬಹುದು. ಬದಲಿಗೆ ಸಿಹಿಯೂ ಆಗಿರುವ ಮಾವಿನ ಹಣ್ಣಿನ ಸೇವನೆಯಿಂದ ಗರ್ಭಿಣಿಯ ಬಯಕೆಯನ್ನೂ ಪೂರೈಸಿದಂತಾಗುತ್ತದೆ ಹಾಗೂ ಅಗತ್ಯ ಪೋಷಕಾಂಶಗಳನ್ನು ನೀಡಿದಂತೆಯೂ ಆಗುತ್ತದೆ. ಒಂದು ವೇಳೆ ಗರ್ಭಿಣಿ ಮಧುಮೇಹಿ ರೋಗಿಯಾಗಿದ್ದರೆ ಮಾವಿನ ಹಣ್ಣಿನ ಪ್ರಮಾಣವನ್ನು ಅತಿ ಕಡಿಮೆ ಸೇವಿಸಬೇಕು. ಏಕೆಂದರೆ ಮಾವಿನ ಹಣ್ಣಿನಲ್ಲಿ ಅತಿ ಹೆಚ್ಚಿನ ಸಕ್ಕರೆ ಅಂಶ ಇರುತ್ತದೆ. ಅಲ್ಲದೇ ನೀವು ಖರೀದಿಸುವ ಹಣ್ಣುಗಳು ನೈಸರ್ಗಿಕ ವಿಧಾನದಿಂದ ಬೆಳೆದವು ಮತ್ತು ಹಣ್ಣಾಗಿರುವಂತಹದ್ದಾಗಿರಬೇಕು.

Leave a Comment